ಸುಮ್ಸುಮ್ನೆ

ಸುಮ್ಸುಮ್ನೆ


  • ಸಂತಾ ಮತ್ತು ಅವನ ಪತ್ನಿ ಕಾರಿನಲ್ಲಿ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಸಂತಾ ಕಾರಿನ ವೇಗವನ್ನು ಹೆಚ್ಚಿಸಲಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಆತನ ಪತ್ನಿ ಸಂತಾ ಬಳಿ ಕಾರಿನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಿದ ಕಾರಣವನ್ನು ಕೇಳಿದಳು. ಆಗ ಸಂತಾ ಉತ್ತರಿಸಿದ, 'ಕಾರಿನ ಬ್ರೇಕ್ ಫೇಲ್ ಆಗಿದೆ. ಅಪಘಾತ ಆಗುವ ಮೊದಲು ಮನೆಗೆ ಬೇಗನೆ ಸೇರಿಕೊಳ್ಳೋಣವೆಂದು ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದೇನೆ'..!  

  



  • ಹೆಂಡತಿ: ನಾನೊಂದು ಸಂತೋಷದ ವಿಚಾರ ಹೇಳೋದಿದೆ.. ನೀವು ಬಯ್ಯಲ್ಲ ತಾನೇ?

    ಸಂತಾ: ಅದೇನು ಹೇಳು.

    ಹೆಂಡತಿ: ನಾನು ಪ್ರೆಗ್ನೆಂಟು.

    ಸಂತಾ: ಇದನ್ನು ಹೇಳೋದಿಕ್ಕೂ ಭಯನಾ?

    ಹೆಂಡತಿ: ಹಾಗೇನಿಲ್ಲ.. ಕಾಲೇಜಿಗೆ ಹೋಗ್ತಿದ್ದಾಗ ಈಗೇ ಹೇಳಿದ್ದಕ್ಕೆ ಅಪ್ಪಾ ಸಿಕ್ಕಾಪಟ್ಟೆ ಹೊಡ್ದಿದ್ದ..! 
  •     ಸಂತಾ: ಏನೋ ಇಷ್ಟೊಂದು ಕಡಿಮೆ ಮಾರ್ಕು..? ಇಂಥ ಪ್ರೊಗ್ರೆಸ್ ರಿಪೋರ್ಟ್ ತೋರಿಸಿದರೆ ನಂಗೆ ಮೈ ಉರಿಯುತ್ತೆ ಅಂತ ಗೊತ್ತಿಲ್ವ ನಿಂಗೆ?

    ಮಗ: ನಾನು ಟೀಚರ್‌ಗೆ ಈ ವಿಷಯ ಹೇಳಿದೆ ಅಪ್ಪಾ. ಆದರೆ ಅವರು ಕೇಳ್ಳಿಲ್ಲ. ಸೈನ್ ಹಾಕಿಸಿಕೊಂಡು ಬರ್ಲೇಬೇಕು ಅಂತಾ ಒತ್ತಾಯ ಮಾಡಿದ್ರು..!

  •   
Rating
No votes yet

Comments