ಸೆಕೆ ಸೆಕೆ ತಾಳೆನು ಈ ಸೆಕೆಯಾ..

ಸೆಕೆ ಸೆಕೆ ತಾಳೆನು ಈ ಸೆಕೆಯಾ..

ಚಿತ್ರ

ಬೇಸಿಗೆ ರಜಾ ಬಂತೆಂದರೆ ನಾಸ್ಟಾ, ಊಟ, ನಿದ್ರೆಗೆ ಮಾತ್ರ ಮನೆಯಲ್ಲಿ ಅಟೆಂಡೆನ್ಸ್ ಕೊಟ್ಟು, ಉಳಿದಂತೆ ಆಟದ ಮೈದಾನದಲ್ಲೇ ನನ್ನ ಮತ್ತು ಗೆಳೆಯರ ವಾಸ್ತವ್ಯ--ಅಂದ ಕಾಲತ್ತಿಲ್ಲ್ :)
ಸಂಜೆ ಸುತ್ತುಮುತ್ತಲಿನ ಗೇರು,ಮಾವು, ನೇರಳೆ, ನಾಣಿಲೆ ಮರಗಳಿಗೆ ಧಾಳಿ ಮಾಡಿ, ಹೊಟ್ಟೆ ತುಂಬಿಸಿ, ಸಮೀಪದ ಲೈಬ್ರೇರಿಗೆ ನುಗ್ಗಿ, ಅಲ್ಲಿನ ಬಾಗಿಲು ಮುಚ್ಚುವವರೆಗೆ ಕಾರ್ಟೂನ್ ಇತ್ಯಾದಿ ಪುಸ್ತಕ ಓದಿ, ನಂತರ ಮನೆಗೆ ಹಿಂತಿರುಗುತ್ತಿದ್ದೆವು.
ಅದೇ ದಕ್ಷಿಣ ಕನ್ನಡದ ಮಂಗಳೂರಿಗೆ ಈಗ್ಗೆ ಒಂದು ಹದಿನೈದು ದಿನ ಮೊದಲು ಹೋಗಿದ್ದೆ.....ಸಮಾರಂಭವೊಂದಕ್ಕೆ. ಪರಿಚಿತರನ್ನು ಹುಡುಕಿ ಮಾತನಾಡಿಸುವ ಮೊದಲು ಮೇಲೆ ನೋಡುತ್ತಿದ್ದೆ. ನಾನು ಮಾತ್ರವಲ್ಲ- ಪ್ರತಿಯೊಬ್ಬರೂ! ಎಲ್ಲಿ fan ಇದೆಯೋ, ಅದರಡಿಯಲ್ಲೇ ಎಲ್ಲಾ ಒಟ್ಟಾಗಿ ಮಾತುಕತೆ. ಮಾತುಕತೆಯ ಪ್ರಾರಂಭ ಅಥವಾ ಕೊನೆಗೆ "ಸೆಕೆ" ವಿಷಯ ಬಂದೇ ಬರುವುದು. Fan ಅಡಿಯಲ್ಲಿ ಬೆವರಿಕೊಂಡೇ ಬಿಸಿ ಬಿಸಿ ಊಟ ಮುಗಿಸಿ ಹೊರಟು ಬಂದೆ. ಕಾವಲಿಯಿಂದ ಬೆಂಕಿಗೆ ಬಿದ್ದ ಹಾಗೇ ಆಯಿತು. ಪುಣ್ಯಾತ್ಮರು, ಒಂದೇ ಒಂದು ಮರನೂ ರಸ್ತೆಯಲ್ಲಿ ಉಳಿಯಲು ಬಿಟ್ಟಿಲ್ಲ. ಬೇರೆ ಸುತ್ತಾಟ, ನೆಂಟರ ಮನೆಗೆ ಹೋಗುವುದು, ಎಲ್ಲಾ ಕ್ಯಾನ್ಸಲ್ ಮಾಡಿ, ರಿಕ್ಷಾ ಹತ್ತಿ, ಜ್ಯೋತಿ ಟಾಕೀಸ್ ಬಸ್ ಸ್ಟಾಪ್‌ಗೆ ಬಂದೆ. ಒದ್ದೆ ಕರ್ಚೀಪನ್ನು ಹಿಂಡಿ ಹಿಂಡಿ ಮುಖ ಒರೆಸುತ್ತಿದ್ದಾಗ, ಬೆಂಗಳೂರಿಗೆ ಹೋಗುವ ವೊಲ್ವೋ ಬಸ್ ಬರುತ್ತಿರುವುದು ಕಾಣಿಸಿತು. ಸುತ್ತಮುತ್ತ ಯಾರು ಇಲ್ಲದಿರುತ್ತಿದ್ದರೆ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ..  