ಸೃಷ್ಟಿ !

ಸೃಷ್ಟಿ !

ಇವತ್ತು ನಾನು ಬಿಗ್ ಬ್ಯಾಂಗ್ ಸಿದ್ಧಾಂತ ಮತ್ತು ಈ ಸೃಷ್ಟಿ ಯ ಬಗ್ಗೆ ಬರೆಯಲು ಯತ್ನಿಸುತ್ತಿದ್ದೀನಿ.

BigBang ಪದವನ್ನು ಕನ್ನಡಕ್ಕೆ ತರುವಾಗ ಬಹಳಷ್ಟು ಜನರು "ಮಹಾ ಸ್ಪೋಟ" ಎಂದೇ ಅನುವಾದಿಸಿದ್ದಾರೆ. ಅಂದರೆ ಬಿಗ್ ಬ್ಯಾಂಗ್ ಅಂದ್ರೆ "Space-Time" ( ದೇಶ -ಕಾಲ) ನ explosion ಅನ್ನುವ ರೀತಿಯಲ್ಲಿ ಬಳಸಿದ್ದಾರೆ. ಆದರೆ ಇದರ ಸರಿಯಾದ ಅನುವಾದ expansion ಅನ್ನುವ ರೀತಿ ಇರಬೇಕು. "ಮಹಾನ್ ಆರೋಹಣ". ಎನ್ನುವ ಪದ ಹೇಗೆ? ದಯವಿಟ್ಟು ಬರೆಯಿರಿ.

ಈ ಬಿಗ್ ಬಾಂಗ್ ಸಿದ್ಧಾಂತದ ಬಗ್ಗೆ ಬಹಳಷ್ಟು ವಿರೋಧ ಹೇಳಿಕೆಗಳು ಮೂಡಿಬಂದಿವೆ . ( ಅದ್ರ ಬಗ್ಗೆ ಒಮ್ಮೆ ಬರೆಯಲು ಯತ್ನಿಸುತ್ತೀನಿ) . ಆದ್ರೂ ಈ ವಾದವನ್ನು ಪೂರ್ಣ ಬುಡಮೇಲು ಮಾಡುವಂಥ ಗಟ್ಟಿಯಾದಂತಹ ಸಿದ್ದಾಂತಗಳು ಬಂದಿಲ್ಲ ಅಂತಾನೆ ಹೇಳ್ಬೇಕು.

ಒಂದು ಕಾಲದಲ್ಲಿ ಈ ಬ್ರಹ್ಮಾನ್ಡ ಕೇವಲ ಒಂದು ಒಂದು ಬಿಂದಿವಾಗಿತ್ತು. ಶತಕೋಟಿಯ , ಶತಕೋಟಿಯ, ಶತಕೋಟಿಯ, ಶತಕೋಟಿಯ , ಶತಕೋಟಿ ಮೀಟರ್‌ನ ಒಂದಂಶ ವ್ಯಾಸದ ಒಂದು ಯಾಕಶಿತ್ತ್ ಬಿಂದು! ( ಊಹಿಸಿಕೊಳ್ಳಿ!?). ಇಷ್ಟೊಂದು ಚಿಕ್ಕ ಬಿಂದು ನಮ್ಮ ಇವತ್ತಿನ ಜಗತ್ತಿಗೆ ಜನ್ಮ ನೀಡಿದೆ ಎಂದರೆ ನಂಬಲು ಸ್ವಲ್ಪ ಕಷ್ಟವೇ ಸರಿ.
ಸೃಷ್ಟಿಯ ಆದಿಯಿನ್ದ ಈಗಿನವರೆಗೆ "ಕಾಲದ" ಮಾಪನದಲ್ಲಿ ಏನಾಯ್ತು ಅಂತ ತಿಳಿದುಕೊಳ್ಳುವ ಯತ್ನವನ್ನೂ ಮಾಡೋಣ.

