ಸೆಂಟ್ರಲ್ ಜೈಲಲ್ಲಿ ಎರಡು ಗಂಟೆ!

ಸೆಂಟ್ರಲ್ ಜೈಲಲ್ಲಿ ಎರಡು ಗಂಟೆ!

'ನನಗೂ ಕೊಲೆಗಡುಕರಿಗೂ ಕೇವಲ ಒಂದು ಗೋಡೆ ಅಂತರ!' ಪ್ರತೀ ಬಾರಿ ಸೆಂಟ್ರಲ್ ಜೈಲ್ ಪಕ್ಕದ ರೋಡಲ್ಲಿ ಹೋಗುವಾಗ ಯೋಚಿಸುತ್ತಿದ್ದೆ. ಸಿನಿಮಾಗಳಲ್ಲಿ ವಿಲನ್/ಹೀರೋಗಳು ಅಲ್ಲಿಯ ಪುಟ್ಟ ಬಾಗಿಲಿನ ಮೂಲಕ ಒಳಹೋಗುವುದು/ಹೊರಬರುವುದು ನೋಡಿದ್ದೆ. ಅದೇ ಪುಟ್ಟ ಬಾಗಿಲಲ್ಲಿ ನಿನ್ನೆ ನಾನೂ ಒಳಹೋದೆ! ಎಲ್ಲೋ ಬೆರಳೆಣಿಕೆಯಷ್ಟೇ ಸೆಕ್ಯೂರಿಟಿಗಳಿದ್ದರು. ಒಳಗೆ ಗಂಡಸರು,ಹೆಂಗಸರು, ಮಕ್ಕಳು ಆರಾಮ ಓಡಾಡಿಕೊಂಡಿದ್ದರು! ನಾನು ಕೂತಿದ್ದ ಜೈಲು ಬೆಡ್ ಪಕ್ಕದ ಬೆಡ್ಡಲ್ಲಿ ಕೂತಿದ್ದ ಹೆಣ್ಣಿನ ಬಳಿ 'ನಿಮಗೆ ಎಷ್ಟು ವರ್ಷ ಶಿಕ್ಷೆ?' ಎಂದೆ.  ಕೋಪಿಸಿಕೊಂಡು ಎದ್ದು ಹೋದಳು.  ಇಲ್ಲಿ ನೀರಿನ ಕಾರಂಜಿ, ಫೋಟೋ ಗ್ಯಾಲರಿ, ಬಯಲು ರಂಗಮಂದಿರ, ಪಾರ್ಕ್, ಮಕ್ಕಳಿಗೆ ಆಡಲು ಸ್ಥಳ ಎಲ್ಲಾ ಇದೆ.  ಕೆಲವು ಇನ್ನೂ ನಿರ್ಮಾಣ ಹಂತದಲ್ಲಿದೆ. ಜನ ಜಾಸ್ತಿ ಬರುತ್ತಾ ಇಲ್ಲ (ಕ್ರಿಕೆಟ್ ಮ್ಯಾಚ್ನಿಂದಾಗಿ?). ಬೆಂಗಳೂರಲ್ಲಿದ್ದರೆ ಒಮ್ಮೆ ಸುತ್ತಾಡಿ ಬನ್ನಿ-ಫ್ರೀಡಂಪಾರ್ಕ್(ಸ್ವಾತಂತ್ರ್ಯ ಉದ್ಯಾನವನ) -ಗಣೇಶ.





Rating
No votes yet

Comments