ಸಾಹಿತ್ಯ ಸಮ್ಮೇಳನ
ಸಾಹಿತ್ಯ ಸಮ್ಮೇಳನ ( ನನ್ನ ೫೦ ನೆಯ ಕವಿತೆ )
ಊರಿನೆಲ್ಲಾ ದಾರಿಗಳು ಕರೆದೊಯ್ದವು ಒಂದೆಡೆಗೆ
ಎಲ್ಲಾ ಹಾದಿಗಳು ಸೇರುತ್ತಿದ್ದವು ಸಮ್ಮೇಳನದೆಡೆಗೆ
ಹಾದಿಯ ಉದ್ದಕ್ಕೂ ಸವಿದದ್ದು ಕನ್ನಡದ ಕಂಪು
ಅಂದಿನ ಕನ್ನಡದ ಹಬ್ಬ ನೀಡಿತ್ತು ಕಣ್ಣಿಗೆ ತಂಪು
ಕನ್ನಡ ರಾಜ ಕುಟುಂಬಕ್ಕಂದು ಭವ್ಯ ಸುಸ್ವಾಗತ
ಕನ್ನಡಿಗರ ಸ್ವಾಗತಿಸಿ ವೇದಿಕೆಯತ್ತ ಕರೆತರುತ
ಸಂಭ್ರಮಕೆ ಸಜ್ಜಾಗಿತ್ತಂದು ಸಾಹಿತ್ಯ ಸಮ್ಮೇಳನ
ಅಂದು ಊರಿನೆಲ್ಲೆಡೆ ಪಸರಿಸಿತ್ತದು ಕನ್ನಡತನ
ಅಧ್ಯಕ್ಷರ ಭಾಷಣ ನೀಡಿತ್ತು ಉತ್ಸವಕೆ ಚಾಲನೆ
ಮಹಿಳ, ಮಕ್ಕಳ ಸಾಹಿತ್ಯ ನೀಡಿದ್ದವು ಪೋಷಣೆ
ತಂದಿತ್ತು ಕವಿಗಳ ಕವಿಗೋಷ್ಠಿ ಸಮ್ಮೆಳನಕೆ ಕಳೆ
ಕಾವ್ಯಗಳ ಗಾಯನ ತಂದಿತು ಸಂತಸದ ಹೊಳೆ
ಕನ್ನಡ ಸ್ಥಿತಿಯ ಒಳನೋಟವಿತ್ತು ಸಂವಾದದಲ್ಲಿ
ಸಮಾನಾಂತರ ಗೋಷ್ಠಿ ನಡೆದವು ಬೇರೆಡೆಯಲ್ಲಿ
ಇನ್ನೊಂದು ಆಕರ್ಷಣೆಯಾಗಿತ್ತು ಪುಸ್ತಕದ ಮಳಿಗೆ
ಮಳಿಗೆಗಳು ತುಂಬಿದ್ದವು ಸಾಹಿತ್ಯಾಸಕ್ತರ ದಾಳಿಗೆ
ನೆಚ್ಚಿನ ಹಾಸ್ಯ ಸಂವೇದನೆಯಿತ್ತು ಕೊನೆಯ ದಿನ
ಅಂದೇ ಕನ್ನಡದ ಮಹನೀಯರಿಗೆ ಸನ್ಮಾನದ ದಿನ
ಹಾಗೆಯೇ ತೆರೆ ಕಂಡಿತು ಕನ್ನಡ ಸಾಹಿತ್ಯ ಉತ್ಸವ
ಎಲ್ಲಾ ಸಾಹಿತ್ಯ ಪ್ರಿಯರಿಗೆ ಕೊಡುತ ನವ ಉತ್ಸಾಹ
- ತೇಜಸ್ವಿ.ಎ.ಸಿ
Comments
ಉ: ಸಾಹಿತ್ಯ ಸಮ್ಮೇಳನ
In reply to ಉ: ಸಾಹಿತ್ಯ ಸಮ್ಮೇಳನ by Jayanth Ramachar
ಉ: ಸಾಹಿತ್ಯ ಸಮ್ಮೇಳನ
ಉ: ಸಾಹಿತ್ಯ ಸಮ್ಮೇಳನ
In reply to ಉ: ಸಾಹಿತ್ಯ ಸಮ್ಮೇಳನ by gopaljsr
ಉ: ಸಾಹಿತ್ಯ ಸಮ್ಮೇಳನ
ಉ: ಸಾಹಿತ್ಯ ಸಮ್ಮೇಳನ
In reply to ಉ: ಸಾಹಿತ್ಯ ಸಮ್ಮೇಳನ by kavinagaraj
ಉ: ಸಾಹಿತ್ಯ ಸಮ್ಮೇಳನ