1. ಪ್ಲ್ಯಾಂಕ್ ಅವಧಿ. ( The Plank Epoch.)......
ಕಾಲ = ಸೊನ್ನೆಯಿಂದ ಕಾಲ = 10e-43 ಸೆಕೆಂಡುಗಳು ವರೆಗೆ
ತಾಪಮಾನ: 10e32 degree Kelvin ಗಿಂತ ಹೆಚ್ಚು.

ಈ ಸಮಯದಲ್ಲಿ ಏನಾಯಿತು ಅಂತ ಯಾರಿಗೂ ಗೊತ್ತಿಲ್ಲ. ಹೇಳೊದು ಬಹಳಷ್ಟು ಕಷ್ಟ. ಏಕೆಂದರೆ "ದೇಶ- ಕಾಲದ ಸಂಕೋಚನ ( compression) ಅದೆಷ್ಟು ಹೆಚ್ಚಾಗಿರುತ್ತೆ ಅಂದರೆ ಅದನ್ನ ಅರ್ಥ ಮಾಡಿಕೊಳ್ಳಲು Quantaum gravity ಯ ವಿವರಣೆಯೇ ಬೇಕು. Quantum Gravity ಸಿದ್ಧಾಂತಗಳು ನಮಗೆ ಸ್ರುಷ್ಟಿಯ ಆದಿಯಲ್ಲಿ ನ ನಮ್ಮ ವಿಶ್ವದ ರೂಪುರೇಶೆಯನ್ನು ಕೊಡಲು ಯತ್ನಿಸುತ್ತವೆ. ನಮಗೆ ಈ ಕಾಲಕ್ಕೆ ಗೊತ್ತಿರುವ ಕೆಲವೊಂದು ಅತ್ಯುತ್ತಮ ಕ್ವ್ಯಾಂಟಮ್ ಗ್ರಾವಿಟಿ ಸಿದ್ಧಾಂತಗಳು ಸೃಷ್ಟಿಯ ಆದಿಯಲ್ಲಿ ಏನಾಯ್ತು ಅಂತ ಹೇಳಬಹುದು. ಆದರೆ ಇವು ಹೇಳಿದ್ದೇ ಸರಿನಾ... ಅತ್ವಾ ತಪ್ಪಾ.. ಅಂತ ನಾವು ಈಗ್ಲೇ ಒಂದು ತೀರ್ಪು ಕೊಡಲು ಬರುವುದಿಲ್ಲ.

2. ಕಾಲ = 10e-43 ಇಂದ 10e-35 ಸೆಕಂಡುಗಳು.
The Grand Unification Epoch.

ಪ್ಲಾಂಕ್‌ನ ಅವಧಿಯ ನಂತರ .. ಈ Grand Unification ಅವಧಿಯಲ್ಲಿ ನಾವು ಸ್ವಲ್ಪ ಆ ಕಾಲದಲ್ಲಿ ಏನಾಯ್ತು ಎಂದು ಹೇಳುವ ಒಂದು ಗಟ್ಟೀ ನೆಲೆಗೆ ಬಂದು ನಿಲ್ಲುತ್ತೀವಿ!.

ಈ ಜಗತ್ತಿನ ಎಲ್ಲ fundamental Forces (= ಮೂಲಭೂತ ಶಕ್ತಿಗಳು?) .. Gravity ಯನ್ನು ಹೊರತುಪಡಿಸಿ.. ಕೂಡಿಕೊಂಡಿರುತ್ತವೆ. ಅದನ್ನ the Grand Unfied Force ಅಂತ ಕರೆಯುತ್ತಾರೆ. ಈ ಎಲ್ಲ findamental forces ಒಗ್ಗೂಡಿರುತ್ತವೆ ಅಂತ ಯಾಕೆ ಕರೆಯುತ್ತೇವೆ ಅಂದರೆ .. ತಾಪಮಾನ ಹೆಚ್ಚಾದಂತೆ ಎಲ್ಲ forces, ಒಂದೇ ರೀತಿ ವರ್ತಿಸಲು ಶುರು ಮಾಡುತ್ತವೆ. ಸಂಕ್ಷಿಪ್ತವಾಗಿ ಹೇಳ್ಬೇಕು ಅಂದ್ರೆ ಈ ಜಗತ್ತಿನ ಎಲ್ಲ strong forces, Electromagnetic forces ಮತ್ತು weak forces ... ಆ ಅತಿ ಹೆಚ್ಚಿನ ತಾಪಮಾನದಲ್ಲಿ ಒಂದರಿಂದ ಇನ್ನೊಂದಕ್ಕೆ ಯಾವುದೇ ಭೇದವಿರುವುದಿಲ್ಲ.

