ಸಾಹಿತಿಗಳ ವೈಚಾರಿಕ ಜಗಳ

ಸಾಹಿತಿಗಳ ವೈಚಾರಿಕ ಜಗಳ

ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.
ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ ನಮ್ಮ ಕನ್ನಡವನ್ನು ಶ್ರೀಮಂತಗೊಳಿಸಿದವು ಎಂಬುದನ್ನು.

ಒಂದು ದಂತ ಕಥೆಯ ಪ್ರಕಾರ ಆಗಿನ ಕಾಲದ ವಿಜಯನಗರದ ಸಾಮಂತ(?)ದೊರೆ ಪ್ರೌಢದೇವರಾಯನು ಚಾಮರಸ ಮತ್ತು ಕುಮಾರವ್ಯಾಸನಿಗೆ 'ಮಹಾಭಾರತ'ವನ್ನು ಕನ್ನಡದಲ್ಲಿ ಬರೆಯಲು ಹೇಳಿದಾಗ, ಇಬ್ಬರು ತಮ್ಮದೇ ರೀತಿಯಲ್ಲಿ ಮಹಾಭಾರತದ ಕೆಲವು ಭಾಗಗಳನ್ನು ಕಾವ್ಯದಲ್ಲಿ ರಚಿಸುತ್ತಾರೆ. ಅದನ್ನು ಪಂಡಿತೋತ್ತಮರು ವಿಮರ್ಶಿಸಿ ಚಾಮರಸನ ಕಾವ್ಯ ರಸವತ್ತಾಗಿದೆಯೆಂದು ತೀರ್ಪು ಕೊಡುತ್ತಾರೆ. ಇದರಿಂದ ಕುಮಾರವ್ಯಾಸನಿಗೆ ಮುಖಭಂಗವಾದಂತಾಗಿ ಆತನು ತನ್ನ ಮಡದಿಯ(ಈಕೆ ಚಾಮರಸನ ತಂಗಿ) ಜೊತೆಗೆ ಹೇಳಿಕೊಂಡಾಗ ಅವಳು'ಪತಿಭಕ್ತಿ'ಯನ್ನು ಮೆರೆದು ತನ್ನ ಅಣ್ಣನ ಕೃತಿಯನ್ನೇ ಸುಟ್ಟು ಹಾಕುತ್ತಾಳೆ. ಇದರಿಂದ ವ್ಯಸನಗೊಂಡ ಚಾಮರಸ ಗದುಗನ್ನು ಬಿಟ್ಟು ವೀರಶೈವ ಧರ್ಮದ ದೀಕ್ಷೆ ಪಡೆದು ನಂತರ 'ಪ್ರಭುಲಿಂಗ ಲೀಲೆ'ಎಂಬ ವಿಭಿನ್ನ ಕಾವ್ಯವನ್ನು ರಚಿಸುತ್ತಾನೆ. ಇದರ ಉತ್ಕೃಷ್ಟತೆಯನ್ನು ಮನಗಂಡ ಇತರ ಭಾಷೆಗಳ ಕವಿಗಳು(ತೆಲುಗು, ಮರಾಠಿ) ತಮ್ಮ ಭಾಷೆಗಳಿಗೆ ಭಾಷಾಂತರಿಸಿಕೊಂಡಿದ್ದಾರೆ.

ಏನೇ ಆದರೂ ಇವರಿಬ್ಬರ ಆರೋಗ್ಯಕರ ಪೈಪೋಟಿಯಿಂದ ಕನ್ನಡಕ್ಕೆ ವಿಭಿನ್ನ ಕಾವ್ಯಸಿರಿಗಳು ಒದಗಿದವು.
 
ಆಸಕ್ತರು 'ಪ್ರಭುಲಿಂಗಲೀಲೆ'  ಸಂಪಾದಿತ ಕೃತಿಗಳನ್ನು ,  ಪಡೆಯಬಹುದು.

-ಜೈ ಕರ್ನಾಟಕ

Rating
No votes yet