'ಸಿರಿಗನ್ನಡಂ ಗೆಲ್ಗೆ' ಯಲ್ಲಿ ತಮಿಳು ಪ್ರಭಾವ?
ಮೇ ೨೦೦೬ ತುಷಾರ ಹಾಸ್ಯ ವಿಶೇಷಾ?ಕವಾಗಿ ಬಂದಿದೆ. ಅದರೆ ಅದರಲ್ಲಿ ಹಾಸ್ಯವನ್ನು ಹುಡುಕಬೇಕು! ನನಗೆ ಎರಡೇ ಎರಡು ಪುಟ್ಟ ನಗೆಹನಿಗಳು ಸಿಕ್ಕವು!!
ಅದರಲ್ಲಿ ತಮಿಳು ಸಾಹಿತಿ ಅಖಿಲನ್ ಅವರ ಒಂದು ಕಥೆ ಬಂದಿದೆ. ಜತೆಗಿರುವ ತಮಿಳು ಸಾಹಿತ್ಯದ ಕುರಿತಾದ ಚಿಕ್ಕ ಪರಿಚಯಾತ್ಮಕ ಲೇಖನದಲ್ಲಿ ಹೀಗಿದೆ-
' ತಮಿಳು ಸಾಹಿತ್ಯದಿಂದ ಪ್ರಭಾವಿತರಾದ ಬಿ. ಎಂ. ಶ್ರೀ. ಅವರು ತಮ್ಮ ವಿದ್ಯಾರ್ಥಿಗಳಿಗೆ ಪ್ರಾಚೀನ ತಮಿಳು ಕಾವ್ಯಗಳನ್ನು ಓದಿ ವಿವರಿಸುತ್ತಿದ್ದರಂತೆ. ಅವರ 'ಸಿರಿಗನ್ನಡಂ ಬಾಳ್ಗೆ, ಗೆಲ್ಗೆ' ಎಂಬ ಉದ್ಘೋಷಣೆಯಲ್ಲೂ ತಮಿಳಿನ ಪ್ರಭಾವ ಎದ್ದು ಕಾಣುತ್ತದೆ. '
Rating