ಸುಮ್ನೆ ಹೀಗೆ-೬

ಸುಮ್ನೆ ಹೀಗೆ-೬

        

        ೧
ಅಂದು...
" ಬಾ ಮಗಳೆ ಹೊತ್ತಾಯ್ತು
ಎಲ್ಲರೂ ಒಟ್ಟಿಗೆ ಊಟ ಮಾಡೋಣ,
ಸಾಕು ಆ ಕಂಪ್ಯೂಟರ್ ಮಂದೆ ಕೂತದ್ದು "
" ಸ್ವಲ್ಪ ತಡೆಯಮ್ಮ,
ಈ ಆಟ ಆಡಿ ಮುಗಿಸಿ ಬರುವೆನು "

ಇಂದು...
" ಅಮ್ಮಾ  ಹೊತ್ತಾಯ್ತು
ಊಟ ರೆಡಿ ಮಾಡಮ್ಮ"
" ಸ್ವಲ್ಪ ತಡೆ ಮಗಳೆ, 'ಸಂಪದ' ದ
ಈ ಬರಹ ಓದಿ ಮುಗಿಸಿ  ಬರುವೆನು "
   
         ೨
ಅಂದು...
" ಏನು ಮಗಳೆ ಊರಿಂದ ಬಂದೊಡನೆ
ಕಂಪ್ಯೂಟರ್ ಮುಂದೆ ಕೂತಿಯಲ್ಲೆ
 ಬಂದು ಸ್ವಲ್ಪ ಸಹಾಯ ಮಾಡಬಾರದೇನೆ ! "

" ಫೇಸ್ ಬುಕ್ ನೋಡೋದಿದೆ
ಇ ಮೇಲ್ ಚೆಕ್ ಮಾಡೋದಿದೆ "

ಇಂದು...
" ಅಮ್ಮ ನೀನು, ಊರಿಂದ ಬಂದೊಡನೆ
ಕಂಪ್ಯೂಟರ್ ಮುಂದೆ ! "

 " ಪ್ರತಿಕ್ರಿಯೆ ನೋಡೋದಿದೆ
' ಸಂಪದ' ಕ್ಕೆ ಸೇರಿಸಿದ್ದೆ ಆ ದಿನ ಒಂದು ಕವಿತೆ
ನೀನೂ ಬಾ   ಓದಿನೋಡುವೆಯಂತೆ "

 

Rating
No votes yet

Comments