ಬಸ್ ಹತ್ತಿ (ಬಸ್ಸಲ್ಲಿ ೧೦-೧೨ ಮಂದಿ ಇದ್ದರು ಅಷ್ಟೆ) ಅಕ್ಕಪಕ್ಕದ ಸೀಟಿನ ಎಸಿಯನ್ನೆಲ್ಲಾ ನನ್ನ ಕಡೆಗೆ ತಿರುಗಿಸಿ, ಕಂಡಕ್ಟರ್ ಕೊಟ್ಟ ಮಿನರಲ್ ವಾಟರ್ ಗಟಗಟ ಕುಡಿದು, ಕಾಲು ನೀಡಿ, ಹಾಯಾಗಿ ಮಲಗಿದೆ. ಎಚ್ಚರವಾದಾಗ ಬೆಂಗಳೂರಲ್ಲಿದ್ದೆ- ಇಲ್ಲಿನ ಹವೆ ಹಾಯೆನಿಸಿತು.:) ಇನ್ನು ಮುಂದೆ ಎಪ್ರಿಲ್ ಮೇ ತಿಂಗಳಲ್ಲಿ ಮಂಗಳೂರು ಕಡೆ ಹೋಗಲೇ ಬಾರದು ಅಂತ ತೀರ್ಮಾನಿಸಿದೆ.
ಏನು ಮಾಡಲಿ? ಕಳೆದ ವಾರ ಪುನಃ ಒಂದು ಪಂಕ್ಷನ್‌ಗೆ ಊರಿಗೆ ಹೋಗಲೇ ಬೇಕಾಗಿ ಬಂತು. ಈ ಸಲ ನಾನು ಪೂರ್ತಿ ತಯಾರಿಯೊಂದಿಗೇ ಹೋಗಿದ್ದೆ. ಬಿಳಿ ಪಂಚೆ ಉಟ್ಟುಕೊಂಡು, ಮೈಮೇಲೆ ಒದ್ದೆ ಮಾಡಿದ ಖಾವಿ ಬಟ್ಟೆ ಹೊದೆದುಕೊಂಡು, ಕಪ್ಪು ಕೊಡೆಯಡಿಯಲ್ಲಿ ಬರುತ್ತಿದ್ದುದನ್ನು ಕಂಡ "ಸೂರ್ಯ" ಥಂಡಾ! "ಏನ್ರೀ ಗಣೇಶರೆ? ಹೊಸ ಅವತಾರ?" ಎಂದು ಪರಿಚಿತರು ಹಾಸ್ಯ ಮಾಡಿದರು. ಮಾಡಲಿ ಬಿಡಿ. ಈ ಅವತಾರದಿಂದಾಗಿ ಬೇಗನೇ ಬೆಂಗಳೂರಿಗೆ ಹಿಂದಿರುಗುವ ಯೋಚನೆ ಬಿಟ್ಟು ಸುತ್ತಾಡಲು ಆಯಿತು.
 ನಾನು ಬಾಲ್ಯದಲ್ಲಿ ೫-೬ ಬಾರಿ ಹತ್ತಿಳಿದಿರುವ "ಜಮಲಾಬಾದ್ ಕೋಟೆ"ಯನ್ನು ನನ್ನ ಮನೆಯವರಿಗೆ ( ಜತೆಗೆ ಸಂಪದ ಮಿತ್ರರಿಗೂ) ತೋರಿಸಬೇಕೆಂದಿದ್ದೆ. ಮಂಗಳೂರಿಂದ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ, ಬೆಳ್ತಂಗಡಿ ಸೇತುವೆ ದಾಟಿದ ನಂತರ,  ಎಡಕ್ಕೆ ಎರಡು ಕಿ.ಮೀ. ಹೋದರೆ ಸಿಗುವುದು. ಈ ಗಡಾಯಿ ಕಲ್ಲು(ಜಮಲಾಬಾದ್ ಕೋಟೆ) ನೋಡಲು ಎರಡು ಕಣ್ಣು ಸಾಲದು. ಸುಂದರ್ ಅತೀ ಸುಂದರ್. ನಾನಂತೂ ಹತ್ತಲು ಆಗಲೇ ರೆಡಿಯಾಗಿದ್ದೆ. ಜತೆಯಲ್ಲಿದ್ದವರು ಈ ಬಿಸಿಲಿಗೆ ಬೇಡ, ಮುಂದಿನ ಅಕ್ಟೋಬರ್ ರಜೆಯಲ್ಲಿ ಖಂಡಿತಾ ಹೋಗೋಣ ಎಂದು ಭರವಸೆ ನೀಡಿದ್ದರಿಂದ ಹಿಂದೆ ಬಂದೆ.
ಧರ್ಮಸ್ಥಳ, ಮಂಗಳೂರು ಕಡೆ ಹೋದರೆ ಗಡಾಯಿಕಲ್ಲು ಮರೆಯದಿರಿ.

