ಸಿ.ಇ.ಟಿ ಎಂಬ ಮಾಯಜಿಂಕೆಯ ಬೆನ್ನು ಹತ್ತಿ - ಒಂದು ವರದಿ

ಸಿ.ಇ.ಟಿ ಎಂಬ ಮಾಯಜಿಂಕೆಯ ಬೆನ್ನು ಹತ್ತಿ - ಒಂದು ವರದಿ

                                                   

ಪಿ.ಯು.ಸಿ. ಮುಗಿಸಿ  ಮೆಡಿಕಲ್ , ಇಂಜಿನೀಯರಿಂಗ್ ಕೋರ್ಸ್ ಗಳನ್ನು ಇಷ್ಟಪಡುವ ಮಕ್ಕಳ ತಂದೆತಾಯಿಯರಿಗೆ  ಪರೀಕ್ಷಾನಂತರದ ಆಗುಹೋಗುಗಳಲ್ಲಿ ಸಾಕಷ್ಟು ಧಾವಂತ ಹಾಗು ಮಾನಸಿಕ ಒತ್ತಡ. ಇಂತಹ ಸಂದರ್ಭದಲ್ಲಿ ಸಾಮನ್ಯವಾಗಿ ಎಲ್ಲರು ಕೇಳಲೆ ಬೇಕಾದ ಪದ "ಸಿ.ಇ.ಟಿ." . ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಗ ಸಂಸ್ಥೆಯಾದ ಸಿ.ಇ.ಟಿ, ವಿಧ್ಯಾರ್ಥಿಗಳಿಗೆ ಮೆಡಿಕಲ್ ಹಾಗು ಇಂಜಿನೀಯರಿಂಗ್ ಕೋರ್ಸ್ ಗಳಿಗಾಗಿ ಪ್ರವೇಶ ಪರೀಕ್ಷೆಗಳನ್ನು ನಡೆಸುವ, ನಂತರ , ಪ್ರವೇಶ ಪರೀಕ್ಷೆಯ ಅಂಕಗಳ ಜೊತೆ ಪಿ.ಯು.ಸಿ. ಪರೀಕ್ಷೆಯ ಅಂಕಗಳನ್ನು ಸೇರಿಸಿ ರಾಂಕ್ ವಿತರಿಸುವ, ಕೌನ್ಸಿಲಿಂಗ್ ಮೂಲಕ ಕರ್ನಾಟಕದ ಎಲ್ಲ ಕಾಲೇಜುಗಳಿಗೆ ವಿಧ್ಯಾರ್ಥಿಗಳ ಆಯ್ಕೆಯ ಮೇರೆಗೆ ಸೀಟ್ ಗಳನ್ನು ವಿತರರಿಸುವ ಕೆಲಸವನ್ನು ಸುವ್ಯವಸ್ಥಿತ ವಾಗಿ ಪ್ರತಿವರ್ಷ ನಡೆಸಿದೆ.


ಸಾಮಾನ್ಯವಾಗಿ ಸರ್ಕಾರಿ ವ್ಯವಸ್ಥೆಯೆಂದರೆ ಸರಿಇರುವದಿಲ್ಲ ಎಂದೆ ಸದಾ ಮನದಲ್ಲಿ ಪೂರ್ವಾಗ್ರಹವನ್ನೆ ಹೊಂದಿರುವ ವಾತವರಣದಲ್ಲಿ , ರಾಜಕಾರಣಿಗಳು, ಹಾಗು ಖಾಸಗಿ ಕಾಲೇಜುಗಳ ವರ್ಗ  ಈ ಸಂಸ್ಥೆಯನ್ನು ತಮ್ಮ ಸ್ವಾರ್ಥದ ಕಾರಣಗಳಿಗೋಸ್ಕರ ಸಾಕಷ್ಟು ನಿತ್ರಾಣಗೊಳಿಸಿದರು ಸಹ, ತನ್ನ ಪರಿಮಿತ ಮೂಲಗಳಿಂದ ಸುವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ತನ್ನ ಕೆಲಸಗಳನ್ನು ನಿರ್ವಹಿಸುತ್ತ ಎಲ್ಲರ ಮೆಚ್ಚುಗೆ ಗಳಿಸಿದೆ. ಇಲ್ಲಿ ಬರುವಾಗ ವಿಧ್ಯಾರ್ಥಿಗಳು ಮತ್ತು ಅವರ ಪೋಷಕರು ಸಾಕಷ್ಟು ಆತಂಕದಲ್ಲಿಯೆ ಬರುತ್ತಾರೆ, ಆದರೆ ಇಲ್ಲಿ ಯಾವುದೆ ಗಲಿಬಿಲಿ ಇಲ್ಲದೆ ನಡೆಯುವ ಕೆಲಸಗಳನ್ನು ನೋಡುವಾಗ ಸಮಾದಾನ ಪಡುತ್ತಾರೆ.