ಗ್ರಾವಿಟಿಯನ್ನು ಹೊರತುಪಡಿಸಿ ಉಳಿದ ಶಕ್ತಿಗಳನ್ನು ವಿವರಿಸಲು ನಮಗೆ ಕ್ವಾನ್‌ಟಮ್ ಮೆಖಾನಿಕಲ್ ವಿವರಣೆಗಳು ನಮಗೆ ಲಭ್ಯ. ಆದ್ರೆ ಗ್ರಾವಿಟಿ ಯನ್ನು ವಿವರಿಸಲು ನಮಗೆ ಯಾವುದೇ Quantum Mechanical ವಿವರಣೆಗಳು ಲಭ್ಯವಿಲ್ಲ. ಆದ್ದರಿಂದಲೇ ನಮಗೆ ಮೊದಲ ಕಾಲಗಟ್ಟದಲ್ಲಿ ಆದಂತಹ ( ಗ್ರಾವಿಟಿಯೂ ಇತರೆ findamental forces ಜೊತೆ ಕೂಡಿಕೊಂಡಿತ್ತು. 2 ನೇ ಕಾಲಗಟ್ಟದಲ್ಲಿ ಬೇರೆಯಾಯಿತು.) ಪರಿಣಾಮಗಳು ಸರಿಯಾಗಿ ತಿಳಿದಿಲ್ಲ.

3. time= 10e -35 to 10e -32

Inflationary Epoch. ಉಬ್ಬರದ ಅವಧಿ.

ಈ ಸಮಯದಲ್ಲಿ ನಾವು ಏನು ಸ್ಫೊಟ ಅಂತ ಓದಿಕೊಂಡಿದ್ದೇವೆಯೋ ಅದು ಆಯ್ತು. ಸ್ಪೋಟ ಅಂತ ಕರೆಯುವುದು ತಪ್ಪಾಗುತ್ತೆ ಅಂತ ನಾನು ಈಗಾಗ್ಲೇ ಹೇಳಿದ್ದೇನೆ. ಈ ಕಾಲಗಟ್ಟದಲ್ಲಿ ವಿಸ್ತರಣೆ ತುಂಬಾ ಜೋರಾಗಿ ಆಗುತ್ತೆ. ಈ ಅತಿ ವೇಗವಾಗಿ ಆಗುವ ವಿಸ್ತರಣೆಯನ್ನು ಇಂದು ನಾವು "Inflation" (ಉಬ್ಬರ?) ಅಂತ ಕರೆಯುತ್ತೇವೆ.

ಒಂದು ಪ್ರಬಲವಾದ nuclear force ಒಂದು ekectro weak force ನಿಂದ ಬೇರೆಯಾದಾಗ, ಅತ್ವ ಒಂದು ಪ್ರಬಲವಾದ electromagnetic force ದುರ್ಬಲವಾದ nuclear force ಜೊತೆ ಒಂದಾದಾಗ..ಅದು ಇನ್ಫೊಟಾನ್ (field )ಉತ್ಪತ್ತಿಗೆ ಕಾರಣವಾಗುತ್ತೆ.

..................to be continued...

Rating
No votes yet

Comments