ಸಿ.ಇ.ಟಿ. ಸುಲಭವಿರಲಿ.
ಕಾಮೆಡ್ ಕೆ ಪರೀಕ್ಷೆ ಮುಗಿದಿದೆ. ನಾಳೆ(೯-೫-೦೭) ಸಿ.ಇ.ಟಿ. ಪರೀಕ್ಷೆ ನಡೆಯುವುದು.
ಪಿ.ಯು.ಸಿ. ಓದುವ ಮಕ್ಕಳು ಅದಕ್ಕೆ ಸಮನಾಗಿ ಈ ಪರೀಕ್ಷೆಗಳಿಗೂ ತಯಾರಿ ನಡೆಸಬೇಕು.
ಕಾಮೆಡ್ ಕೆ ಪರೀಕ್ಷೆ ಮುಗಿಸಿ ಬಂದ ಮಕ್ಕಳ ಮುಖ ನೋಡಿ ನನಗೆ ಸಂಕಟವಾಯಿತು.
ವರ್ಷ ಪೂರ್ತಿ ಹಗಲೂ ರಾತ್ರಿ ಕ್ಲಾಸ್,ಟ್ಯೂಷನ್,ಹೋಮ್ ವರ್ಕ್ ಎಂದು ನಿದ್ರೆ ಬಿಟ್ಟು
ಒದ್ದಾಡಿ ಓದಿದ ಮಕ್ಕಳು ಸಪ್ಪೆ ಮೋರೆಯಲ್ಲಿ ಫಿಸಿಕ್ಸ್,ಮ್ಯಾತ್ಸ್ ಸ್ವಲ್ಪ ಟಫ ಇತ್ತು
ಎಂದಾಗ ಅವರ ಸಮಾಧಾನಕ್ಕೆ"ಆದದ್ದಾಯಿತು.ಇದನ್ನು ಮರೆತುಬಿಡಿ. ಸಿ.ಇ.ಟಿ.ಗೆ
ತಯಾರಿ ನಡೆಸಿ" ಎಂದೆ.
ಹಿಂದೆ ತಂದೆ ತಾಯಿಯ ಒತ್ತಾಯಕ್ಕೆ ಮಕ್ಕಳು ಡಾಕ್ಟ್ರ್ಓ,ಇಂಜಿನಿಯರೋ ಓದುತ್ತಿದ್ದರು.
ಈಗಿನ ಮಕ್ಕಳು ತಾವು ಇಂಥದ್ದೇ ಕಲಿಯಬೇಕೆಂದು ಮೊದಲೇ ತೀರ್ಮಾನಿಸಿರುತ್ತಾರೆ.
ಅಂಥಾ ಮಕ್ಕಳ ಪ್ರಯತ್ನಕ್ಕೆ ಸರಿಯಾಗಿ ಸಿ.ಇ.ಟಿ ಪರೀಕ್ಷೆ ಸುಲಭವಾಗಲಿ,ಎಲ್ಲಾ ಮಕ್ಕಳು
ನಗುನಗುತ್ತಾ ಪರೀಕ್ಷಾ ಕೊಠಡಿಯಿಂದ ಹೊರಬರಲಿ ಎಂದು ಹಾರೈಸುತ್ತೇನೆ.
Rating
Comments
ಉ: ಸಿ.ಇ.ಟಿ. ಸುಲಭವಿರಲಿ.
ಉ: ಸಿ.ಇ.ಟಿ. ಸುಲಭವಿರಲಿ.