ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

(೫೬) ಸೋಂಬೇರಿತನದಿಂದ ಬದುಕುವುದೇ ಒಂದು ಮೌಲ್ಯ! ತಟಸ್ಥವಾಗಿರುವುದೆಂದರೆ, ನಿಶ್ಚಲವಾಗಬೇಕೆಂದರೆ ಸಾಫಲ್ಯತೆಗೆ ಬೇಕಾದ ಎಲ್ಲ ವಾಂಛೆಗಳನ್ನೂ ಮೀರಿ ನಿಲ್ಲುವುದೇ ಅಲ್ಲವೆ?


(೫೭) ತನ್ನಲ್ಲಿರುವ ಕಾಲಾವಕಾಶದ ಮೌಲ್ಯವನ್ನು ಹೆಚ್ಚಿಸಿಕೊಂಡಿರುವವನನ್ನು ಬಹಳ ’ಬಿಜಿ’ ಮನುಷ್ಯ ಎನ್ನುತ್ತೇವೆ. ತನ್ನಲ್ಲಿರುವ ಕಾಲಾವಕಾಶವು ಯಾತಕ್ಕೂ ಸಾಲದೆಂಬ ಚಿಂತೆಯಲ್ಲಿಯೇ ಸಾಕಷ್ಟು ಕಾಲವನ್ನು ವ್ಯಯಿಸುವವನನ್ನು ಸೋಂಬೇರಿ ಎನ್ನುತ್ತೇವೆ.


(೫೮) ಸಾಮಾನ್ಯ ಮನುಷ್ಯನೆಂದರೆ ಇಡೀ ವಿಶ್ವವನ್ನು ಒಂದು ಮರಳ ಕಣದಂತೆ ಭಾವಿಸುವವನು. ಪ್ರತಿಭಾವಂತನೆಂದರೆ ಮರಳ ಕಣವೊಂದರಲ್ಲಿ ವಿಶ್ವವನ್ನೇ ಕಾಣುವವನು!


(೫೯) ಒಂದು ಚೂರು ಉಪ್ಪು ರುಚಿಯನ್ನು ಹೆಚ್ಚಿಸುವುದಿಲ್ಲ. ಉಪ್ಪನ್ನು ಸಪ್ರಮಾಣದಲ್ಲಿ ಬೆರೆಸಿದಾಗ ಸ್ವತಃ ನಾಲಗೆಯೇ ರುಚಿಯೆದ್ದು ಹೋಗುತ್ತದೆ!


(೬೦) ಮೊದಲು ಮನುಷ್ಯ ದೇವರನ್ನು ಸೃಷ್ಟಿಸಿದ. ನಂತರ ಆತನನ್ನು ಕ್ರಿಯಾಶೀಲನಾಗಿರಿಸುವ ಸಲುವಾಗಿ ದೆವ್ವವನ್ನು ತನ್ನ ಮೇಲೆ ಆವಾಹನೆ ಮಾಡಿಕೊಂಡ!

Rating
No votes yet

Comments