ಸುಂದರ ಸುಳ್ಳಿನ ಯುಗಾದಿ

ಸುಂದರ ಸುಳ್ಳಿನ ಯುಗಾದಿ

ಸುಂದರ ಸುಳ್ಳಿನ ಯುಗಾದಿ


 


ಮೊದಲು


ಯುಗಾದಿ ಎಂದರೆ ರಜೆಯ ಸಂಭ್ರಮ


ಮರಗಳಿಗೆ ಮಾತ್ರವಲ್ಲ ನಮಗೂ ಹೊಸಬಟ್ಟೆ


ಮಾವಿನ ಮರಕ್ಕೆ ಹಗ್ಗ ಕಟ್ಟಿ ಜೋಕಾಲಿಯಾಟ


ಹೋಳಿಗೆ ಊಟ ಬಿರಿಯುವಷ್ಟು ಹೊಟ್ಟೆ


 


ನಂತರ


ಯುಗಾದಿಯೆಂದರೆ ಎಲ್ಲೆಲ್ಲೂ ಬಣ್ಣ ಬಣ್ಣ


ಹಸಿರು ಸೀರೆಯನ್ನುಟ್ಟು ಬಾಗಿ ಬಳುಕುವ ಗಿಡಮರ


ಹೂವುಗಳಂತೆ ಅರಳಿ ಕಿಲ ಕಿಲ ನಗುವ ಚೆಲುವೆಯರು


ಮನಸ್ಸಿನ ತುಂಬ ದುಂಬಿಯ ಝೇಂಕಾರ


 


ಆಮೇಲೆ


ಯುಗಾದಿಯೆಂದರೆ ಮೆಚ್ಚಿದವಳ ಕಣ್ಣ ನೋಟ


ಪಾರವಿಲ್ಲದ ಸುಖಸಾಗರದಲ್ಲಿ ಸ್ವೈರ ವಿಹಾರ


ಕಾಮನ ಬಿಲ್ಲಿನ ಬಣ್ಣಗಳಲ್ಲಿ ಚೈತ್ರದ ಚಿಗುರು


ಕಂದನ ಕೇಕೆ! ಉಗಾದಿಗೆ ಸಂಭ್ರಮ ಅಪಾರ


 


ಈಗ


ಉಗಾದಿಯೆಂದರೆ ಫ್ಯಾನಿಲ್ಲದ ಬಿಸಿಲ ಬೇಗೆ


ಬೆಲ್ಲ ತಿನ್ನಬೇಡ ಮಧುಮೇಹ ಎಚ್ಚರಿಸುತ್ತಿದೆ


ಏರಿದ ಬೆಲೆ ಹೆಚ್ಚದ ಸಂಬಳ ಮೀರಿದ ಖರ್ಚು


ಕಹಿ ಕಳೆದುಕೊಂಡ ಬೇವಿನ ಜೋಲು ಮೋರೆ!


 


ಮುಂದೆ


ಯುಗಾದಿಯೆಂದರೆ ಹೇಳಲಾಗದ ಸಮ್ಮಿಶ್ರ ಭಾವ


ಒಂದು ಹೆಜ್ಜೆ ಹತ್ತಿರವಾಯಿತು ಸಾವಿನಾ ಅರಮನೆ


ಯುಗಾದಿಯ ಸಂಭ್ರಮ ಭೂಮಿಯ ಮೇಲಷ್ಟೆ ಸತ್ಯ


ಪ್ರಕೃತಿಯು ಬರೆದ ಅಚ್ಚ ಸುಳ್ಳಿನ ಸುಂದರ ಕಥೆ


ಆಚೆ ಎಲ್ಲವೂ ಕತ್ತಲು ಶೂನ್ಯ ಕಾಲಕ್ಕಿಲ್ಲ ಅಸ್ತಿತ್ವ


 


                          -ಡಾ.ನಾ.ಸೋಮೇಶ್ವರ

Rating
No votes yet

Comments