ಸಾಹಸಸಿಂಹ - ದಿ ಜಂಗಲ್ ಅಡ್ವೆಂಚರ್ : ಪುಸ್ತಕ ವಿಮರ್ಶೆ : ಡಾ । ವಿಷ್ಣುವರ್ಧನ್ ಗೆ ಅರ್ಪಣೆ

ಸಾಹಸಸಿಂಹ - ದಿ ಜಂಗಲ್ ಅಡ್ವೆಂಚರ್ : ಪುಸ್ತಕ ವಿಮರ್ಶೆ : ಡಾ । ವಿಷ್ಣುವರ್ಧನ್ ಗೆ ಅರ್ಪಣೆ

ಚಿತ್ರ

ಪುಸ್ತಕ: ಸಾಹಸಸಿಂಹ - ದಿ ಜಂಗಲ್ ಅಡ್ವೆಂಚರ್ 
ಕಥೆ: ಸಹಿಲ್ ರಿಜ್ವಾನ್
ಸಂಪಾದಕರು : ಕೀರ್ತಿ  
ಬೆಲೆ : ೫೦ ರುಪಾಯಿ/-
 
ಆಂಗ್ಲ ಭಾಷೆಯ ಪುಸ್ತಕ ವಿಮರ್ಶೆ ಸಂಪದದಲ್ಲಿಯೇ ಎಂದು ಯೋಚಿಸುತ್ತಿದ್ದೀರಾ?  ಮಕ್ಕಳ ಹಾಸ್ಯ ಚಿತ್ರ ಪುಸ್ತಕಗಳು ಅನೇಕವಿದೆ. ಪರಭಾಷೆಯಲ್ಲಿ ಪ್ರಸಿದ್ಧವಾಗಿರೋ ಈಗಿನ ಕೆಲವು ನಟರು ಇಂತಹ ಪ್ರಯೋಗಗಳು ಮಾಡಿದ್ದಾರೆ. ಆದರೆ ನಮ್ಮ ಸಾಹಸಸಿಂಹ ವಿಷ್ಣುವರ್ಧನ್ ರವರ ನೆನಪಿನಲ್ಲಿ ಒಂದು ಕಾಮಿಕ್ ನೋಡಿ ಅತಿ ಆನಂದವಾಯಿತು. ಕಳೆದ ವರುಷ ಇದರ ಬಿಡುಗಡೆಯ ಸುದ್ದಿ ಕೇಳಿದ್ದರೂ, ಸಾಮಾನ್ಯ ಪುಸ್ತಕ ಅಂಗಡಿಗಳ ಭಂಡಾರದಲ್ಲಿ ಕಾಣಿಸಿರಲಿಲ್ಲ. ಹೊಸ ವರುಷದಲ್ಲಿ ಅತಿ ಉತ್ಸಾಹ ತಂದ ಪುಸ್ತಕ ಡಿಟೆಕ್ಟಿವ್ ಸಾಹಸಸಿಂಹ. 
 
ಪುಸ್ತಕದಲ್ಲಿಯೂ ನಾಯಕ ನಟನಾಗಿ ವಿಷ್ಣುವರ್ಧನ್ ರವರು ಕೂಡ ನಮ್ಮ ಸಂಪದದ ಗಣೇಶ್ ಅವರು ಇಲಿಯೊಂದಿಗೆ ಮಾಡಿದ ಸಾಹಸದಂತೆ ಅನೇಕ ಸಾಹಸಗಳನ್ನು ಮಾಡುತ್ತಾರೆ. [ಲೇಖನ http://sampada.net/blog/%E0%B2%97%E0%B2%A3%E0%B3%87%E0%B2%B6/21/02/2011/30573] . 
ಕಥೆಯಲ್ಲಿ ಭಾರತಿಯವರೂ ಕಾಣಿಸಿಕೊಂಡು, ಡಾ।।ಅವರ ಮೊಮ್ಮಕ್ಕಳು ಶ್ಲೋಕ ಹಾಗು ಜ್ಯೇಷ್ಠರ ಬುದ್ಧಿವಂತಿಕೆಯ ಕುರಿತು ಪ್ರಸಂಗಗಳಿವೆ.  ಈ ಪುಸ್ತಕದ ವಿವಿಧ ಭಾಗಗಳು ಇವೆ.  "ಕಾಡಿನ ಸಾಹಸ" ಪುಸ್ತಕದಲ್ಲಿ ಬೀದಿ ನಾಯಿ ಕಳುವು ಹಾಗು ಕಳ್ಳರನ್ನು ಹಿಡಿಯಲು ಕಾಡಿನಲ್ಲಿ ಸಾಹಸಸಿಂಹ ಮಾಡಿದ ಸಾಹಸಗಳು, ಪ್ರಾಣಿಗಳ ಬಗ್ಗೆ ಪ್ರೀತಿ, ಜನರ ಬಗ್ಗೆ ಒಲವು, ಹೀಗೆ ನೀತಿ ಕಥೆಗಳ ಪೈಕಿ ಸೇರುವಂತಹ ಲಕ್ಷಣಗಳನ್ನೂ ಹೊಂದಿದೆ. ಆಂಗ್ಲ ಭಾಶೆಯಲ್ಲಿರುವುದರಿಂದ, ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯೋಗಗಳಲ್ಲಿ, ಕನ್ನಡದವರ ಬಗ್ಗೆ ತಿಳಿಸುವ, ಪ್ರಭಾವಿ ಕನ್ನಡಿಗರ ಬಗ್ಗೆ ಮಾಹಿತಿ ನೀಡುವಲ್ಲಿಯೂ ಯಶಸ್ಸು ಕಾಣುವಂತಹ ಪ್ರಯೋಗ. 
 
ಬಾಲಮಂಗಳ, ತುಂತುರು ಕೊಳ್ಳುವಾಗ ಪುಟಾಣಿಗಳಿಗೆ, ಈ ಪುಸ್ತಕದ ಪ್ರತಿಯೂ ಒಂದು ಕೊಂಡು ಇತರರೊಂದಿಗೆ ಹಂಚಿಕೊಳ್ಳುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಸಿನಿಮಾ ನೋಡಿದಷ್ಟೇ ಉತ್ಸಾಹದಿಂದ ಕಥೆ ಮುಂದೆ ಹೋಗುವುದರಿಂದ ಎಲ್ಲರ ಮನೆಯಲ್ಲೂ ಎತ್ತಿಟ್ಟುಕೊಳ್ಳಬೇಕಾದಂತ ಪ್ರತಿ. ದಿಲೀಪ್ ಕದಂ ಅವರ ಚಿತ್ರ ಸಂಯೋಜನೆಯೊಂದಿಗೆ ಅನಿರುಧ್ ಅವರ ಸೃಜನಶೀಲತೆಯು ಸೇರಿ, ಕನ್ನಡದವರ ಕೀರ್ತಿ ಹೊಗಳುವ ಒಂದು ಒಳ್ಳೆಯ ಪ್ರಯತ್ನ. 

Rating
No votes yet