ಸುಮ್ನೆ ಹಿಂಗೊಂದು ಪ್ರಯತ್ನ

ಸುಮ್ನೆ ಹಿಂಗೊಂದು ಪ್ರಯತ್ನ

ಇವತ್ತು ಆಫೀಸಿಂದ ಬರುವಾಗ  ಜೋರು ಮಳೆ, ಹೆಲ್ಮೆಟ್ ತೆಗೆದು  ಕೈಲಿಟ್ಟುಕೊಂಡು ನೆನಕೊಂಡು ಬಂದೆ. ಸಕ್ಕತ್ ಮಜಾ ಬಂತು.

ನಿನ್ನೆ  ಜಯಲಕ್ಷ್ಮಿ  ಪಾಟೀಲ್ ಅವ್ರ ನಾಟಕ ನೋಡೋಕೆ ಹೋಗಿದ್ವಿ ,  ಚೆನ್ನಾಗಿತ್ತು. ಅವ್ರ್ಮನೆ  ನಾಯಿ... ಅಲ್ಲಲ್ಲಲ್ಲ  ಟೈಗರ್  ಚೈನ್ ನ   to ಕಿತ್ಕೊಳ್ಳೋ.. not to ಕಿತ್ಕೊಳ್ಳೋ ಅಂತ ಜಗ್ಗಾಡ್ತಿದ್ಯಂತೆ  .

ನನ್ನ ಬಾವನ ಅಣ್ಣನ ಮಗ  ಸಣ್ಣವ್ನು , ನನ್ನ ಅಕ್ಕನ್ನ  ಮತ್ತೆ ಬಾವನನ್ನು   ಕಮ್ಮ - ಕಪ್ಪ ಅಂತ ಕರೀತಿದ್ದ. (ಚಿಕ್ಕಮ್ಮ-ಚಿಕ್ಕಪ್ಪ ದಲ್ಲಿ   ಚಿ  ಹೇಳಕ್ಕೊಂದ್ ಬರ್ತಿರ್ಲಿಲ್ಲ... )  ನಂಗಂತೂ ನಕ್ಕು ನಕ್ಕು   ಸಾಕಾಯ್ತು.

ಪಾಲಚಂದ್ರನ್ನ  ಮುಂಚೆ ನೋಡಿರ್ಲಿಲ್ಲ.. ನಿನ್ನೆ  ಸಿಕ್ಕಾಗ ಗುರ್ತೇ ಸಿಗ್ಲಿಲ್ಲ...  ಅವ್ರು ಬರ್ಯೋದನ್ನ ನೋಡಿ  ತುಂಬಾ ದೊಡ್ಡೋರಿರ್ಬೇಕು ಅಂದ್ಕೊಂಡಿದ್ದೆ... ‌:)

ನಮ್ಮ ಆಫೀಸಲ್ಲಿ   ಒಬ್ರು  ಬ್ಲಾಗ್ ಬರೆದಿದ್ರು, ಒಂದೊಂದು ಮಾತಿಗೂ ಸಂಭಂದ ಇರ್ಲಿಲ್ಲ... ನಾನು ಟ್ರೈ ಮಾಡಿದ್ರೆ ಹೆಂಗೆ ಅಂದ್ಕೊಳ್ತಾ ಇದ್ದೆ.

ವಸುದೇಂದ್ರ ರವರು  ಬರೆದಿದ್ದ  ಎರಡು ಪುಸ್ತಕ ಓದಿ ಮುಗಿಸಿದೆ, ರೂಮಲ್ಲಿ ಒಬ್ನೇ ಕೂತ್ಕೊಂಡು ನಗ್ತಾ ಇದ್ದೆ... ತುಂಬಾ ಚೆನ್ನಾಗಿ ಬರೀತಾರಪ್ಪ...

ನಿನ್ನೆ    ಶಿವು   ಕಾರಲ್ಲಿ  ಸುಮಾರು ಸಲ ಗಾಂಧಿ ಬಜಾರ್ ಸುತ್ತಿದ್ವಿ... ಎಲ್ಲಾ  ರಸ್ತೆ  ಗಾಂಧಿ ಬಜಾರ್ ಗೇ  ಸೇರುತ್ತಾ ಅಂತ ಅನುಮಾನನೂ ಆಗಿತ್ತು. :)

ಅಕ್ಕನ ಮಗಳಿಗೆ ಫೋನ್ ಮಾಡಿದಾಗ ಯಾಕೆ ಮಂಗಳೂರಿಗೆ ಬರೋದೇ ಇಲ್ಲ ಅಂತ ಕೇಳ್ತಿರ್ತಾಳೆ. ಒಂದ್ವಾರ ಮಂಗ್ಳೂರ್ಗೆ  ಹೋಗ್ ಬರ್ಬೇಕು.

ToDo ಲಿಸ್ಟ್  ಬೆಳೀತನೇ ಇದೆ, ಎಲ್ಲ  ಕೆಲ್ಸ ಮುಗ್ಸಕ್ಕೆ    ಏನಾದ್ರು ಐಡಿಯಾ ಮಾಡ್ಬೇಕು...

ದೇಬಿಯನ್ ಲೆನ್ನಿ   ಉಪಯೋಗಿಸ್ತಾ ಇದೀನಿ, KDE 4.2 ಈಗ ಟೆಸ್ಟಿಂಗ್ ರೆಪಾಸಿಟರಿಲಿ  ಬಂತಂತೆ, ಅದಕ್ಕೆ  ದೇಬಿಯನ್  squeeze ಹಾಕ್ಕೋಬೇಕು. KDE 4.2 ನಂಗಂತೂ  ತುಂಬಾ  ಹಿಡಿಸಿದೆ.

ನಿನ್ನೆನೂ ಸರಿಯಾಗಿ ನಿದ್ರೆ ಇಲ್ಲ, ಆಫೀಸಲ್ಲಿ  ಜೋರು ನಿದ್ರೆ ಬರ್ತಾ ಇತ್ತು. ಬೇಗ   ಊಟ ಮಾಡಿ  ನಿದ್ರೆ ಮಾಡ್ಬಿಡಣ ಅಂತ ಮನೆಗೆ ಬೇಗ ಬಂದೆ. ಅರೆರೆರೆ... ಏನಿದು  ನಿದ್ರೆ  ಮಾಯ... :)  

ಇದೂ ಚೆನ್ನಾಗಿದೆ ಅನ್ನಿಸ್ತಪ್ಪ  :)

Rating
No votes yet

Comments