ಸೂರ್ಯ ಕಾಲು
ನಡೀವಾಗ ಯಾರಾದರೂ ಜತೆಗೆ ಬೇಕು.
ಬೇರೇ ಬೇರೇ ಸೂರ್ಯನ ಬೆಳಕಿಗೆ ಮೈಕಾಯಿಸಿಕೊಂಡಿದ್ದರೂ ಪರವಾಗಿಲ್ಲ. ಜತೆಗಿರಬೇಕು. ಜತೆಗಿರೋ ಮನಸ್ಸಿದ್ದರೂ ಸುಲಭ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ನಮೂನೆ ಕಾಲು. ಆನೆ ಕಾಲು, ಕುದುರೆ ಕಾಲು, ಇಲಿ ಕಾಲು. ಕೆಲವರಿಗೆ ಹಕ್ಕಿ ಕಾಲು. ಇನ್ನು ಕೆಲವರಿಗೆ ಕಾಲಿಲ್ಲದೇನೂ ಹೋಗತೀನಿ ಅನ್ನೋ ಹಾವಿನ ಛಲವೇ ಕಾಲು.
ತುಂಬಾ ದೂರದ ದಾರಿ;
ಏರು ಪೇರು;
ಹಳ್ಳ ಕೊಳ್ಳ;
ಬೆಟ್ಟ ಕಣಿವೆ;
ಟ್ರಾಫಿಕ್ಕು ಹೊಗೆ;
ತುಂಬಾ ಗೋಜಲಿನ ದಾರಿ;
ಸುಸ್ತಾದರೆ ಏನು ಮಾಡೋದು? ಕೇಳೋದು ಏನು ಬಂತು? ಜೇಬಿಂದ ಒಂದು ಮರ ತೆಗೆದು ನೆಟ್ಟುಕೊಂಡು, ಅದರ ನೆರಳಲ್ಲಿ ಕೂರೋದು. ಸೂರ್ಯನ ಝಳ ಜಾಸ್ತಿ ಆಯ್ತ? ಅವನನ್ನ ಸಮುದ್ರದಲ್ಲಿ ಮುಳುಗಿಸೋದು. ಜೋಳಿಗೆಯಿಂದ ಒಂದು ತುಂಡು ಚಂದ್ರನ್ನ ತೆಗೆದು ಮೋಡದ ಹಿಂದೆ ನೇತು ಹಾಕೋದು.
ರಸಿಕತೆ ಉಕ್ಕಿದರೆ ಇದ್ದೇ ಇದೆ;
ಹಾಡು ಪಾಡು;
ಜಗಳ ಪ್ರೀತಿ;
ಫೋಟೋ ಫಿಲ್ಮು;
ಕತೆ ಕಾವ್ಯ;
ರಸಿಕತೆ ಉಕ್ಕಿದರೆ ತಪ್ಪದೆ.
ಸೂರ್ಯ ಯಾವುದಾದರೇನು? ಕಾಲು ಯಾವುದಾದರೇನು?
ಜೇಬಲ್ಲಿ ಮರ ಇರಬೇಕು.
ಜೋಳಿಗೇಲಿ ಚಂದ್ರ ಇರಬೇಕು.
ನಡೀವಾಗ ಯಾರಾದರೂ ಜತೆ ಇರಬೇಕು.
Comments
ಉ: ಸೂರ್ಯ ಕಾಲು
In reply to ಉ: ಸೂರ್ಯ ಕಾಲು by keshav
ಉ: ಸೂರ್ಯ ಕಾಲು
ಉ: ಸೂರ್ಯ ಕಾಲು
In reply to ಉ: ಸೂರ್ಯ ಕಾಲು by ವೈಭವ
ಉ: ಸೂರ್ಯ ಕಾಲು
In reply to ಉ: ಸೂರ್ಯ ಕಾಲು by ವೈಭವ
ಉ: ಸೂರ್ಯ ಕಾಲು
In reply to ಉ: ಸೂರ್ಯ ಕಾಲು by anivaasi
ಉ: ಸೂರ್ಯ ಕಾಲು