ಸೂತ್ರ

ಸೂತ್ರ

ಸೂತ್ರ

ಮುಂದಿನ ಆಸೆಗೆ ಇಂದೇಕೆ ಉಪವಾಸ
ಹಿಂದಿನ ದುಃಖಕೆ ಇಂದೇಕೆ ಸಾಪಾಸ||
ಆಗುವುದಿದ್ದರೆ ಆಗುವುದಣ್ಣ
ಕಳೆದಿಹ ಕಹಿಯನು ಮರೆತುಬಿಡಣ್ಣ.|೧|
ನೋವನು ಒದ್ದ ಸಾವನು ಗೆದ್ದ
ಬಿದ್ದವರನು ಮೇಲೆತ್ತುವ ಸಿದ್ದ.|೨|
ಕತ್ತೆಗೆ ಭಾರ, ಅತ್ತೆಯ ಖಾರ
ಖಾರದ ಭಾರವ ಸಹಿಸುವ ಧೀರ|೩|.
ರಾಧೆಯ ನಲ್ಲ ಯುದ್ದದಿ ಮಲ್ಲ
ಬದುಕಲು ಕಲಿಸಿದ ಗೋಪಿಯ ಗೊಲ್ಲ.|೪|
ಮಂಜಿಗೆ ಅಂಜದ ತಾಪಕೆ ಬೆಂದದ
ಸುಂದರ ಬದುಕದು ಅಂದದ ಚಂದದ.|೫|
ಆರನು ಕೊಂದು ಮೂರಲಿ ಮಿಂದು
ನಿಲ್ಲಿಸಿ ಬಿಂದು ಆದನು ಸಿಂಧು.|೬|
ಕಲ್ಲು ಮುಳ್ಳಲಿ ಹೂವನು ಕಂಡವ
ಕಲ್ಲೇಶನಿಗೆ ಹೂವನು ತಂದವ.|೭|
ಮಂಗಳ ಗ್ರಹಕೆ ಹೋದರು ಕೂಡ
ರಂಗನ ತಿಳಿವುದಸಂಬವ ನೋಡ.|೮|
ಅಂಗಳದಲ್ಲೂ ಕನಕನ ಕಂಡ
ಕರುಣೆಗೆ ಕರಗುವ ಲಕುಮಿಯ ಗಂಡ.|೯|.

ಅಹೋರಾತ್ರ.
೫:೧೫ ಸಂಜೆ.
೨/೪/೬.

 

Rating
No votes yet