ಸುಬ್ಬ..ಅಯ್ಯೋ ಪಾ..ಪ..!
ಚಿತ್ರ
ಸುಬ್ಬ...!
ಮುದ್ದಾದ ಹುಡುಗಿ
ನಮ್ನ ಸುಬ್ಬನ ಬೆಡಗಿ
ಅಲ್ಲಿದೆ ಏಕಾಂತ -ಅವಳು ಪ್ರಶಾಂತ
ಸುಬ್ಬನದದೋ ಧಾವಂತ
ಅಬ್ಬಬ್ಬ ಏನವಳ ಅಂದ
ಅದ್ನೋಡಿ ಸುಬ್ಬ ಆದ ಮಕರಂದ
ಅವಳ ನಲ್ದುಟಿಯಲ್ಲಿದೆ ಜೇನು ತುಪ್ಪ
ಅದ್ ಹೀರೋಕ್ ಮಾಡ್ದ ಒಂದು ತಪ್ಪ
ನಲ್ಲೆ ಬಳಿ ಸರಿದ
ನಡು ಬಳಸಿ ನಿಂದ
ಕೊರಳು ಬಳಸಿ ಪಿಡಿದ
ಕಣ್ಣೋಟ ಬೆರೆತು
ಇರೋ ಜಾಗ ಮರೆತು
ಆಯ್ತು ಎಡವಟ್ಟು
ಆಗಲೇ ಬಂದ ಕಿಟ್ಟು
ಶಿವ ಪೂಜೇಲಿ ಕರಡಿ
ಜಲ್ಲೆಂದವು ನರ ನಾಡಿ..
ಮುಂದಾಗುವ ಅನಾಹುತ ನೆನೆದು
ಸುಬ್ಬ ಜಗ್ಗನೆ ಜಿಗಿದ -
ಅವನ್ ಮುಂದೆ ನೆಗೆದ
ಜೇಬಿಂದ ಕ್ಯಾಡ್ಬರಿ ತೆಗೆದ
ಕ್ಯಾಡ್ಬರಿ ನೋಡಿ
ಕಿಟ್ಟು ಬಾಯಲಿ ನೀರಾಡಿ
ಕಿಟ್ಟು ಕೈ ಚಾಚಿ -
ಎರಡು ಕ್ಯಾಡ್ಬರಿ ಬಾಚಿ
ಓಡುತ್ತ ಮರೆಯಾದ
ಪ್ರೇಮಿಗಳಿಗೆ ನೆರವಾದ
ಬಾಗಿಲ ಬಳಿ ತೆರಳಿ
ಹಾಕಿದ ಅದ್ಕೆ ಅಗುಳಿ
ಮರಳಿ ನಲ್ಲೆ ಬಳಿ ಬಂದ
ನಲ್ದುಟಿಯ ಮಧುವ ಹೀರಿದ
ಆಗಲೇ...!
ಧೊಪ್ ಎಂಬ ಸದ್ದು
ಸುಬ್ಬ ನೆಲಕ್ಕೆ ಬಿದ್ದು
ಮೈ ಕೈ ಎಲ್ಲ ತರಚಿ
ತಾ ಕಂಡದ್ ಕನಸೆಂದು ಅರಚಿ
ಥತ್ತೇರಿಕೆ ಎಂದ -
ಗ್ಲಾಸು ನೀರು ಕುಡಿದ
ಬೆಡ್ ಮೇಲೆ ಮತ್ತೆ ಬಿದ್ದ..
Rating
Comments
ಪ್ರಶಸ್ತ ಸಮಯ! ಬೇಗ ಗೃಹಸ್ಥರಾಗಿ.
