ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!
ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!
ಅವು ನಾವು ಕಂಡಂತೆ ತಿಳಿದಂತೆಯೆ ಆಗಿವೆಯಷ್ಟೇ.
ಸೂರ್ಯನನ್ನು ಇದ್ದಂತೆಯೆ ನೋಡುವುದೆಂದರೆ
ಅಹರ್ನಿಶಿ ಬದುಕಿನಲ್ಲಿ ಬೆಳಕು ಕಂಡಂತೆಯೆ ಸರಿ.
ಅದಕ್ಕಾಗಿಯೆ ನಾವು ಕಾಲವನ್ನು ಮೀರಬೇಕು.
ಕಾಲವನ್ನು ಮೀರುವುದೆಂದರೆ ನಾವು
ದೇಹಾತೀತ ಸಾಂಗತ್ಯದಲ್ಲಿ ಸಮಯದ
ಸಂಶೋಧನೆಗೆ ತೊಡಗಿಸಿಕೊಂಡಂತೆಯೆ.
ಅಂತಹ ಸುಸಮಯದ ಕ್ಷಣಗಳು
ಅಸೀಮ ಸಂಯಮದಲ್ಲಿ ದೊರಕಿದಾಗಲೇ
ಸದ್ಭಾವನೆ ಸಚ್ಛಾರಿತ್ರ್ಯಗಳ ಅರಿವಾಗುವುದೂ ಕೂಡ.
ಅವುಗಳೇ ಏಕೆ ಸಾರ್ವಕಾಲಿಕ ಮೌಲ್ಯಗಳಾಗಿ
ಜನ್ಮಕೊಟ್ಟ ತಾಯಿಯಲ್ಲಿ; ಒಡಹುಟ್ಟಿದ ಅಕ್ಕತಂಗಿಯರಲ್ಲಿ,
ಅಣ್ಣ ತಮ್ಮಂದಿರಲ್ಲಿ ಅಷ್ಟೇ ಅಲ್ಲ ಇತರರಲ್ಲಿಯೂ
ನಮ್ಮೆಲ್ಲರ ಆರೋಗ್ಯಕರ ಸಮಾಜಕ್ಕಾಗಿಯೆ ಮೈದೋರುತ್ತವೆಂಬುದು
ನಿತ್ಯವೂ ಬದುಕಿನಲ್ಲಿ ಎದುರಾಗುವ ನಿಷ್ಠೂರ ಸತ್ಯಗಳೇ ತಿಳಿಸುತ್ತಾ ಹೋಗುತ್ತವೆ.
ಅವನ್ನೆಲ್ಲ ಬಾಯ್ ಮಾತಿನಲ್ಲಿ ಅಲ್ಲಗೆಳೆದಷ್ಟು ಸುಲಭವೇನಲ್ಲ;ಅರಗಿಸಿಕೊಳ್ಳುವುದು.
-ಎಚ್.ಶಿವರಾಂ
[http://youthtimes.blogspot.com|Life Times]
It is to create, and Live in Creative