http://kanaja.in/%E0%B2%86%E0%B2%95%E0%B2%B0%E0%B3%8D%E0%B2%B7%E0%B2%95-%E0%B2%9A%E0%B2%BE%E0%B2%B0%E0%B2%A3-%E0%B2%A4%E0%B2%BE%E0%B2%A3-%E0%B2%8F%E0%B2%95-%E0%B2%B6%E0%B2%BF%E0%B2%B2%E0%B2%BE-%E0%B2%AA%E0%B2%B0/

http://mangalorehistory.blogspot.in/2012/05/blog-post_14.html

Rating
No votes yet

Comments

Submitted by venkatb83 Thu, 05/09/2013 - 21:44

ಗಣೇಶ್ ಅಣ್ಣ ಅವರು ಬಿರು ಬೇಸಗೆಯಲ್ಲಿ ಸಮುದ್ರದ ಕಡೆಗೆ ಹೋಗಿದ್ದು ಅಲ್ಲಿ ಸೂರ್ಯ ತನ್ನ ಪ್ರತಾಪ ತೋರಿಸಿದ್ದು ...!! ಎಲ್ಲೆಡೆ ಮರ ಕಡಿದು ಅಭಿವೃದ್ಧಿ ಮಾಡಿರುವ ನಮಗೆ ಮರಗಳ ಮಹತ್ವ ಈ ರೀತಿ ಬೆವರಲ್ಲಿ ಗೊತ್ತಾಗುತ್ತಿದೆ ಅನ್ಸುತ್ತೆ ...!! ಇದನ್ನು ನಾ ಓದ್ಬ್ವಾಗ ಇಲ್ಲಿ ಬೇಜಾನ್ ಮಳೆ ಸೋ- ಧರೆ ತಂಪಾಗಿದೆ ...!! ಅದೊಮ್ಮೆ ಉಡುಪಿ ಬೀಚ್ ಗೆ ಹೋದಾಗ ಸಮುದ್ರ ಹತ್ತಿರ ಆದರೂ ವಿಪರೀತ ಸೆಕೆ ಅನ್ನಿಸಿತು ... ಬಹುಶ ಅದ್ಕೆ ಸಮುದ್ರದ ಕಡೆಯಿಂದ ಬೀಸಿ ಬರುವ ಬಿಸಿ ಗಾಳಿ ಅನ್ಸಿತು .. ನನ್ನ ಊಹೆ ಸಮುದ್ರ ನದಿ ಹತ್ತಿರವಿದ್ದರೆ ಅಲ್ಲಿ ತಂಪು ಇರಲಿದೆ ಅನ್ನೋದಾಗಿತ್ತು ..!! ನೀವ್ ಹಾಕಿದ ಚಿತ್ರಗಳನ್ನು ಗಮನಿಸಿದಾಗ ಅಲ್ಲಿಗೆ ಹೋಗುವ ದಾರಿ ಮಣ್ಣಿನದು ಅನ್ಸುತ್ತೆ ...ಆದರೂ ಅಲ್ಲಿ ಒಂದು ಪುಟ್ಟ ಟ್ರಕ್ ಹೋದ ಹಾಗಿರುವುದುಅರಿನ್ದ ಬೇಸಗೆ ಚಳಿಗಾಲದಲ್ಲಿ ಹೋಗಬಹುದು ಅನ್ಸುತ್ತೆ .. ಅದನ್ನೂ ಒಮ್ಮೆ ನೋಡುವ .... ಪಂಚೆ ಜುಬ್ಬಾ ಹಾಕಿದ ಗಣೇಶ್ ಅಣ್ಣ ಅವರ ದಿವ್ಯ ದರ್ಶನ ಮಂಗಳೂರಿಗರಿಗೆ ಆಯ್ತು .....!! ಮೊನ್ನೆ ಅಲ್ಲಿ ನಮ್ಮವರು ಪ್ರವಾಸಕ್ಕೆ ಬಂದು ವೀಡಿಯೊ ಮಾಡಿರುವರು ಅದ್ರಲ್ಲಿ ನೀವಿರಬಹುದು ನೋಡುವ ..!!!
....