ಪ್ರಶಸ್ತ ಸಮಯ! ಬೇಗ ಗೃಹಸ್ಥರಾಗಿ. :)
In reply to ಪ್ರಶಸ್ತ ಸಮಯ! ಬೇಗ ಗೃಹಸ್ಥರಾಗಿ. by kavinagaraj
;())) ಹಿರಿಯರೇ ಬಹುಶ ಅದ್ಕಿನ್ನು
;())) ಹಿರಿಯರೇ ಬಹುಶ ಅದ್ಕಿನ್ನು ದಂಡಿ(ಬೇಜಾನ್-ಉ ಕ ಭಾಷೆಯಲ್ಲಿ ) ಸಮಯವಿದೆ..!!
ಈಗ ಪರಸ್ಪರ ಅರಿಯುವ ಸಮಯ....!!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
In reply to ಪ್ರಶಸ್ತ ಸಮಯ! ಬೇಗ ಗೃಹಸ್ಥರಾಗಿ. by kavinagaraj
>>>ಪ್ರಶಸ್ತ ಸಮಯ! ಬೇಗ
>>>ಪ್ರಶಸ್ತ ಸಮಯ! ಬೇಗ ಗೃಹಸ್ಥರಾಗಿ. :) ಕವಿನಾಗರಾಜರ ಮಾತಿಗೆ ನನ್ನ ಸಹಮತ.; ಸಪ್ತಗಿರಿ,ಪರಸ್ಪರ ಅರಿಯಲು ಧಂಡಿ ಸಮಯವಿದೆ.:)
ಗಣೇಶ್ ಅಣ್ಣ- ಅಂತೂ ನಿಮ್ಮ
ಗಣೇಶ್ ಅಣ್ಣ- ಅಂತೂ ನಿಮ್ಮ ತೀಕ್ಷ್ಣ ಧ್ರುಸ್ಟಿಗೆ ಈ ಬರಹ ಬಿತ್ತು ....!!
ಪ್ರತಿಕ್ರಿಯೆ ಕಂಡು ಸಹಜವಾಗಿಯೇ ಖುಷಿ ಆಯ್ತು...
ಕೆಲವೊಮ್ಮೆ ಸಿನೆಮ ನಿರ್ದೇಶಕರು-ಸಂಗೀತಗಾರರು-ಕವಿಗಳು-ಕವನ ರಚನೆಕಾರರು ಅವರ ಆ ಹಾಡು ಹಸೆ-ಪಂಡಿ ಯೋಚನೆ ಹೇಗೆ ಆ ಸಮಯದಲ್ಲಿ ಬಂತು ಎಂದು ಹೇಳುವುದು ನೀವ್ ಕೇಳಿರಬೇಕು....
ಈ ನನ್ನ ಬರಹವೂ ಥಟ್ಟನೆ ಹೊಳೆದದ್ದು ಹಾಗೆಯೇ ಗೂಗಲ್ ಟ್ರಾನ್ಸಿ ಲ್ಟರೆಟರ್ ಓಪನ್ ಮಾಡಿ ರೈಮ್ಸ್ ತರಹ್ ಇರಲಿ ಎಂದು ಅರೆ ಕ್ಷಣ ಯೋಚಿಸಿ ಬರೆದೆ..!!
ಮೊನ್ನೆ ದಿನ ಮುಸ್ಸಂಜೇಲಿ ಇಲಿ ಹೊತ್ತಲ್ಲಿ ಸೋನೆ ಮಳೆ ಬರುತ್ತಿತ್ತು-ನಾ ಆಫೀಸಲ್ಲಿ-ನಮ್ ಹುಡುಗಿ ಮನೇಲಿ-ಹಾಗೇ ಥಟ್ಟನೆ ಒಂದು ರಸಮಯ ಸನ್ನಿವೇಶದ ಕಲ್ಪನೆ(ಮಾತ್ರ)ಬಂತು ,ಅದ್ನ ಆ ಪಾಪದ ಸುಬ್ಬನ ಮೇಲೆ ಹಾಕಿ ಬರೆದೆ....!!
ಆಗಾಗ್ಗೆ ನಾ ಓದಿದ ನೋಡಿದ ಕಥೆ ಸಿನೆಮಾಗಳಲ್ಲಿನ ಆ ತರಹದ ಸನ್ನಿವೇಶಗಳೂ ಅದ್ಕೆ ಸಾಥ್ ನೀಡಿದವು...!
