ಸಿದ್ದರಾಮಣ್ಣ ಪುರಸ್ಕಾರ

ಸಿದ್ದರಾಮಣ್ಣ ಪುರಸ್ಕಾರ

ಬೇಡ ಎನಗೆ ಪುರಸ್ಕಾರ
ಮಾಡುವೆ ನಾನು ತಿರಸ್ಕಾರ
ತಿಳಿಯಬೇಡಿ ಇಲ್ಲವೆಂದೆನಗೆ ಸಂಸ್ಕಾರ
ಇರಲಿ ನಿಮ್ಮ "ಕಾಮೆಂಟು"ಗಳ ಸತ್ಕಾರ
ಆಗಲಿ ನಮ್ಮ ಜೀವನ ಎಲ್ಲರಿಗೂ ಉಪಕಾರ
ಬೆಳೆಸಿ ನಾಡಿನ ಆಚಾರ ವಿಚಾರ ಸದಾಚಾರ
ಮಾನವ ಹುಟ್ಟುವಾಗ ಒಂದು ಆಕಾರ
ಬಿಟ್ಟು ಹೋಗುವಾಗ ಇನ್ನೊಂದು ಆಕಾರ
ಒಯ್ಯುವುದಿಲ್ಲ ಯಾರೂ ಈ ಪುರಸ್ಕಾರ
ಉಳಿಯುವುದು ಒಂದೇ ನೆನಪಿನ ಹಾರ
ಒಲವೇ ಜೀವನ ಸಾಕ್ಷಾತ್ಕಾರ!

 

"ಸರ್ವ ಜೀವಿ ಸರ್ವ ಕಾಲಂ ಸುಖಿನೂಭವಂತು"

 

 

ಇಂತಿ ನಿಮ್ಮ ಕಿರು ಕವಿ

"ಸಿದ್ದರಾಮ ಎನ್.ಕೋರಪಳ್ಳಿ"

 
Rating
No votes yet

Comments