ಮುಂದಿನ ಪ್ರವಾಸ ಎಲ್ಲಿಗೋ ?
ಎಂದಿನಂತೆ ವಿಶೇಷ ಸ್ಥಳಕ್ಕೆ ಅನ್ಸುತ್ತೆ..
ಸಚಿತ್ರ ಸಹಿತ ಮಾಹಿತಿಗೆ ನನ್ನಿ...

ಶುಭವಾಗಲಿ....

\|

Submitted by ಗಣೇಶ Sat, 05/11/2013 - 00:02

In reply to by venkatb83

>>>ನನ್ನ ಊಹೆ ಸಮುದ್ರ ನದಿ ಹತ್ತಿರವಿದ್ದರೆ ಅಲ್ಲಿ ತಂಪು ಇರಲಿದೆ ಅನ್ನೋದಾಗಿತ್ತು ..!---ಮ್ಯಾತ್ಸೋ,ಬಯಾಲಜಿಯಲ್ಲೋ ಇತ್ತಲ್ವಾ? ಬೇಸಗೆಯಲ್ಲಿ ಕರಾವಳಿಯಲ್ಲಿ ನೆಲ ಬೇಗನೆ ಜಾಸ್ತಿ ಬಿಸಿಯಾಗಿ, ಗಾಳಿ ಮೇಲಕ್ಕೇರಿ, ಸಮುದ್ರದಿಂದ ತಂಪಾದ ಗಾಳಿ ನೆಲದ ಕಡೆ ಬೀಸುವುದು. ಈಗ ಸಮುದ್ರದೊಂದಿಗಿನ ಅಗ್ರೀಮೆಂಟ್ ಲ್ಯಾಪ್ಸ್ ಆಗಿರಬಹುದು.ತಂಪುಗಾಳಿ ನೆಲದ ಕಡೆ ಬರುತ್ತಿಲ್ಲ.ಕರಾವಳಿಯ ಬಿಸಿಗಾಳಿ ಮೇಲೇರಿ ಗಾಳಿಯೇ ವಿರಳ- ಫ್ಯಾನ್ ಎಷ್ಟು ತಿರುಗಿದರೂ ಗಾಳಿಯೇ ಇಲ್ಲದಿದ್ದರೆ ಏನು ಪ್ರಯೋಜನ?:( ; >>> ಇದನ್ನು ನಾ ಓದ್ಬ್ವಾಗ ಇಲ್ಲಿ ಬೇಜಾನ್ ಮಳೆ ಸೋ- ಧರೆ ತಂಪಾಗಿದೆ ...!!---ನಾನಿನ್ನು ಹವಾಮಾನದ ಬಗ್ಗೆ ಕಂಪ್ಲೈಂಟ್ ಮಾಡುವುದಿಲ್ಲ. ನಿನ್ನೆಯೂ ಮಳೆಯಲ್ಲಿ ನೆನೆದು ಬಂದಿದ್ದೆ. ಈದಿನ ಗಾಳಿ, ಗುಡುಗು, ಸಿಡಿಲು,ಮಳೆ, ಪೂರ್ತಿ ಒದ್ದೆ,ಟ್ರಾಫಿಕ್ ಜಾಮ್..:( ; >>>ಮುಂದಿನ ಪ್ರವಾಸ ಎಲ್ಲಿಗೋ ? ಎಂದಿನಂತೆ ವಿಶೇಷ ಸ್ಥಳಕ್ಕೆ ಅನ್ಸುತ್ತೆ..---ನೆಕ್ಸ್ಟ್- boulevard, M G Road.ಧನ್ಯವಾದ ಸಪ್ತಗಿರಿವಾಸಿಗೆ.

