ಸೈಕಲ್ ಮೇಲೆ ೯೧೯ ಕೀ.ಮಿ!

ಸೈಕಲ್ ಮೇಲೆ ೯೧೯ ಕೀ.ಮಿ!

ಒಂದು ಸ್ವಾರಸ್ಯಕರ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನಿಸಿತು.

ನಮ್ಮ ಕೆಲವು ಗೆಳೆಯರು ಸೇರಿ ಊಟಿಗೆ ಪ್ರಯಾಣ ಹೊರ್ಟಿದಾರೆ...

ಸರಿ, ಅದರಲ್ಲೇನು ವಿಶೇಷ ಅಂತೀರಾ?
ಊಟಿಗೆ ನಮ್ಮ ನಿಮ್ಮೆಲ್ಲರ ತರಹ ಹೋಗುತಿಲ್ಲ, ಅವರು ಹೋಗ್ತಿರೋದು ಸೈಕಲ್‌ನಲ್ಲಿ!
ಬೆಂಗಳೂರು, ಮೈಸೂರು, ಮಡಿಕೇರಿ, ಸುಲ್ತಾನ್ ಬತ್ತೇರಿ ಮುಖಾಂತರ ಊಟಿಗೆ ಹೋಗಿ ಅಲ್ಲಿಂದ ಮೈಸೂರು ಮುಖೇನ ವಾಪಸ್...
ಉಸ್ಸಪ್ಪಾ ಬರೊಬ್ಬರೀ ೯೧೯ ಕೀ.ಮಿ!
ಆದ್ರೆ ಇವ್ರು ಯಾಕೆ ಹೋಗ್ತಿದಾರೆ? ಎಲ್ಲೋ ಇವ್ರೀಗೆ ತಿಕ್ಲು....ಅಥವಾ ಬಿಡ್ರಪ್ಪ ಅವರೆಲ್ಲ ವೃತ್ತಿಪರರು ಅಂತೀರಾ?
ಅಲ್ಲ... ಇವರಲ್ಲಿ ಬಹಳಷ್ಟು ಜನ ನಮ್ಮ ನಿಮ್ಮಂತೆ ಸಾಮಾನ್ಯ ಜನರು. ಆದ್ರೆ ಈ ಹಾಳು ಬೆಂಗಳೂರ ಟ್ರಾಫಿಕ್ಕಿನಿಂದ ಬೇಸೆತ್ತೋ,
 ಅಥವಾ ನಮಗಿರೋ ಈ ಒಂದೇ ಒಂದು ಮನೆ- ಈ ಭೂಮೀನ ಹಾಳು ಮಾಡದೇ ಉಳಿಸೊಕ್ಕೊ ಇವ್ರೂ ಸೈಕಲ್ ತುಳ್ಯೊಕ್ಕೆ ಶುರು ಮಾಡಿದ್ರೂ.

ಈಗ ಇವ್ರು ಹೆಳ್ತಿರೊದು ಏನಪ್ಪಾ ಅಂದರೆ -
ಅಲ್ಪ ಸ್ವಲ್ಪ ಪ್ರ್ಯಾಕ್ಟೀಸ್ ಮಾಡಿ ಇವರು ೯೧೯ ಕೀ.ಮಿ ಸೈಕಲ್ ತುಳಿತಾರೆ ಅಂದ್ರೆ, ನಾವೆಲ್ಲ ೫-೬ ಕೀ.ಮಿ ದೂರ ಇರೋ ಆಫೀಸಿಗೆ ಸೈಕಲ್
ತುಳ್ಯೋದು ಅಂಥ ದೊಡ್ಡ ವಿಷಯವೇನಲ್ಲ ಅಂತ...
ಹಾಗಿದ್ದರೆ ಬನ್ನಿ, ಈ ಒಂದು ಒಳ್ಳೇ ಕಾರ್ಯಕ್ಕೆ ಇವರನ್ನು ಪ್ರೋತ್ಸಾಹಿಸೋಣ, ಇವರ ಬೆನ್ನು ತಟ್ಟೋಣ.
ಡಿಸೆಂಬರ್ ೨೫ ರಿಂದ ಈ ಸಾಹಸ ಶುರುವಾಗಲಿದೆ..........
ಹೆಚ್ಚಿನೆ ವಿವರಗಳು ಇಲ್ಲಿವೆ : http://www.tourofnilgiris.com/
ಮಾರ್ಗ : http://www.tourofnilgiris.com/route/
ಸವಾರರ ಇತ್ಯೋಪರಿ : http://www.tourofnilgiris.com/participants/
ಮತ್ತೆ ಈ ಪ್ರವಾಸದ ಬಗ್ಗೆ ಲೈವ್ ಮಾಹಿತಿ ಇಲ್ಲಿ ಸಿಗಲಿದೆ :
http://shilo70.blogspot.com/
http://random001.blogspot.com/

Rating
No votes yet

Comments