 ಇಲ್ಲಿನ ಬರುವ ಪಾಲಕರು ಹಾಗು ವಿಧ್ಯಾರ್ಥಿಗಳು , ತಮ್ಮ ಆಯ್ಕೆಯ ಕಾಲೇಜನ್ನು ಪಡೆಯಲು ನಾಲಕ್ಕು ಹಂತಗಳಲ್ಲಿ ಸಹಕರಿಸಬೇಕಾಗಿರುತ್ತೆ.


 

                                                                   ಮೊದಲ ಹಂತ : ಹೊರಗಡೆಯಿಂದ

                                                                                               ಮೊದಲ ಹಂತ : ಹೊರಗೆ ಕಾಯುತ್ತಿರವ ವಿಧ್ಯಾರ್ಥಿ/ಪೋಷಕರು

 

 ಮೊದಲಿಗೆ ನಮಗೆ ನಿಗದಿಪಡಿಸಿರುವ ದಿನ ಹಾಗು ಕಾಲಕ್ಕೆ ಒಂದು ಗಂಟೆ ಮುಂಚಿತವಾಗಿ ಬಂದು, ತಮ್ಮ ಹಾಜರಿ ಖಚಿತಪಡಿಸಬೇಕು, ಮೊದಲಲ್ಲಿ ಕಟ್ಟಡದ ಹೊರಬಾಗದಲ್ಲಿ , ಒಟ್ಟಿಗೆ ನೂರಾರು ಜನರ ಜೊತೆ  ಕುಳಿತುಕೊಂಡು ತಮ್ಮ ರಾಂಕ್ ಸರದಿಗಾಗಿ ಕಾಯಬೇಕು, ಹಾಗಂತ ಕಾಯಲು ಸ್ವಲ್ಪವು ಬೇಸರ ಎನಿಸುವದಿಲ್ಲ. ಮುಂಬಾಗದಲ್ಲಿ ಬೃಹುತ್ ಗಾತ್ರದ ಪರದೆಗಳನ್ನು ಅಳವಡಿಸಿದ್ದು, ಅಲ್ಲಿ ಒಳಗೆ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಸತತವಾಗಿ ತೋರಿಸುತ್ತು ಇರುತ್ತಾರೆ, ಕಾಲೇಜುಗಳು , ಉಳಿದಿರುವ ಸೀಟಗಳ ವಿವರ, ರಿಸರ್ವೇಶನ್ ವಿವರ, ಯಾವ ಅಭ್ಯರ್ಥಿ ಯಾವ ಕಾಲೇಜು ಆಯ್ಕೆ ಮಾಡಿದ, ಮುಂತಾದ ವಿವರಗಳನ್ನು ಹೊರಗೆ ಕುಳಿತು ವೀಕ್ಷಿಸಬಹುದು. ಕುಡಿಯಲು ನೀರಿನ   ವ್ಯವಸ್ಥೆಮಾಡಿದ್ದು, ಮಳೆ ಬಿಸಿಲಿನಿಂದ ರಕ್ಷಣೆಯಿದೆ. ಅಲ್ಲಿಂದ ನೂರು ನೂರು ಜನರನ್ನು ಒಳಗೆ ಕರೆಯುತ್ತಾರೆ. ವಿಧ್ಯಾರ್ಥಿಗಳ ಜೊತೆ ಒಬ್ಬ ಪೋಷಕ ಮಾತ್ರ ಹೋಗಲು ಮಾತ್ರ ಅವಕಾಶವಿದೆ.