>>>>ಮೊದಲು ನಿಶ್ಚಿತಾರ್ಥ-ಗ್ಯಾಪ್- ಆಮೇಲೆ ಮದ್ವೆ-ಆಮೆಲೆನೂ ಗ್ಯಾಪ್ ಇಲ್ಲ ಬಿಡಿ...!!
ಅದೆಲ್ಲ ಯಾವಾಗ?
ಅದ್ಕಿನ್ನು ವಸಿ ಸಮಯವಿದೆ.
ಬಹುಶ ಇನ್ನೊಂದು ವರುಷ....!!
ನಿಮಗೆಲ್ಲ ಹೇಳಿ-ನಿಮ್ಮೆಲ್ಲರ ಸಮ್ಮುಖದಲ್ಲಿಯೇ ಸಂಪದ ಸಪ್ತಗಿರಿಯ ಸಪ್ತಪದಿ ಹೆಜ್ಜೆ ಸಾಗೋದು.....
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
ಸುಬ್ಬನ (ನಿಮ್ಮ) ಕನಸು ಬೇಗ
ಸುಬ್ಬನ (ನಿಮ್ಮ) ಕನಸು ಬೇಗ ನನಸಲಾಗಲಿ. ಕವನ ಚನ್ನಾಗಿದೆ ವೆಂಕಟೇಶ್ ರವರೇ .......ಸತೀಶ್
In reply to ಸುಬ್ಬನ (ನಿಮ್ಮ) ಕನಸು ಬೇಗ by sathishnasa
@ ಸಪ್ತಗಿರಿವಾಸಿಗಳೇ,
@ ಸಪ್ತಗಿರಿವಾಸಿಗಳೇ,
"ನಿಮ್ಮೆಲ್ಲರ ಸಮ್ಮುಖದಲ್ಲಿಯೇ ಸಂಪದ ಸಪ್ತಗಿರಿಯ ಸಪ್ತಪದಿ ಹೆಜ್ಜೆ ಸಾಗೋದು....." ಎಂದಿದ್ದೀರಿ. ಬಹಳ ಸಂತೋಷ.
ಒಂದೆರಡು ಕಿವಿಮಾತು ಹೇಳಬಹುದಾದರೆ:-
ಮೂಲಸಪ್ತಗಿರಿವಾಸಿ ಮಾಡಿಕೊಂಡ ಹಾಗೆ ಮದುವೆಗಾಗಿ ಕುಬೇರರ ಬಳಿ ಮೈ ತುಂಬ ಸಾಲ ಮಾಡಿಕೊಳ್ಳಬೇಡಿ.
ಮಹಾಲಕ್ಷ್ಮಿ ಮುನಿಸಿ ದೂರದ ಕೊಲ್ಲಾಪುರಕ್ಕೆ ಹೋಗಿ ನೆಲೆನಿಂತಳೆಂದು ಇನ್ನೊಬ್ಬಾಕೆಯೊಂದಿಗೆ ಎರಡನೇ ಮದುವೆ ಮಾಡಿಕೊಂಡ ಹಾಗೆ ನಡೆದುಕೊಳ್ಳಬೇಡಿ.
ಶ್ರೀರಾಮಚಂದ್ರನನ್ನು ಸದಾ ನೆನಪಿಸುತ್ತ ಏಕ ಪತ್ನೀವ್ರತಸ್ಥರಾಗಿ.
:-)))))
ಹಾಗೆಯೇ, ಸರಕಾರೀ ಕುಟುಂಬಕಲ್ಯಾಣ ಇಲಾಖೆ ಸೂತ್ರವಾದ ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ ಎನ್ನುವುದರ ಬಗ್ಗೆ ಚಿಂತಿಸದೆ, ಕನ್ನಡಕವಿಗಳು ಹಾಡಿದ ಹಾಗೆ, ಮಕ್ಕಳಿರಲಮ್ಮ ಮನೆ ತುಂಬಾ .... ಎನ್ನುತ್ತಿರಿ.
