ಸುತ್ತಿಗೆಯಿ೦ದಲೂ ಒಡೆಯಲಾಗದೇನೋ!
ಎಷ್ಟು ವಿಶೇಷವಲ್ಲವೆ?
ಹೊಸ ಮನೆ ಕಟ್ಟಿಸ್ತೇವೆ... ಸು೦ದರ ಕಲಾತ್ಮಕ ದಾರ೦ದವನ್ನು ಇಡಿಸ್ತೇವೆ.
ಬೇಸಿಗೆಯಲ್ಲಿ ಸೆಖೆ ಕಣ್ರೀ.. ಏ.ಸಿ ಹಾಕ್ಬಿಡ್ರೀ...
ಆಗ್ನೇಯದಲ್ಲಿ ಗು೦ಡಿ ಬೇಡಾರೀ..
ಮನೆ ಎದುರುಗಡೇನೇ ದನದ ಕೊಟ್ಟಿಗೆ ಕಟ್ಟಬಾರದು..ರೀ!
ಹೂ೦.. ವಾಸ್ತು ಬೇಕು ಕಣೆ..!
ಗೃಹಪ್ರವೇಶಾನೂ ಮಾಡ್ಬೇಕು ಕಣೆ..
ವೆ೦ಟಿಲೇಟರ ಚೆನ್ನಾಗಿರ್ಲಿ.. ಕಿಟಕಿ.. ಗಾಳಿ-ಬೆಳಕು ಚೆನ್ನಾಗಿ ಬರೋ ತರ..
ಬಚ್ಚಲು-ಶೌಚವೆಲ್ಲಾ ವಿಶಾಲವಾಗಿರ್ಲಿ..
ಅಬ್ಬಬ್ಬಾ ಎಷ್ಟೊ೦ದು ಕನಸು..
ಸುತ್ತಮುತ್ತಲಿನ ಪರಿಸರ ಚೆನ್ನಾಗಿರ್ಬೇಕು!
ಪಾಯಿಖಾನೆಯೂ ಫಳ-ಫಳ ಅನ್ನುತ್ತಿರಬೇಕು!!
ಎಷ್ಟು ವಿಶೇಷವಲ್ಲವೆ?
ಎಷ್ಟೇ ಸು೦ದರ ಮನೆಯಾದರೂ ಒಳಗಿನ ಮನಸ್ಸು!
ಮನೆಯ ಕಿಟಕಿಯಿ೦ದ ಗಾಳಿ ಬರುತ್ತೆ..
ಮನದ ಕಿಟಕಿ ತೆರೆಯೋದೇ ಇಲ್ಲ!!
ಚೆನ್ನಾಗಿ ಗಾಳಿ-ಬೆಳಕು ಬ೦ದರೂ ಒಬ್ಬರ ಮುಖದಲ್ಲೂ ಕಳೆಯೇ ಇಲ್ಲ..
ಬರೋ ಗಾಳಿಯೋ ಪೂರ್ಣ ಧೂಳು ಮಯ!!
ವಾಯುವ್ಯದಲ್ಲೇನೂ ಒಲೆ ಇಲ್ಲ..
ಮನಗಳ ನಡುವೆ ಮಾತ್ರ ಸದಾ ಬೆ೦ಕಿ ಹೊಗೆಯಾಡುತ್ತಲೇ ಇರುತ್ತೆ!!
ಮನೆಯೋ ಮನವೋ.. ಒಟ್ನಲ್ಲಿ ಸು೦ದರತೆಯ ಹಿ೦ದಿನ
ಪಾಷವೀ ಗುಣಗಳ ನಡುವಿನ ಗೋಡೆಯೂ ಸಿಮೆ೦ಟಿನದೇ..
ಸುತ್ತಿಗೆಯಿ೦ದಲೂ ಒಡೆಯಲಾಗದೇನೋ!
Comments
ಆತ್ಮೀಯ ನಾವಡರೆ,
ಆತ್ಮೀಯ ನಾವಡರೆ,
ಸಂಸ್ಕಾರವಿಲ್ಲದ ಮನಕ್ಕೆ ಮನೆ ಎಷ್ಟು ದೊಡ್ಡದಾದರೂ ಏನೂ ಪ್ರಯೋಜನವಿಲ್ಲ. " ಮನ ಹಿರಿದುಮಾಡು,ಮನೆ ಏನು ಮಾಡೀತು " ಎನ್ನುವ ಕವಿನುಡಿ ಜ್ಞಾಪಕಕ್ಕೆ ಬಂತು. ಉತ್ತಮ ಕವನ. ಧನ್ಯವಾದಗಳು
ಹೌದು ನಾವಡರೆ ಮನೆ ಎಂದರೆ ಅದು ಬರಿ ಮನೆಯಲ್ಲ
In reply to ಹೌದು ನಾವಡರೆ ಮನೆ ಎಂದರೆ ಅದು ಬರಿ ಮನೆಯಲ್ಲ by partha1059
(No subject)
<\a>
In reply to (No subject) by partha1059
ಖಾಲಿ ಮನೆ!
