ಸುಮ್ಮನೆ ನಗುವಿಗಾಗಿ-5

ಸುಮ್ಮನೆ ನಗುವಿಗಾಗಿ-5

ದಿನವೂ ತಡವಾಗಿ ಕಛೇರಿಗೆ ಹೋಗುತ್ತಿದ್ದ  ತಿಮ್ಮ ಬಾಸ್ ಕೈನಲ್ಲಿ ಬೈಸಿ ಕೊಳ್ಳುತ್ತಿದ್ದ ಇದಕ್ಕೆ ಕಾರಣ ಏನಪ್ಪ ಅಂದರೆ ತಿಮ್ಮನಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ ಬೆಳಗಿನ ಜಾವ ಚನ್ನಾಗಿ ನಿದ್ರೆ ಬರುತ್ತಿತ್ತು ಇದರಿಂದ ಏಳುವುದು ತಡವಾಗಿ ಕಛೇರಿಗೂ ತಡವಾಗಿ ಹೋಗಿ ದಿನವೂ ಬಾಸ್ ಕೈನಲ್ಲಿ ಬೈಸಿಕೊಳ್ಳುತ್ತಿದ್ದ. ಇದಕ್ಕೆ ಪರಿಹಾರ ಕಂಡುಕೊಳ್ಳಲು ವೈಧ್ಯರ ಬಳಿಗೆ ಹೋದ, ವೈಧ್ಯರು ತಿಮ್ಮನನ್ನು ಪರೀಕ್ಷೆ ಮಾಡಿ ಮಾತ್ರೆ ಬರೆದು ಕೊಟ್ಟು ದಿನರಾತ್ರಿ ಊಟವಾದ ಮೇಲೆ ತೆಗೆದುಕೊಳ್ಳಿ ಚನ್ನಾಗಿ ನಿದ್ರೆ ಬರುತ್ತೆ ಬೆಳಗ್ಗೆ ಬೇಗ ಎಚ್ಚರ ಆಗುತ್ತೆ ಅಂತ ಹೇಳಿ ಕಳಿಸಿದರು. ಮನೆಗೆ ಬಂದ ತಿಮ್ಮ ರಾತ್ರಿ ಊಟ ಮಾಡಿ ಮಾತ್ರೆ ತೆಗೆದುಕೊಂಡು ಮಲಗಿದ ಒಳ್ಳೆ ನಿದ್ದೆ ಬಂದು ಬೆಳಗ್ಗೆ ಬೇಗ ಎಚ್ಚರ ಆಯಿತು ಖುಷಿಯಿಂದ ಅರ್ಧ ಗಂಟೆ ಮುಂಚೆನೆ ಕಛೇರಿಗೆ ಹೋದ ಹತ್ತು ಗಂಟೆಗೆ ಕಛೇರಿಗೆ ಬಂದ ಬಾಸ್ ತಿಮ್ಮನಿಗೆ ಹೇಳಿಕಳಿಸಿದರು. ಇವತ್ತು ಬೇಗನೆ ಬಂದಿದ್ದರು ಯಾಕೆ ಹೇಳಿ ಕಳಿಸಿದರೆ ಅಂತ ಅನ್ಕೊಂಡು ಬಾಸ್ ಬಳಿ ಹೋಗಿ ಇವತ್ತು ಬೇಗನೆ ಬಂದಿದಿನಲ್ಲ ಸಾರ್ ಅಂದ, ಅದಕ್ಕೆ ಬಾಸ್























"


"


"


"


"


"


"


"


"


"


ಇವತ್ತು ಬೇಗ ಬಂದಿದೀರಿ ಸರಿ, ಆದರೆ ನೆನ್ನೆ ಎಲ್ರಿ ಹೋಗಿದ್ರಿ ಅಂತ ಬೈದರು  

Rating
No votes yet

Comments