 

                                                                                                               ಎರಡನೆ ಹಂತ : ಹಾಜರಿಯ ನೊಂದಣಿ


                                                                               ಎರಡನೆ ಹಂತ: ಹಾಜರಿಯನ್ನು ನೊಂದಾಯಿಸಲು ಕಾಯುತ್ತಿರವವರು


ಎರಡನೆ ಹಂತ, ದೊಡ್ಡ ಹಾಲಿನಲ್ಲಿ ಎಲ್ಲರು ಕುಳಿತಿರುವ ವ್ಯವಸ್ಥೆ ಇದ್ದು, ಇಲ್ಲಿ ಸಹ ಆಯ್ಕೆ ಪ್ರಕ್ರಿಯೆಯ ವಿವರ ಸದಾ ಎದುರಿನ ಬೃಹತ್ ಗಾತ್ರದ ಪರದೆಗಳಲ್ಲಿ ಬಿತ್ತರವಾಗುತ್ತಿರುತ್ತದೆ, ಈ ಹಂತದಲ್ಲಿ, ವಿಧ್ಯಾರ್ಥಿಗಳು ಅವರು ಕೊಡುವ ಫಾರ್ಮ ನಲ್ಲಿ ತಮ್ಮ ವಿವರಗಳನ್ನೆಲ್ಲ ತುಂಬಿ ನಂತರ , ತಮ್ಮ ಹಾಜರಿಯನ್ನು ಕಂಪ್ಯೂಟರನಲ್ಲಿ ನಮೂದಿಸಲು ಅವರಲ್ಲಿ ಕೊಡಬೇಕು, ಈ ಹಂತದಲ್ಲಿ ಜೊತೆಗಿರುವ ಪೋಷಕರು ಒಳಗೆ ಹೋದಲ್ಲಿ ಮೂರನೆ ಹಂತದ ಕೊಟಡಿ ಸಿಗುತ್ತದೆ.

 


                                                                                                            ಮೂರನೆ ಹಂತ: ದಾಖಲೆಗಳ ಪರಿಶೀಲನೆ


                                                                                                ಮೂರನೆ ಹಂತ : ದಾಖಲೆಗಳ ಪರೀಶಿಲನೆ ಹಾಗು ಗ್ರೀನ್ ಕಾರ್ಡ

 

ಮೂರನೆ ಹಂತದಲ್ಲಿ ವಿಧ್ಯಾರ್ಥಿ ತೆಗೆದುಕೊಂಡು ಹೋಗಿರುವ ದಾಖಲೆಗಳ ಪರಿಶೀಲನೆ ಹಾಗು ಜೆರಾಕ್ಸ್ ಪ್ರತಿಗಳನ್ನು ಅವರಿಗೆ ಕೊಡುವುದು, ಇದಕ್ಕಾಗಿ ಎರಡು ಕಾಲಿನ ಸರತಿಸಾಲು ಇರುತ್ತದೆ , ಇಲ್ಲು ಸಹ ನಿಲ್ಲುವಂತಿಲ್ಲ, ಸಾಲು ಸಾಲು ಕುರ್ಚಿಗಳನ್ನು ಹಾಕಿ ಒಬ್ಬರ ನಂತರ ಒಬ್ಬರು ತಮ್ಮ ದಾಖಲೆಗಳನ್ನು ನೀಡಿ , ಅದನ್ನು ಪರಿಶೀಲಿಸದ ನಂತರ ಅವರು ಕೊಡುವ ಹಸಿರು ಕಾರ್ಡ್ ಪಡೆದರೆ ನಂತರ ಕಡೆಯ ಘಟ್ಟ ಆಯ್ಕೆಯ ಕೊಟಡಿಗೆ ತೆರಳಬೇಕು.

 


