ಸುಧಾ ಹಾಸ್ಯ ವಿಶೇಷಾಂಕ (ಏಪ್ರಿಲ್ ೬ ರ ಸಂಚಿಕೆ )
ಸಾಮಾನ್ಯವಾಗಿ ಹಾಸ್ಯ ವಿಶೇಷಾಂಕ ಎಂದರೆ ಪ್ರಯತ್ನಪೂರ್ವಕವಾಗಿ ಹೊಸೆದ ಹಾಸ್ಯದ ಲೇಖನಗಳು ಇಉತ್ತವೆ. ಆದರು ಒಮ್ಮೊಮ್ಮೆ ಅತಿ ಉತ್ತಮ ಲೇಖನಗಳೂ ಇರುತ್ತವೆ.
ಈ ಸಂಚಿಕೆಯಲ್ಲಿ ಹಾಸ್ಯಾಸ್ಪದವಾಗುತ್ತಿರುವ ಹಾಸ್ಯೋತ್ಸವ / ನಗೆಹಬ್ಬಗಳ ಬಗ್ಗೆ ಗಂಭೀರ ಲೇಖನಗಳಿವೆ. ಬೀchiಯವರ ಆತ್ಮಚರಿತ್ರೆ - ಭಯಾಗ್ರಫಿ ಬಗ್ಗೆ ಲೇಖನ , ಪೋಗೋ ಟೀವಿ ವಾಹಿನಿಯಲ್ಲಿ ನೀವು ನೋಡಿರಬಹುದಾದ ಮಿಸ್ಟರ್ ಬೀನ್ ಕುರಿತ ಲೇಖನ ಇವೆ. ಹಾಸ್ಯದ ಕ್ಯಾಪ್ ಧರಿಸಿ ದೇವೇಗೌಡ, ಜಯಲಲಿತ ಮುಂತಾದವರಾಗಿ ತಮ್ಮನ್ನು ಕಲ್ಪಿಸಿಕೊಂಡು ಓದುಗರು ಬರೆದ ಲೇಖನಗಳಿವೆ.
ವಸುಧೇಂದ್ರ ಅವರು ಬರೆದ 'ರೂಢಿ ಮರೆಯುವದು ಕಷ್ಟ ' ಚೆನ್ನಾಗಿದೆ . ಬಹುಶ: ಅವರದೇ ಆದ ಇನ್ನೊಂದು ಲೇಖನ ಇತ್ತೀಚೆಗೆ ಓದಿದ್ದೆ . ಇಂಜಿನಿಯರಿಂಗ್ ರ್ಯಾಂಕ್ ಬಂದಾತ ಮನೆಯ ಟಿವಿ ರಿಪೇರಿ ಮಾಡಬೇಕಾಗಿ ಬಂದ ಪ್ರಸಂಗ , ತಂದೆ ತೀರಿಕೊಂಡಾಗ ತಾಯಿ ರೂಢಿಯಂತೆ ಕುಂಕುಮ ಇಟ್ಟುಕೊಂಡ ಪ್ರಸಂಗ ಅ ಲೇಖನದಲ್ಲಿದ್ದವು .
ತುಂಬ ಚೆನ್ನಾಗಿ ಬರುತ್ತಿದ್ದ ಧಾರಾವಾಹಿ ಕಾಫಿ ನಾಡಿನ ಕಿತ್ತಳೆ ಈ ಸಂಚಿಕೆಯಲ್ಲಿ ಮುಗಿಯಿತು. ಅದನ್ನು ಬರೆದವರು ಗಿರಿಮನೆ ಷಾಮರಾವ್ ಅದರಲ್ಲಿ ಮಲೆನಾಡಿನ ಹಳ್ಳಿಯ ಜೀವನ ಚಿತ್ರಗಳು ತೇಜಸ್ವಿಯವರ ಬರಹಗಳನ್ನು ನೆನಪಿಸಿದವು.
ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆಯ ಧಾಟಿಯಲ್ಲಿ ಒಬ್ಬರು ಒಂದು ಅಣಕು ಹಾಡನ್ನು ಬರೆದಿದ್ದಾರೆ . ಅಲ್ಲಿಯ ಕೆಲ ಪದ ಜೋಡಣೆಗಳು ಹೀಗಿವೆ.
..ಬಾರು ಸೋಡ ನೊರೆಯಾಗಿ ಹರಿದಾಗ ಸಣ್ಣ ಹನಿಗೆ ಮತ್ತು....
..ಗುಂಡು ಹಾಕುವೆವು ನಾವು , ಮತ್ತು , ಮತ್ತು , ಮತ್ತು ...
..ಆಹಾ , ಘಾಟು ಈ ಪ್ರವಾಹ..
..ಎಚ್ಚರವು ಪೂರ್ತ ಲೋಪ ...
..ಪೆಗ್ಗಿನಿಂದ ಸೆರೆ ಒಡೆದ ಗಂಧ ...
..ಬಾಟ್ಲುಂಟು ಹಾಕು ಪೂರ...