Submitted by venkatb83 Thu, 05/09/2013 - 21:44

ಗಣೇಶ್ ಅಣ್ಣ ಅವರು ಬಿರು ಬೇಸಗೆಯಲ್ಲಿ ಸಮುದ್ರದ ಕಡೆಗೆ ಹೋಗಿದ್ದು ಅಲ್ಲಿ ಸೂರ್ಯ ತನ್ನ ಪ್ರತಾಪ ತೋರಿಸಿದ್ದು ...!! ಎಲ್ಲೆಡೆ ಮರ ಕಡಿದು ಅಭಿವೃದ್ಧಿ ಮಾಡಿರುವ ನಮಗೆ ಮರಗಳ ಮಹತ್ವ ಈ ರೀತಿ ಬೆವರಲ್ಲಿ ಗೊತ್ತಾಗುತ್ತಿದೆ ಅನ್ಸುತ್ತೆ ...!! ಇದನ್ನು ನಾ ಓದ್ಬ್ವಾಗ ಇಲ್ಲಿ ಬೇಜಾನ್ ಮಳೆ ಸೋ- ಧರೆ ತಂಪಾಗಿದೆ ...!! ಅದೊಮ್ಮೆ ಉಡುಪಿ ಬೀಚ್ ಗೆ ಹೋದಾಗ ಸಮುದ್ರ ಹತ್ತಿರ ಆದರೂ ವಿಪರೀತ ಸೆಕೆ ಅನ್ನಿಸಿತು ... ಬಹುಶ ಅದ್ಕೆ ಸಮುದ್ರದ ಕಡೆಯಿಂದ ಬೀಸಿ ಬರುವ ಬಿಸಿ ಗಾಳಿ ಅನ್ಸಿತು .. ನನ್ನ ಊಹೆ ಸಮುದ್ರ ನದಿ ಹತ್ತಿರವಿದ್ದರೆ ಅಲ್ಲಿ ತಂಪು ಇರಲಿದೆ ಅನ್ನೋದಾಗಿತ್ತು ..!! ನೀವ್ ಹಾಕಿದ ಚಿತ್ರಗಳನ್ನು ಗಮನಿಸಿದಾಗ ಅಲ್ಲಿಗೆ ಹೋಗುವ ದಾರಿ ಮಣ್ಣಿನದು ಅನ್ಸುತ್ತೆ ...ಆದರೂ ಅಲ್ಲಿ ಒಂದು ಪುಟ್ಟ ಟ್ರಕ್ ಹೋದ ಹಾಗಿರುವುದುಅರಿನ್ದ ಬೇಸಗೆ ಚಳಿಗಾಲದಲ್ಲಿ ಹೋಗಬಹುದು ಅನ್ಸುತ್ತೆ .. ಅದನ್ನೂ ಒಮ್ಮೆ ನೋಡುವ .... ಪಂಚೆ ಜುಬ್ಬಾ ಹಾಕಿದ ಗಣೇಶ್ ಅಣ್ಣ ಅವರ ದಿವ್ಯ ದರ್ಶನ ಮಂಗಳೂರಿಗರಿಗೆ ಆಯ್ತು .....!! ಮೊನ್ನೆ ಅಲ್ಲಿ ನಮ್ಮವರು ಪ್ರವಾಸಕ್ಕೆ ಬಂದು ವೀಡಿಯೊ ಮಾಡಿರುವರು ಅದ್ರಲ್ಲಿ ನೀವಿರಬಹುದು ನೋಡುವ ..!!!
....

ಮುಂದಿನ ಪ್ರವಾಸ ಎಲ್ಲಿಗೋ ?
ಎಂದಿನಂತೆ ವಿಶೇಷ ಸ್ಥಳಕ್ಕೆ ಅನ್ಸುತ್ತೆ..
ಸಚಿತ್ರ ಸಹಿತ ಮಾಹಿತಿಗೆ ನನ್ನಿ...

ಶುಭವಾಗಲಿ....

