ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
"ಅಮ್ಮಾ
ಬಾರಮ್ಮಾ,
ಸುಷ್ಮಾ
ಬಾರಮ್ಮಾ,
ಬಳ್ಳಾರಿ
ಜನತೆಗೆ
ನಗುಮುಖವ
ತೋರಮ್ಮಾ..."
ಹೀಗೆಂದು ಹಾಡಿ,
ಆ ಬಳ್ಳಾರಿಯ
ರೆಡ್ಡಿ ಸಹೋದರರು
ಮತ್ತು ಶ್ರೀರಾಮುಲು
ನಿಮ್ಮನ್ನು
ಸ್ವಾಗತಿಸಿದರೆ,
ನನಗೆಳ್ಳಷ್ಟೂ
ಚಿಂತೆ ಇಲ್ಲ ನಿಜದಿ;
ಅವರು
ಸಮರ್ಪಿಸುವ
ಲಕ್ಷ್ಮಿಯ ಜೊತೆಗೆ
ದಿಲ್ಲಿಗೆ ಮರಳುವ
ಮೊದಲು, ನಿಮ್ಮ
ಆ ನಾಲ್ಕು ಮಕ್ಕಳಿಗೆ
ಸ್ವಲ್ಪ ಬುದ್ಧಿ ಹೇಳಿ
ಎಂಬಾಶಯ ಈ ಮನದಿ;
ಕರ್ನಾಟಕದ
ಮಂತ್ರಿಗಳವರು,
ಬರೀ ಬಳ್ಳಾರಿಯ
ದಂಡನಾಯಕರಲ್ಲ,
ಅಭಿವೃದ್ಧಿ ಪಡಿಸಲಿ
ಈ ನಾಡನ್ನೂ, ಬರೀ
ಬಳ್ಳಾರಿಯಷ್ಟನ್ನೇ ಅಲ್ಲ;
ನಾಡಿನುದ್ದಗಲಕ್ಕೂ
ಅಮಾಯಕ ಜನರು,
ಡೆಂಗಿ ಮತ್ತು ಹಂದಿ
ಜ್ವರದಿಂದ ನರಳಿ,
ಸಾಯುತ್ತಿದ್ದಾರೆ
ಸಾಮೂಹಿಕವಾಗಿ,
ಆದರೆ ಅತ್ತ
ಆ ಆರೋಗ್ಯಮಂತ್ರಿ
ಪೌರೋಹಿತ್ಯ
ವಹಿಸಿಕೊಂಡು,
ವಿವಾಹ ನಡೆಸುತ್ತಿದ್ದಾರೆ
ಸಾಮೂಹಿಕವಾಗಿ;
ಆಗಲೇ ಎರಡು
ವರ್ಷಗಳಾದವು,
ಇನ್ನಾದರೂ ಬಳ್ಳಾರಿಯ
ಬಿಟ್ಟು ಹೊರಬರಲು ಹೇಳಿ,
ನಾಲ್ಕಾರಾದರೂ ಸರಕಾರೀ
ಆಸ್ಪತ್ರೆಗಳ ಹೆಸರುಗಳನ್ನು
ಕಂಠಪಾಠಮಾಡಿಕೊಂಬಂತೆ
ಆತನಿಗೆ ಬುದ್ಧಿಮಾತು ಹೇಳಿ;
ಬಳ್ಳಾರಿಯ ಹೊರಗೂ
ಕರ್ನಾಟಕವಿದೆ ಇನ್ನೂ,
ಬಳ್ಳಾರಿಯ ಹೊರಗೂ
ನಿಮ್ಮ ಮತದಾರರು
ಇದ್ದಾರೆ ಇನ್ನೂ,
ಹೀಗೇಯೇ ಮುಂದುವರೆದರೆ,
ಮುಂದೊಂದು ದಿನ ಸೋಲಿನ
ರುಚಿ ಕಾಣಬೇಕಾಗಬಹುದು,
ಭಾರತೀಯ ಜನತಾ ಪಕ್ಷ,
ಬಳ್ಳಾರಿ ಜನತಾ ಪಕ್ಷವಾಗಿ
ಬಹಳ ಹಿಂದುಳಿದುಬಿಡಬಹುದು,
ಸುಷ್ಮಾ ನಿಮ್ಮ ಪಾಲಿಗೆ ಇದು
ಸ್ವರಾಜವಾಗಿ ಉಳಿಯದೇ
ಪರರಾಜ್ಯವಾಗಿ ಬಿಡಬಹುದು!
***************
ಆತ್ರಾಡಿ ಸುರೇಶ ಹೆಗ್ಡೆ
Comments
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
In reply to ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...! by Harish Athreya
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
In reply to ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...! by ksraghavendranavada
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
In reply to ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...! by prasannasp
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!
In reply to ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...! by malathi shimoga

In reply to ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...! by asuhegde
ಉ: ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!