ಶುಭಸ್ಯ ಶೀಘ್ರಂ !
In reply to @ ಸಪ್ತಗಿರಿವಾಸಿಗಳೇ, by Shreekar
ಶ್ಹ್ರೀಕರ್ ಜೀ ಕೆಲಸದ
ಶ್ಹ್ರೀಕರ್ ಜೀ ಕೆಲಸದ ಗಡಿಬಿಡಿಯಲ್ಲಿ ನಿಮ್ಮ ಈ ಪ್ರತಿಕ್ರಿಯೆ ಗಮನಿಸಲು ಆಗಿರಲಿಲ್ಲಈಗ ಓದಿದೆ, ಈ ಹೆಸರು ಮತ್ತು ನನ್ನ ವ0ಶ್ಹಾವಳಿಯಲ್ಲಿ ಬ0ದ ಒ0ದು ಪದ್ದತಿ ಮುತ್ತಾತ ತಾತ ಅಪ್ಪ 2 ಮದ್ವೆ ಆಗಿರುವುದು ನ0ದೂ ಸೇಮ್ ಸ್ಟೊರಿ ಆಗಲಿಕ್ಕಿಲ್ಲ ಆಗೊಲ್ಲ ಎ0ದು ಧಾರಾಳವಾಗಿ ಭರವಸೆ ನೀಡುವೆ,.....
ನಿಮ್ಮಿ0ದಾಗಿ ಆ ಸ.ವಾ ಪುರಾಣ ಕಥೆ ತಿಳಿಯಿತು...ಪ್ರತಿಕ್ರಿಯೆಗೆ ನನ್ನಿ
ಶ್ಢುಭವಾಗಲಿ...
\|
In reply to ಸುಬ್ಬನ (ನಿಮ್ಮ) ಕನಸು ಬೇಗ by sathishnasa
;()) (ಸತೀಶ್ ಅವರ
;()) (ಸತೀಶ್ ಅವರ ಪ್ರತಿಕ್ರಿಯೆಗೆ )
ಪ್ರತಿಕ್ರಿಯೆಗೆ
ನನ್ನಿ ಶುಭವಾಗಲಿ..
\।/
ಮಜಾ ಬಂತು ಸಗಿ'ಯವರೇ ...
ಮಜಾ ಬಂತು ಸಗಿ'ಯವರೇ ... ಓದುತ್ತಿದ್ದಂತೆ ನನ್ನ ಮನದಲ್ಲಿ ಮೂಡಿದ್ದು ....
ನಿಮ್ಮ ಧಾಟಿಯಲ್ಲಿ ಬರೆದರೆ ...
ನಲ್ಲೆಯ ಬಳಿ ಸಾರಿದ
ಪ್ರೇಮದ ನೋಟವ ಬೀರಿದ
ನಲ್ಲೆಯು ಹಿಂದಕ್ಕೆ ಬಾಗಲು
ತಟ್ಟಿತ್ತು ಹಾಕಿದ್ದ ಬಾಗಿಲು
ಸುಬ್ಬನ ಮನಸ್ಸು ಬುಸ್ ಎಂದಿತು
ಕಿಟ್ಟುವಿನ ತಲೆ ಮೇಲೆ ಕುಟ್ಟೆಂದಿತು
ರಭಸದಿ ಬಾಗಿಲು ತೆರೆದು ಕೈ ಎತ್ತಲು
ನಲ್ಲೆಯ ಅಮ್ಮನ ಕಂಡಾಗ ಬಂತು ಕಣ್ಕತ್ತಲು
ಮುಂದೇನಾಯ್ತೋ ಅರಿಯದಾಯ್ತು
ತಲೆತಿರುಗಿ ಬಿದ್ದಂಗಾಯ್ತು
ನಿಂತಿದ್ದ ಹಸುವೊಂದು ಹಾಕಿದ ಸೆಗಣಿಯಂತೆ
ಮಂಚದಿಂದ ಬಿದ್ದಿದ್ದ ನಮ್ ಸುಬ್ಬ ತೊಪ್ಪೆಯಂತೆ
In reply to ಮಜಾ ಬಂತು ಸಗಿ'ಯವರೇ ... by bhalle
ಮಜಾ ಬಂತು ಸಗಿ'ಯವರೇ ...