                                                                                                             ನಾಲ್ಕನೆ ಹಂತ : ಸರದಿಯಂತೆ ಹೋಗಿ ಸೀಟು ಆಯ್ಕೆ


                                                                           ನಾಲ್ಕನೆ ಹಂತ : ತಮ್ಮ ಸರದಿಯಲ್ಲಿ ಸೀಟು ಆಯ್ಕೆಗಾಗಿ ಕಾದಿರುವವರು

  ಸೀಟು ಆಯ್ಕೆಯ ಕೊಟಡಿಗಳಲ್ಲಿ ವಿಧ್ಯಾರ್ಥಿ ಹಾಗು ಪೋಷಕರು ಕುಳಿತು ಕಾಯುತ್ತ ತಮ್ಮ ಎದುರಿಗೆ ಕಾಣುವ ದೊಡ್ಡ ಪರದೆಗಳಲ್ಲಿ ಲಬ್ಯವಿರುವ ಸೀಟುಗಳ ಮಾಹಿತಿ ನೋಡುತ್ತಿರ ಬಹುದು. ಅವರ ಸರದಿ ಕರೆದಾಗ ಹೋಗಿ ತಮ್ಮ ಆಯ್ಕೆಯ ಕಾಲೇಜು ಹಾಗು ಓದಲು ಇಷ್ಟವಿರುವ ಬ್ರಾಂಚ್ ತಿಳಿಸಿ ತಮ್ಮ ಆಯ್ಕೆಯನ್ನು ಕಂಪೂಟರಿನಲ್ಲಿ ನಮೂದಿಸಿದರೆ, ಆಯ್ಕೆಯ ಪ್ರಕ್ರಿಯೆ ಮುಗಿಯಿತು. ಇಲ್ಲಿ ಒಂದು ಬಾರಿಗೆ ಆರು ಎಂಟು ವಿದ್ಯಾರ್ಥಿಗಳನ್ನು ಒಟ್ಟೊಟ್ಟಿಗೆ ಕರೆಯಲಾಗುತ್ತೆ. ನೀವು ನಿಮ್ಮ ಆಯ್ಕೆ ಖಚಿತಗೊಳಿಸುವ ತನಕ ನಿಮ್ಮ ಮುಂದಿನ ರಾಂಕಿನ ಅಭ್ಯರ್ಥಿ ತನ್ನ ಆಯ್ಕೆ ಮಾಡುವಂತಿಲ್ಲ.

ನಂತರ ಪೋಷಕರನ್ನು ಹೊರಗೆ ಕಳಿಸಿ ಕಾಯಲು ತಿಳಿಸಲಾಗುತ್ತೆ, ಆಗ ವಿಧ್ಯಾರ್ಥಿ ತಾನು ಆರಿಸಿದ ಕಾಲೇಜಿನ ಅನುಸಾರ ಪೀಯನ್ನು ಕೌಂಟರಿನಲ್ಲಿ ತುಂಬಿ, ಅವರು ಕೊಡುವ ಕಾಲೇಜಿನ ಅಲಾಟ್ ಮೆಂಟ್ ಪತ್ರವನ್ನು ಪಡೆದು ಹೊರಬರಲು ಅಬ್ಬಬ್ಬ ಅಂದರೆ ಐದು ನಿಮಿಷಗಳು, ಆ ಸಮಯದಲ್ಲಿ ತಂದೆ ತಾಯಿ ಪೋಶಕರು ಹೊರಗೆ ನಿಂತು ತಮ್ಮ ಆತಂಕವನ್ನೆಲ್ಲ ನಿವಾರಿಸಿಕೊಳ್ಳ ಬಹುದು.

 ನಂತರ ಇದ್ದೆ ಇದೆ ಎಲ್ಲರಿಗೆ ಕಾಲ್ ಮಾಡುವುದು, ಕಂಗ್ರಾಟ್ಸ್, ಥ್ಯಾಂಕ್ಸ್ ವಿನಿಮಯ, ನಂತರ ಹುಡುಗರು/ಹುಡುಗಿಯರು ಸುಮ್ಮನಿರುತ್ತಾರ ??  ಏನಾದರು ತಿನ್ನ ಬೇಕೆನ್ನುತ್ತಾರೆ, ಯಾವುದಾದರು ಹೋಟೆಲ್ಗೆ ಹೋಗಿ ಅವರು ಕೇಳಿದ್ದನ್ನು ಕೊಡಿಸಿ, ನೀವು ಇಡ್ಲಿ ತಿಂದು ಕಾಫಿ ಕುಡಿದರೆ. "ಸಿ.ಇ.ಟಿ." ಎಂಬ ಮಾಯಜಿಂಕೆಯ ಪಾತ್ರ ಮುಗಿಯಿತು.

 ಕಡೆಯಲ್ಲಿ ಮನಸಲ್ಲಿ ನಿಲ್ಲುವುದು ಒಂದೆ, ಲಕ್ಷ ಲಕ್ಷ ವಿಧ್ಯಾರ್ಥಿಗಳ ಆಯ್ಕೆಯ ಪ್ರಕ್ರಿಯೆಯನ್ನು ಅತ್ಯಂತ ಮುತುವರ್ಜಿಯಿಂದ ಸುವ್ಯವಸ್ಥೆಯಿಂದ ನಡೆಸುವ ಅಲ್ಲಿಯ ಅಧಿಕಾರಿ/ಕೆಲಸಗಾರರ ಪರಿ

ಚಿತ್ರಗಳು :   ೭-ಸೆಪ್ತೆಂಬರ್ -೨೦೧೧ ರಂದು ಮೊಬೈಲ್ ನಿಂದ ತೆಗೆದಿದ್ದು

 

Rating
No votes yet

Comments