ಸೆವೆನ್ ಯಿಯೆರ್ಸ್ ಇನ್ ಟಿಬೆಟ್

ಸೆವೆನ್ ಯಿಯೆರ್ಸ್ ಇನ್ ಟಿಬೆಟ್

ನೆನ್ನೆ ರಾತ್ರಿ Seven Years in Tibet ಎಂಬ ನಿನೆಮಾ ನೋಡಿದೆ. 

               ಹಿಮಾಲಯದಲ್ಲಿರುವ "ನಂಗಾ ಪರ್ವತ್" ಎಂಬ ಅತ್ಯಂತ ಕಶ್ಟಕರವಾದ ಪರ್ವತವನ್ನು ಹತ್ತಿಳಿಯಿಳಲು, ೧೯೩೯ ರಲ್ಲಿ ಆಸ್ಟ್ರಿಯಾದಿಂದ ಹೊರಟ ಪರ್ವತಾರೋಹಿಗಳ ತಂಡವನ್ನು ಬೀಳ್ಕೊಡಲು ರೈಲು ನಿಲ್ದಾಣದಲ್ಲಿದಲ್ಲಿ ಹಬ್ಬದ ವಾತಾವರಣವಿರುತ್ತದೆ. "ನಂಗಾ ಪರ್ವತ್" ಅನ್ನು ಹತ್ತಲು ಹೋದ ಬಹಳಶ್ಟು ಜರ್ಮನ್ನರು, ಕಳೆದು/ಸತ್ತು, ಕೆಲವರು ಬದುಕುಳಿದು ಬಂದಿರುತ್ತಾರೆ. ಆದ್ರೆ ಯಾರೂ ತುದಿ ಮುಟ್ಟಿರುವುದಿಲ್ಲ. ಇದರಿಂದ "ನಂಗಾ ಪರ್ವತ್" ಹತ್ತಿಳಿಯಿವುದು ಜರ್ಮನ್ನರಿಗೆ ಪ್ರತಿಶ್ಟೆಯ ವಿಶಯವಾಗಿರುತ್ತದೆ. ಈ ಸಲ ಹೋಗುವ ತಂಡದ ಮೇಲೆ ಸೋಶಲಿಸ್ಟ್ ಪಾರ್ಟಿಗೆ ಎಲ್ಲಿಲ್ಲದ ಭರವಸೆ. ಕಾರಣ, ಓಲಂಪಿಕ್ ಗಳಲ್ಲಿ ಮೆಡಲುಗಳನ್ನು ಗೆದ್ದ "ಹೆಯಿನ್-ರಿಚ್ ಹ್ಯಾರರ್(ಹೆನ್ರಿ)" ಎಂಬ ಪರ್ವತಾರೋಹಿ, ಈ ಸಲ ತಂಡದಲ್ಲಿರುತ್ತಾನೆ. ತಂಡದ ನಾಯಕನ ಹೆಸರು, ಪೀಟರ್.

         ಹೆನ್ರಿ ಸ್ವಭಾವತ ಒರಟ, ತಾನು ಮಾಡಿದ್ದೇ ಸರಿ ಎನ್ನುವವ. ಬಸುರಿ ಹೆಂಡತಿ ಬೇಡವೆಂದರೂ, ಹಿಮಾಲಯಕ್ಕೆ ಹೊರಟಿರುತ್ತಾನೆ.

೧೯೩೯-೧೯೪೪

Avalancheಗಳಾಗುವುದರಿಂದ ಹೆದರಿದ ತಂಡ ಅರ್ಧಕ್ಕೆ ವಾಪಾಸ್ಸಾಗುತ್ತದೆ. ಕೆಳಗಿಳಿದ ಮೇಲೆ ಉತ್ತರ ಭಾರತದಲ್ಲಿ, ಬ್ರಿಟಿಶರು ವರ್ಲ್ಡ-ವಾರ್ || ನೆಪವೊಡ್ಡಿ, ತಂಡವನ್ನು ಬಂಧಿಸುತ್ತಾರೆ. ಹೆನ್ರಿ ಜೈಲಿನಲ್ಲಿರಿವಾಗ, ಅವನ ಹೆಂಡತಿ ಡೈವೋರ್ಸ್ ಕೇಳಿ ಪತ್ರ ಬರೆಯುತ್ತಾಳೆ. ತಂಡದ ಕೆಲವರು ಜೈಲಿನಿಂದ ತಪ್ಪಿಸುಕೊಳ್ಳುತ್ತಾರೆ. ಹೆನ್ರಿ ಮತ್ತು ಪೀಟರ್ ನಂತರ ಜೊತೆಗೂಡಿ ಟಿಬೆಟಿಗೆ ನುಗ್ಗುತ್ತಾರೆ. ಅಲ್ಲಿಂದ ಅವರನ್ನು ಹೊರಗಟ್ಟಾಲಾಗುತ್ತದೆ. ಉಪಾಯ ಮಾಡಿ "ಲ್ಹಾಸಾ" ಸೇರಿಕೊಳ್ಳುತ್ತಾರೆ.

