ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್):
ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್):
ಮಾರ್ಚ್ ೧೨,೧೩,೧೪ ಬನಶಂಕರಿಯ ಮಂಜುನಾಥ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ನವರ ಬೇಸಿಕ್ ಕೋರ್ಸ್ ನಡೆಯಿತು. ನನ್ನ ಅನುಭವಗಳು:
ಮಾರ್ಚ್ ೧೨: ಬೆಳಿಗ್ಗೆ ೬ ಗಂಟೆಗೆ ಶುರು ಆಗಬೇಕಿತ್ತು. ನನಗೆ ಹೋಗಬೇಕಂಬ ಅಸೆ ಇತ್ತು. ಆದರೆ ನಾನು ಎದ್ದಿದ್ದು ೬:೫ ಕ್ಕೆ. ನನ್ನ ಹೆಂಡತಿ ಒತ್ತಾಯದಿಂದ
ಬೇಗ ರೆಡಿ ಆಗಿ ಹೊರಟೆ. ಮೊದಲ ದಿನವಾಗಿದ್ದರಿಂದ ನನ್ನ ತರ ಅನೇಕ ಸೋಮಾರಿಗಳು ಇನ್ನು ಬಂದಿರಲಿಲ್ಲ. ೬:೩೦ ಗಂಟೆಗೆ ಶುರು ಆಯಿತು.
ಆರ್ಟ್ ಆಫ್ ಲಿವಿಂಗ್ ನಿಂದ 'ಅಮುದನ್' ಮತ್ತು 'ಸುಧೀರ್ ನಾಡಿಗ್' ಬಂದಿದ್ದರು.
ಅಮುದನ್ - oracle ನಲ್ಲಿ ಕೆಲಸ ಮಾಡುತ್ತಿದ್ದಾರೆ. ೧೦ ವರ್ಷಗಳ ಆರ್ಟ್ ಆಫ್ ಲಿವಿಂಗ್ ನ ಸುದರ್ಶನ ಕ್ರಿಯಾ ಅನುಭವ.
ಸುಧೀರ್ ನಾಡಿಗ್ - ಆರ್ಟ್ ಆಫ್ ಲಿವಿಂಗ್ ನ full time ಶಿಕ್ಷಕರು.
ಮೊದಲನೇ ದಿನ ೧೦ ಗಂಟೆಗೆ ಕ್ಲಾಸ್ ಮುಗಿಯಿತು. ಎಂಥ ಅನುಭವ. 'better late than never' . ತುಂಬಾ 'positive' ಅನುಭವ. 'ಫುಲ್ energy'.
ನಾನು ಆಫೀಸ್ ಮುಟ್ಟಿದ್ದು ೧೧. ಅವತ್ತು ನನ್ನ ಟೀಂ ನವರು ಹೊರಗಡೆ ಊಟಕ್ಕೆ ಕರೆದುಕೊಂಡ ಹೋದರು. ಹೊಟ್ಟೆ ತುಂಬಾ ಊಟ.
ಊಟ ಮುಗಿಸಿಕೊಂಡು ಆಫೀಸ್ ಗೆ ಬಂದೆ. ನನಗೆ ಮೊದಲನೇ ಶಾಕ್. ನಿದ್ದೆ ನೆ ಬರ್ತಿಲ್ಲ.....!!!
ಇಡಿದಿನ ಮುಖ ಒಮ್ಮೆನು 'ಗಂಟು' ಆಗಲೇ ಇಲ್ಲ. 'ಗುರೂಜಿ' ಯ ಧ್ವನಿ ಯಾವಾಗಲು ತಲೆಯ ಗುಂಗಿನಲ್ಲಿ.
ಮಾರ್ಚ್ ೧೩: ಬೆಳಿಗ್ಗೆ ೬ ಗಂಟೆಗೆ ಕ್ಲಾಸ್ ಶುರು ಆಯ್ತು. ಕ್ಲಾಸ್ ಮುಗಿದ ಮೇಲೆ ಅನಿಸಿತು 'ನಾನು ಪುಣ್ಯ ಮಾಡಿದ್ದೇನೆ.' ಅದ್ಭುತ. ಇಷ್ಟು ದಿವಸ ಗೊತ್ತಾಗಲಿಲ್ಲ ಎಂಬ ಕೊರಗು.
ಮಾರ್ಚ್ ೧೪: ಸುದರ್ಶನ್ ಕ್ರಿಯಾ ನಿತ್ಯ ಹೇಗೆ ೩೦ ನಿಮಷದಲ್ಲಿ ಮಾಡಬೇಕು ಅಂತ ಹೇಳಿಕೊಟ್ಟರು. ಗುರೂಜಿ ಜೀವನದ ಸಂಕ್ಷಿಪ್ತ ವಿವರಣೆ. ಎಲ್ಲರ ಅನುಭವಗಳು....
ಹೇಗಾದರೂ ಮಾಡಿ ಎಷ್ಟು ಬೇಗ ಆಗುತ್ತೋ 'ಸುದರ್ಶನ' ಕ್ರಿಯಾ ಅನುಭವಿಸಿ. ಎಷ್ಟು ಹೇಳಿದರು ಸಾಲದು. ಹೊರಟು ಹೋದ ನಗು ಮರಳಿ ಬರವದು ಖಂಡಿತ....:)
ನನ್ನ ಜೀವನದಲ್ಲಿ ದೇವರು ಕೊಟ್ಟ 'ಉಗಾದಿಯ' ಅದ್ಭುತ ಉಡುಗೊರೆ...
ಜೈ ಗುರುದೇವ್.
ಹರೀಶ
Rating
Comments
ಉ: ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್):
In reply to ಉ: ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್): by Kiranaa1234
ಉ: ಸುದರ್ಶನ ಕ್ರಿಯಾ (ಆರ್ಟ್ ಆಫ್ ಲಿವಿಂಗ್):