ಸೂರ್ಯಾಸ್ತ
ಸೂರ್ಯಾಸ್ತದ ಸುಂದರ ಸೊಬಗು
ಮೂಡಿತು ನನ್ನಲಿ ಬೆರಗು
ಧರೆಗೆ ಇಳಿದಿಹ ರವಿತೇಜ
ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ
ನಡುವೆಯೇ ಮೂಡಿತು ಕತ್ತಲಾ ಭೀತಿ
ಹೋಗಲಾದಿಸು ದೇವ ನಿನಗೆ ತೋಚಿದಾ ರೀತಿ
ನೋಡ ನಿಂತೆ ನಭವನ್ನ
ಮೂಡಿದವು ತಾರೆಗಳು, ಚಂದ್ರಮನು ಬಂದ
ತೊಳಲಾಡುತ್ತಿದ್ದ ಮನಕ್ಕೆ ತಂಪಿನ ರಸಧಾರೆಯನ್ನು ತಂದ
ದೇವ ನಿನ್ನ ಮಹಿಮೆ ಅಪಾರ
ತೋರಿಹೆ ಬಾಳಿನ ಸಾೞಾತ್ಕಾರ
Rating