ಮಜಾ ಬಂತು ಸಗಿ'ಯವರೇ ... ಓದುತ್ತಿದ್ದಂತೆ ನನ್ನ ಮನದಲ್ಲಿ ಮೂಡಿದ್ದು ....
ನಿಮ್ಮ ಧಾಟಿಯಲ್ಲಿ ಬರೆದರೆ ...
ನಲ್ಲೆಯ ಬಳಿ ಸಾರಿದ
ಪ್ರೇಮದ ನೋಟವ ಬೀರಿದ
ನಲ್ಲೆಯು ಹಿಂದಕ್ಕೆ ಬಾಗಲು
ತಟ್ಟಿತ್ತು ಹಾಕಿದ್ದ ಬಾಗಿಲು
ಸುಬ್ಬನ ಮನಸ್ಸು ಬುಸ್ ಎಂದಿತು
ಕಿಟ್ಟುವಿನ ತಲೆ ಮೇಲೆ ಕುಟ್ಟೆಂದಿತು
ರಭಸದಿ ಬಾಗಿಲು ತೆರೆದು ಕೈ ಎತ್ತಲು
ನಲ್ಲೆಯ ಅಮ್ಮನ ಕಂಡಾಗ ಬಂತು ಕಣ್ಕತ್ತಲು
ಮುಂದೇನಾಯ್ತೋ ಅರಿಯದಾಯ್ತು
ತಲೆತಿರುಗಿ ಬಿದ್ದಂಗಾಯ್ತು
ನಿಂತಿದ್ದ ಹಸುವೊಂದು ಹಾಕಿದ ಸೆಗಣಿಯಂತೆ
ಮಂಚದಿಂದ ಬಿದ್ದಿದ್ದ ನಮ್ ಸುಬ್ಬ ತೊಪ್ಪೆಯಂತೆ
In reply to ಮಜಾ ಬಂತು ಸಗಿ'ಯವರೇ ... by bhalle
ಭಲ್ಲೆ ಅವ್ರೇ ನಿಮ್ಮ ರಚನೆ ಸೂಪರ್
ಭಲ್ಲೆ ಅವ್ರೇ ನಿಮ್ಮ ರಚನೆ ಸೂಪರ್ ಬ್...!!
ಅದು ಥಟ್ಟನೇ ಮೂಡೀದ ಬರಹ...
ನನ್ನ ರಚನೆಗಿಂತ ನಿಮ್ಮ ರಚನೆ ನಂಗೆ ಬಹು ಇಷ್ಟ ಆಯ್ತು.ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ..
\।/
:-)))))))))
:-)))))))))
In reply to :-))))))))) by gopaljsr
ಗೋಪಾಲ್ ಸರ್..:))))))))))))
ಗೋಪಾಲ್ ಸರ್..:)))))))))))) ಮಾತ್ರ ಕಾಣಿಸುತ್ತಿದ್ದೆ. ನವಂಬರ್ ೨ ೨೦೧೨ ರ ನಂತರ ತಮ್ಮ "ಸುಬ್ಬ"ನ ಕತೆಯೇ ಇಲ್ಲಾ!? ಹಾಗೇ ನಮ್ಮ ಭಲ್ಲೇಜಿ ಹಾಸ್ಯ ಬರಹಗಳೂ ಸಹ ಕಾಣಿಸುತ್ತಿಲ್ಲ:(
In reply to ಗೋಪಾಲ್ ಸರ್..:)))))))))))) by ಗಣೇಶ
ಉ: ಸುಬ್ಬ..ಅಯ್ಯೋ ಪಾ..ಪ..!
