ಸೈಟಿಲ್ಲದವರಿಗೆ ಸೈಟು...ನಮಗೆ ಓಟು

ಸೈಟಿಲ್ಲದವರಿಗೆ ಸೈಟು...ನಮಗೆ ಓಟು

೧. ಸೈಟಿಲ್ಲದವರಿಗೆ ಫ್ರೀ ಸೈಟ್, ಕಾರಿಲ್ಲದವರಿಗೆ ಫ್ರೀ ಕಾರು.*

೨. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ.*

೩. ಸ್ಕೂಲಿಗೆ ಹೋಗಲು ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ.*

೪. ವಿದ್ಯಾವಂತ ನಿರುದ್ಯೋಗಿಗಳಿಗೆ ಐ.ಟಿ.ಯಲ್ಲಿ ಕೆಲಸ! ಅವಿದ್ಯಾವಂತರಿಗೆ ವಿದಾನಸೌಧದಲ್ಲಿ!*

೫. ಸೋತ ರಾಜಕಾರಣಿಗಳೆಲ್ಲರಿಗೂ ೫ ವರ್ಷ ರೈತರ ಗದ್ದೆ ಕಾಯುವ ಕೆಲಸ.

೬. ಕುಡುಕರಿಗೆ ಬಾರ್ ಪಕ್ಕದ ಮೋರಿಯಲ್ಲೇ ಕುಡುಕಾಶ್ರಮ. ೨೪ ಗಂಟೆ ಬಾರ್ ನಿಂದ
ಫ್ರೀ ಸಪ್ಲೈ.*

೭. ಎಲ್ಲಾ ಪೋಲಿ ಪುಂಡರಿಗೆ ಸಿನೆಮಾದಲ್ಲಿ ಹೀರೋ ಪಾತ್ರ,*
ಪ್ರತೀ ಮನೆಯವರಿಗೂ ವಾರಕ್ಕೊಂದು ಕನ್ನಡ ಸಿನೆಮಾ (ಕಡ್ಡಾಯ) ಫ್ರೀ.*

ಪ್ರಣಾಳಿಕೆ ಸಿದ್ಧವಾಗಿದೆ. (ಬಾಕಿ ಪಕ್ಷಗಳ ಪ್ರಣಾಳಿಕೆಯಿಂದ ಒಳ್ಳೆಯದನ್ನು ಕದಿಯಲಾಗುವುದು)
ಚುನಾವಣೆ ಚಿಹ್ನೆ ರೆಡಿ.

ಅಭ್ಯರ್ಥಿಗಳು ಸಿಕ್ಕಿಲ್ಲ., ಸಿಕ್ಕ ಕೂಡಲೇ ಪ್ರಚಾರ ಸುರು.

--------------------*conditions apply. Packages subject to changes without notice.

Rating
No votes yet