೧೯೪೪-೧೯೫೧

   ಲ್ಹಾಸಾದಲ್ಲಿ ದಲೈ-ಲಾಮಾ(ಆಗ, ವಯಸ್ಸು ಸುಮಾರು ೧೪-೧೫ ವರ್ಶವಿರಬೇಕು) ಜೊತೆ ಹೆನ್ರಿಯ ಸ್ನೇಹವಾಗುತ್ತದೆ. ಇದೆಲ್ಲದರ ಜೊತೆಗೆ ಹೆನ್ರಿಯ ಸ್ವಭಾವದಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಚೈನಾ ಟಿಬೆಟನ್ನು ಕಬಳಿಸುವ ಹುನ್ನಾರವನ್ನರಿತ ಹೆನ್ರಿಗೆ ಸಿಟ್ಟು ಬರುತ್ತದೆ. ಅಲ್ಪರ ಮೇಲೆ ಬಲಾಢ್ಯರು ಸದಾ ನಡೆಸುತ್ತಲೇ ಬಂದಿರುವ ದಬ್ಬಾಳಿಕೆಯನ್ನು ಕಂಡು ರೇಜಿಗೆ ಹುಟ್ಟುತ್ತದೆ. ಒಂದೊಂಮ್ಮೆ ತಾನೂ ಸಹ ಅಂತಹ ಬಲಾಢ್ಯರ ಗುಂಪಿನಲ್ಲಿದ್ದವನಲ್ಲವೇ ಎಂದು ಯೋಚಿಸಿ, ತನ್ನ ಮೇಲೆ ಹೆನ್ರಿಗೆ ನಾಚಿಕೆಯಾಗುತ್ತದೆ. ಚೈನಾ ದ ದಬ್ಬಾಳಿಕೆಯನ್ನು ವಿರೋಧಿಸಿ ಸುಮಾರು ಹತ್ತು ಲಕ್ಷ ಟಿಬೆಟ್ಟಿನ್ನರು ಪ್ರಾಣ ಕಳೆದುಕೊಂಡಿರುತ್ತಾರೆ.

        ೧೯೫೧ ರಲ್ಲಿ ಹೆನ್ರಿ ಆಸ್ಟ್ರಿಯಾಗೆ ಮರಳಿ ತನ್ನ ಮಗನನ್ನು ನೋಡುತ್ತಾನೆ. ಟಿಬೆಟ್ಟಿನಲ್ಲಿ ಕಳೆದ ಏಳು ವರ್ಶಗಳು ಹೆನ್ರಿಯ ಸ್ವಭಾವದ ಮೇಲೆ ಸಾತ್ವಿಕ ಪರಿಣಾಮಗಳನ್ನು ಬೀರಿರುತ್ತವೆ.

      ಹೆನ್ರಿಯ ಪಾತ್ರಧಾರಿಯಾಗಿ ಬ್ರ್ಯಾಡ್-ಪಿಟ್ ನಟನೆ ಇಶ್ಟವಾಗುತ್ತದೆ. ಅದರಲ್ಲೂ ಹೆಂಡತಿ-ಮಗನನಿಂದ ತಿರಸ್ಕಾರಗೊಂಡು "ತನಗಿನ್ನೇನಿದೆ ?" ಎಂಬ ದೃಶ್ಯಗಳಲ್ಲಿ ಮಿಂಚುತ್ತಾರೆ. ದೈಲಾ-ಲಾಮಾ ಪಾತ್ರಧಾರಿಯಾದ ಹುಡುಗನ ನಟನೆ ನನಗೆ ಬಹಳ ಮೆಚ್ಚುಗೆಯಾಯಿತು.

Rating
No votes yet

Comments