ಕ್ಷಮೆ ಇರಲಿ ಗಣೇಶ್'ಜಿ ... ಮನದ ಕಾರ್ಮೋಡಗಳು ಕರಗಿ ಈಗ ಬಸ್'ಮೋಡಗಳು ಆವರಿಸಿರುವುದರಿಂದ ಬಹಳ ದಿನಗಳ ನಂತರ ಮತ್ತೊಂದು ಹಾಸ್ಯ ಬರಹ ಸದ್ಯದಲ್ಲೇ ಬರಲಿದೆ ...
ಉ: ಸುಬ್ಬ..ಅಯ್ಯೋ ಪಾ..ಪ..!
ಖುಷೀ ಆಯ್ತು
ನಿಮ್ ತಮಾಷೆಯ ಕವನ ಓದಿ
ಇಂತದ್ದೆಲ್ಲಾ ಆಗಲ್ಲ ಅಂತೆಣಿಸುತ್ತೇನೆ
In reply to ಉ: ಸುಬ್ಬ..ಅಯ್ಯೋ ಪಾ..ಪ..! by gopinatha
ಉ: ಸುಬ್ಬ..ಅಯ್ಯೋ ಪಾ..ಪ..!
"ಇಂತದ್ದೆಲ್ಲಾ ಆಗಲ್ಲ ಅಂತೆಣಿಸುತ್ತೇನೆ"
:())))
ಗೋಪಿನಾಥ ಅವರೇ - ಇದು ನನ್ನ ಹಳೆಯ ಬರಹ . ಆದರೆ ಶ್ರೀನಾಥ್ ಭಲ್ಲೆ ಅವರ ಮತ್ತು ಒಬ್ಬರ ಪ್ರತಿಕ್ರಿಯೆ ಮರು ಪ್ರತಿಕ್ರಿಯೆ ಕಾರಣವಾಗಿ ಮತ್ತೊಮ್ಮೆ ಮತ್ತಸ್ತು ಹಿಟ್ಸ್ ಪಡೆದುಕೊಂಡಿದೆ.. .!!
ಆ ರೀತಿ ಆಗಲಿಕ್ಕಿಲ್ಲ...
!
ಕೆಲ ಸಿನೆಮ ಸನ್ನಿವೇಶಗಳ ಮತ್ತು ನನ್ನದೇ ಕೆಲ ಕಲ್ಪನೆಗಳ ಹಾಗೂ ನಾ ನೋಡಿದ ದೃಶ್ಯಗಳ ಸರಮಾಲೆಯೇ ಈ ಧಿಡೀರ್ ಬೀ ಎಮ್ ಟಿ ಸಿ ಬರಹ ...!!
ಇದು ಬರೆದದ್ದು ಮೊಬೈಲಿನಲ್ಲಿ ಮೆಸೇಜ್ ಡ್ರಾಫ್ಟ್ಸನಲ್ಲಿ ಸೇವ್ ಮಾಡಿದ್ದೆ -ಬೀ ಎಮ್ ಟಿ ಸಿ ಬಸ್ಸಲ್ಲಿ ಬರುವಾಗ .. ಆಮೇಲೆ ಆಫೀಸಿಗೆ ಬಂದು ಟೈಪ್ ಮಾಡಿ ಇಲ್ಲಿ ಹಾಕಿದ್ದು .. !
ಪ್ರತಿಕ್ರಿಯೆಗೆ ನನ್ನಿ
>>@ಭಲ್ಲೆ ಅವರೇ ಹೇಳಿದಂತೆ - ಒಂದು ಹೊಸ ಹಾಸ್ಯ ಬರಹವನ್ನು ಸಂಪದಕ್ಕೆ ಸೇರ್ಸಿರುವಿರಿ ..!!
ಶುಭವಾಗಲಿ
\।