\|

Submitted by ಗಣೇಶ Thu, 05/09/2013 - 23:06

In reply to by venkatb83

ಏಳು ಗುಡ್ಡದಯ್ಯ! ನಿಮಗಾಗಿ ಒಂದೇ ಗುಡ್ಡದ ಏಳು ಫೋಟೋ ಹಾಕಿರುವೆ. :) ಅಲ್ಲಿಗೆ ಹೋಗಲು ಡಾಮರ್ ರಸ್ತೆನೇ ಇದೆ. ರಸ್ತೆ ಪರವಾಗಿಲ್ಲ. ಮಳೆಗಾಲ ಬಿಟ್ಟು ಉಳಿದ ಎಲ್ಲಾ ಸಮಯದಲ್ಲಿ ಅಲ್ಲಿಗೆ ಹೋಗಬಹುದು. ಇನ್ನು ಪುಟ್ಟ ಟ್ರಕ್ ವಿಷಯ : ನದಿಯೆಲ್ಲಾ ಒಣಗಿ ಅಲ್ಲಲ್ಲಿ ನೀರಿನ ಹೊಂಡಗಳಿರುವುದು. ಆ ನೀರನ್ನು ಈ ಟ್ರಕ್, ಲಾರಿ, ವ್ಯಾನ್‌ನವರು ತಮ್ಮ ವಾಹನ ತೊಳೆಯಲು ಬಳಸಿ ಹಾಳು ಮಾಡುವರು. :( http://sampada.net/%E0%B2%B8%E0%B2%BE%E0%B2%B5%E0%B2%A8%E0%B2%A6%E0%B3%81%E0%B2%B0%E0%B3%8D%E0%B2%97-%E0%B2%B8%E0%B2%BE%E0%B2%B9%E0%B2%B8%E0%B3%80-%E0%B2%9A%E0%B2%BE%E0%B2%B0%E0%B2%A3%E0%B2%BF%E0%B2%97%E0%B2%B0%E0%B2%BF%E0%B2%97%E0%B3%86-%E0%B2%AA%E0%B3%8D%E0%B2%B0%E0%B2%95%E0%B3%83%E0%B2%A4%E0%B2%BF-%E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BF%E0%B2%A4-%E0%B2%B9%E0%B3%86%E0%B2%AC%E0%B3%8D%E0%B2%AC%E0%B2%82%E0%B2%A1%E0%B3%86%E0%B2%AF-%E0%B2%B8%E0%B2%B5%E0%B2%BE%E0%B2%B2%E0%B3%8D ಸಾವನ ದುರ್ಗದಷ್ಟು ಕಷ್ಟವಿಲ್ಲ ಈ ಗಡಾಯಿ ಕಲ್ಲು ಹತ್ತುವುದು. ಒಮ್ಮೆ ಪ್ರಯತ್ನಿಸಿ.

Submitted by partha1059 Sat, 05/11/2013 - 09:41

ಈ ಗಡಾಯಿ ಕಲ್ಲು(ಜಮಲಾಬಾದ್ ಕೋಟೆ) ನೋಡಲು ಎರಡು ಕಣ್ಣು ಸಾಲದು. >>
ದೇವರು ನಮ್ಮ ಮೊರೆ ಕೇಳಿದ ಅನ್ನಿಸುತ್ತೆ ಅದಕ್ಕೆ ಈಗ ಎಲ್ಲರಿಗು ನಾಲಕ್ಕು ಕಣ್ಣು !!!
ಲೇಖನ ಚೆನ್ನಾಗಿದೆ !

Submitted by makara Sat, 05/11/2013 - 23:39

In reply to by partha1059

@ಪಾರ್ಥ ಸರ್,
ನಾಲ್ಕು ಕಣ್ಣೂ ಸಹ ಸಾಲವು ಗಣೇಶರಿಗೆ ಅದಕ್ಕೇ ಅವರು ಕ್ಯಾಮರಾ ಕಣ್ಣನ್ನೂ ತಮ್ಮ ಜೊತೆ ಒಯ್ಯುತ್ತಾರೆ.
@ಗಣೇಶ್ ಜಿ.,
ಹೊಸದೊಂದು ಸ್ಥಳದ ಬಗೆಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಹಾಗೆಯೇ ನಾನು ತಪ್ಪಿಸಿಕೊಂಡಿದ್ದ ಏಳು ಕೋಟೆ ಒಡೆಯರ ಸಾವನ ದುರ್ಗ ಲೇಖನದ ಕೊಂಡಿಗೂ ಸಹ ಧನ್ಯವಾದಗಳು.

Submitted by ಗಣೇಶ Sun, 05/12/2013 - 23:36

In reply to by partha1059

ನಾಲ್ಕು ಕಣ್ಣೂ ಸಾಲದು..ಜಮಲಾಬಾದು ನೋಡಲು.. ನನ್ನ ಮಾತು ಸಾಲದು..ಆ ಅಂದ ಬಣ್ಣಿಸಲು- http://www.travelblog.org/Asia/India/Karnataka/Mangalore/blog-317615.ht…
ಪಾರ್ಥರಿಗೆ ಮತ್ತು ಶ್ರೀಧರ್‌ಜಿಗೆ ಧನ್ಯವಾದಗಳು.