ಸೆಲ್ಫ್ ಅಪ್ರೈಸಲ್ ...!
ಹುಚ್ಚು ನನಗಿಲ್ಲವೆಂದೇನಲ್ಲ..
ನಾನೂ ಓಡುತ್ತೇನೆ ಯಶಸ್ಸಿನ so called ಏಣಿಯೆಡೆಗೆ..
ತಳ್ಳಾಡೋ ಕಿತ್ತಾಡೋ ಗುರಿ ಕಾಣದಷ್ಟು ನಿಬಿಡವಾದ
ಅದಾವುದೋ ಧಾವಂತದ so called ಕೊನೆಯೆಡೆಗೆ..
ದಾರಿಯತ್ತಿತ್ತದ ಸೊಬಗೇನಿದ್ದರೂ ಅದರ ಪಾಡಿಗೆ
ಕಣ್ಗಳು ನೇರವದೆಷ್ಟು , ಕಾಣದ ಗುರಿಯೆಡೆಗೆ
ನಿದ್ದೆ,ಹಸಿವು,ದಾಹ ಮತ್ತಿನ್ನಷ್ಟು ಸ್ವಾಭಾವಿಕ ಕಸುಬುಗಳು
ಅವರಷ್ಟಕ್ಕವು ಯಾಂತ್ರಿಕವಾಗಿ ತಮ್ಮನ್ನವೆ ಶಮನಿಸಿಕೊಂಡಿವೆ...
ಹುಚ್ಚು ನನಗಿಲ್ಲವೆಂದೇನಲ್ಲ..
ಆದರೂ ಅಕ್ಕಪಕ್ಕದ ದಾರಿಹೋಕರನ್ನು ಹುಚ್ಚನೆನ್ನುತ್ತೇನೆ.
ಹಿಂದೆ ಬಿದ್ದವರನ್ನೂ ಕೈಲಾಗದ ಹುಚ್ಚನೆನ್ನುತ್ತೇನೆ
ಸೋತು ಕುಳಿತವರನ್ನೂ, ಗುರಿಯ ಮರೆತವರನ್ನೂ ಬಿಡದೆ
ಕಂಡು ಕೇಳುತ್ತೇನೆ ಅವರನ್ನು - 'ಹುಚ್ಚೇನು ನಿಮಗೆ?'
ಹುಚ್ಚು ನನಗಿಲ್ಲವೆಂದೇನಲ್ಲ...
ಆದರೂ ಜಗದೆದುರು “ಹುಚ್ಚು ನನಗಿಲ್ಲ”ವೆಂದೆನಲ್ಲ !!..
Rating
Comments
ಉ: ಸೆಲ್ಫ್ ಅಪ್ರೈಸಲ್ ...!
In reply to ಉ: ಸೆಲ್ಫ್ ಅಪ್ರೈಸಲ್ ...! by ksraghavendranavada
ಉ: ಸೆಲ್ಫ್ ಅಪ್ರೈಸಲ್ ...!
ಉ: ಸೆಲ್ಫ್ ಅಪ್ರೈಸಲ್ ...!
In reply to ಉ: ಸೆಲ್ಫ್ ಅಪ್ರೈಸಲ್ ...! by gopinatha
ಉ: ಸೆಲ್ಫ್ ಅಪ್ರೈಸಲ್ ...!