ಸಾಲುಗಳು - 8 (ನನ್ನ ಸ್ಟೇಟಸ್)
ಸಾಲುಗಳು - 8 (ನನ್ನ ಸ್ಟೇಟಸ್)
58
ನಿಜವನ್ನೆ ಹೇಳಿ ಜಗದಿ
ಯಾರು ಸುಖವ ಹೊಂದಿದರು ?
ಕೇಳಿ :
http://www.youtube.com/watch?v=9QqPcmPXHyM
---------------------------------------------------------------------------
59
A Tragedy of Women.....
ಪ್ರಜ್ಞೆ ಇಲ್ಲದೆ ಅಸ್ಪತ್ರೆಯಲ್ಲಿ ಮಲಗಿದ್ದ ಗಂಡ ಎಚ್ಚೆತ್ತಾಗ ತನ್ನ ಪಕ್ಕದಲ್ಲಿದ್ದ ಹೆಂಡತಿಯನ್ನು ಕಂಡು ನುಡಿದ..
ನೀನು ನನ್ನ ಎಲ್ಲ ಕೆಟ್ಟಸಮಯದಲ್ಲು ಜೊತೆ ಇದ್ದೀಯ, ನನ್ನ ವ್ಯವಹಾರ ಕೆಟ್ಟು ನಷ್ಟ ಹೊಂದಿದಾಗ, ನನಗೆ ಗುಂಡು ತಗಲಿ ಭಾದೆ ಪಟ್ಟಾಗ, ಬೆಂಕಿ ತಗಲಿ ನಾನು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಾಗ, ನನ್ನ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದಾಗ ನನ್ನ ಸೇವೆ ಮಾಡುತ್ತ. ಈಗಲೂ ನನ್ನ ಬಳಿಯೇ ಇದ್ದೀಯ. ನನಗೆ ಅನ್ನಿಸುತ್ತಿದೆ, ನೀನೆ ನನ್ನ ಈ ಎಲ್ಲ ದುರಾದೃಷ್ಟಕ್ಕೂ ಕಾರಣ , ನಿನ್ನ ಇರುವಿಕೆಯೆ ನನ್ನ ಪಾಲಿಗದು ಕೆಟ್ಟ ನಕ್ಷತ್ರ...........
(ಬಾಷಾಂತರವಲ್ಲ ಭಾವಾಂತರ)
------------------------------------------------------------------------------------------
60
ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ಓಡಾಡುವುದು
ದೊಡ್ಡ ದೊಡ್ಡ ವಿಷಯಗಳನ್ನು ಸಣ್ಣದು ಮಾಡಿ ನಿರ್ಲಕ್ಷಮಾಡುವುದು
ಸಾಮಾನ್ಯ ಅಭ್ಯಾಸ ಎಲ್ಲರದೂ .
--------------------------------------------------------------------------------------------
61
ಅವನು : ಕೆಂಪಗಿರೋದು , ಟ್ರಿಂಗ್ ಟ್ರಿಂಗ್ ಅಂತ ಶಬ್ದ ಮಾಡೋದು ಏನು ?
ಇವನು : ಟೆಲಿಫೋನ್
ಅವನು : ತಪ್ಪು ಉತ್ತರ , ಸರಿಯಾದ ಉತ್ತರ ’ಟಮೋಟ"
ಇವನು: ಅದು ಹೇಗೆ ಸಾದ್ಯ, ಅದು ಶಬ್ದ ಎಲ್ಲಿ ಮಾಡುತ್ತೆ
ಅವನು : ನಿನ್ನ ಕನ್ ಫ್ಯೂಸ್ ಮಾಡೋಕ್ಕೆ ಸುಮ್ಮನೆ ಟ್ರಿಂಗ್ ಟ್ರಿಂಗ್ ಶಬ್ದ ಸೇರಿಸಿದೆ !!!!
----------------------------------------------------------------------------------------
62 . ಕವನ :)
ಪುಸ್ತಕ ಬಿಡುಗಡೆ ಎಂದರೆ
==============
ಪುಸ್ತಕ ಬಿಡುಗಡೆ ಎಂದರೆ..
ಯಾರು ಯಾರು ಪರಿಚಿತ ಮುಖ ಎನ್ನುತ್ತ
ಒಳಹೋಗಿ ಹುಡುಕುವುದು..
ಕರೆದವರಿಗೊಂದು ಕರತಾಡನ
ಒಂದಿಷ್ಟು ರವೆಯ ಉಪ್ಪಿಟ್ಟು
ಒಂದು ಕಪ್ ಬೆಚ್ಚನೆಯ ಕಾಫಿ
ಒಂದಾಕಳೀಕೆಯ ಬಾಷಣ
ದಸರಾ ಬರುವಾಗ ದ್ವಿಚಕ್ರಿಯನ್ನು
ಸರ್ವೀಸ್ಗೆ ಕೊಡಲುಹೋಗುವಾಗ
ಡಿಕ್ಕಿಯನ್ನು ತೆಗೆದು
"ಅಯ್ಯೋ ಇಲ್ಯಾವುದೋ ಪುಸ್ತಕವಿದೆಯೆ!"
ಎಂದು ಉಲಿಯುವ ಪುಸ್ತಕ ಪ್ರೇಮಿಗಳ ಉದ್ಗಾರ.
ಚಿತ್ರ ಮೂಲ :https://fbcdn-sphotos-a-a.akamaihd.net/hphotos-ak-prn2/t1.0-9/p320x320/1...
Comments
ಉ: ಸಾಲುಗಳು - 8 (ನನ್ನ ಸ್ಟೇಟಸ್)
ಪಾರ್ಥರೆ, ಎಲ್ಲಾ ಸ್ಟೇಟಸ್ಗಳೂ ಚೆನ್ನಾಗಿದೆ. ಪುಸ್ತಕ ಬಿಡುಗಡೆ ಕವನ ಸೂಪರ್.