ಸಿರಿಗನ್ನಡಮ್ ಗೆಲ್ಗೆ !

ಸಿರಿಗನ್ನಡಮ್ ಗೆಲ್ಗೆ !

ಮಾನ್ಯರೆ,
ಸಿರಿಗನ್ನಡಮ್ ಗೆಲ್ಗೆ !
ನಾನು ವ್ರುತ್ತಿಯಲ್ಲಿ ಟೆಕ್ಸ್ಟೈಲ್ ಇಂಜಿನಿಯರು. ಓದಲು ಬರೆಯಲು ನನಗೆ ಬಹಳ ಆಸಕ್ತಿ. ಬಹುಶಃ ನಮ್ಮ ಮನೆಯಲ್ಲಿದ್ದ ವಿಶಾಲ ಪುಸ್ತಕ ಭಂಡಾರ ಒಂದು ಕಾರಣವಾದರೆ, ಇನ್ನೊಂದು ನಮ್ಮ ತಂದೆ, ಅಣ್ಣತಮ್ಮಂದಿರ 'ಬೌಧ್ಧಿಕ ಹಿನ್ನೆಲೆ' ಎಂದರೆ ತಪ್ಪಾಗಲಾರದು. ಎಲ್ಲಾ ಸಾಂಸ್ಕ್ರುತಿಕ ಸಮಾರಂಭಗಳಲ್ಲೂ ಪ್ರೇಕ್ಷಕನಾಗಿ ಪಾಲ್ಗೊಂಡಿದ್ದೇನೆ. ಮುಂಬೈ ಒಂದು ವಿಶಾಲವಾದ ಮಂಚ. ಬೆಂಗಳೂರಿನಲ್ಲಿ ಕೇಳಿರದಿದ್ದ ಮಹಾ ವ್ಯಕ್ತಿಗಳ ಮಾತುಗಳನ್ನು ಇಲ್ಲಿ- ನನ್ನ 40 ವರ್ಷಗಳ ಜೀವನದಲ್ಲಿ ಕೇಳಿದ್ದೇನೆಂದು ಹೇಳಲು ಹೆಮ್ಮೆಯೆನ್ನಿಸುತ್ತಿದೆ ! ಇಂಗ್ಲೀಶಿನಲ್ಲಿ ಒಂದು ಪುಸ್ತಕ, ಬೇರೆ ಬೇರೆ ಲೇಖನಗಳು ನನ್ನ ಸರಿಕಿನಲ್ಲಿವೆ. ಸಂಪದ ಬಳಗಕ್ಕೆ ಬಂದಮೇಲೆ ನನ್ನ ಬರವಣಿಗೆ ಹೆಚ್ಚಾಯಿತೇನೋ. ನಿವ್ರುತ್ತ ನಾಗಿರುವುದೂ ಇದಕ್ಕೆ ಪೂರಕವಾಗಿರಬಹುದು !

ವೆಂಕಟೇಶ.

Rating
No votes yet

Comments