ಪಾರ್ಥರೆ,
"ಬರಿ ಮನೆಯಲ್ಲ" ಅಂದದ್ದಕ್ಕೆ ಪ್ರತಿಕ್ರಿಯೆ- "ಖಾಲಿ ಮನೆ".
ನಾವಡರೆ,
ಕವನ ಚೆನ್ನಾಗಿದೆ.
-ಗಣೇಶ
ಸುತ್ತಿಗೆಯಿಂದಲೂ..
ವಾಸ್ತವಕ್ಕೆ ತೀರಾ ಹತ್ತಿರವಾದ ವಿಡಂಬನೆ, ಧನ್ಯವಾದಗಳು, ರಾಘವೇಂದ್ರ
ವಾಸ್ತವವನ್ನು ಎತ್ತಿ ತೋರುವ ಕವನ
ವಾಸ್ತವವನ್ನು ಎತ್ತಿ ತೋರುವ ಕವನ ನಾವಡರೆ !
ಮನೆ ಕಟ್ಟಿದರೆ ಮಾತ್ರ ಬರಲಿಲ್ಲ ನೆಮ್ಮದಿ
ಮನ ಕಟ್ಟಬೇಕು ಹೊರಹಾಕಿ ಬೇಗುದಿ
ಸುತ್ತಿಗೆಯಿಂದಲೂ ಒಡೆಯಲಾಗದೇನೋ!
ರಾಘವೇಂದ್ರ ನಾವಡ ರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಮನೆಯೋ ಮನವೋ.. ಒಟ್ನಲ್ಲಿ ಸು೦ದರತೆಯ ಹಿ೦ದಿನ
ಪಾಷವೀ ಗುಣಗಳ ನಡುವಿನ ಗೋಡೆಯೂ ಸಿಮೆ೦ಟಿನದೇ..
ಸುತ್ತಿಗೆಯಿ೦ದಲೂ ಒಡೆಯಲಾಗದೇನೋ! ತುಂಬ ಆತ್ಮಪರಿಶೋಧನೆ ಮಾಡಿಕೊಳ್ಳಬೇಕಾದ ಕವನ. ಬಾಹ್ಯದಲ್ಲಿ ಆಡಂಬರದೊಂದಿಗೆ ಮನಗಳಲ್ಲಿ ಕೊಳಕು, ಹುಳುಕು ತುಂಬಿಕೊಳ್ಳುವ ಮನಗಳ ಕುರಿತು ಮನಮುಟ್ಟುವ ಹಾಗೆ ಅರ್ಥಗರ್ಭಿತ ಕವನ.
ಕೆ.ಎಸ್.ರಾಘವೇಂದ್ರ ನಾವಡರಿಗೆ
ಕೆ.ಎಸ್.ರಾಘವೇಂದ್ರ ನಾವಡರಿಗೆ ವಂದನೆಗಳು.
" ಸುತ್ತಿಗೆಯಿಂದಲೂ ಒಡೆಯಲಾಗದೇನೋ " ನಿಜ, ನಾವು ಅಷ್ಟು ಅದ್ಭುತವಾದ ಭವ್ಯವಾದ ಮನೆಯನ್ನೆ ಕಟ್ಟುತ್ತೇವೆ ಸಾಲ ಸೋಲ ಮಾಡಿಯಾದರೂ ಪರವಾ ಇಲ್ಲ. ಆದರೆ ಆಠ ಮನೆಯ ನಿವಾಸಿಗಳ ಮನ ಒಂದೊಂದೂ ಒಂದು ದ್ವೀಪ, ಮನೆಯನ್ನು ಉತ್ತಮವಾದ ಸಿಮೆಂಟ್ ಬಳಸಿ ಕಟ್ಟುತ್ತೇವೆ, ಆದರೆ ಆ ಮನೆಯ ಮನಗಳು ಒಂದೊಂದೂ ಬರಿ ಮಳಲಿನಿಂದ ಕಟ್ಟಲ್ಪಟ್ಟಿರುತ್ತವೆ. ಕಾರಣ ಗಟ್ಟಿಯಾಗಿರ ಬೇಕಾದ ಮನಗಳು ಸುತ್ತಿಗೆ ಬೇಡ ಸಾಧಾರಣ ಗಾಳಿಗೂ ನೆಲ ಕಚ್ಚಿ ಬಿಡುತ್ತವೆ. ಬಹಳ ಅರ್ಥವತ್ತಾದ ಕವನ ನೀಡಿದ್ದೀರಿ, ಧನ್ಯವಾದಗಳು.
ಚೆನ್ನಾಗಿದೆ ನಾವಡರೇ.
ಚೆನ್ನಾಗಿದೆ ನಾವಡರೇ.
ಮಾತುಪಲ್ಲಟ ನೆನಪಾಯಿತು.
http://sampada.net/blog/kpbolumbu/02/11/2010/28834?page=109
ಚಿನ್ನದ ತುಂಡಿಂದ ಕಟ್ಟಲು ಬೇಕೇ
ಮನೆಯೊಂದಿದ್ದರಾಗದೇ
ಚಿನ್ನದಂಥ ಮನಸ್ಸಿಂದ ಕಟ್ಟಲೇ ಬೇಕು
ಸೂರೊಂದಿದ್ದರಾಗದು