ಸೋಲನ್ನೊಪ್ಪಬೇಡ ಇಷ್ಟು ಬೇಗ

ಸೋಲನ್ನೊಪ್ಪಬೇಡ ಇಷ್ಟು ಬೇಗ

ಇಂದೇಕೋ ಕಾಡುವ ಈ ಮೌನ
ನನ್ನ ನಿನ್ನ ನಡುವೆ
ಕಡಿದುಹೋದ ಮಾತುಗಳ
ಉಳಿದ ಅವಶೇಷ



ಎಲ್ಲೋ ಕೇಳುವ
ಕೀಬೋರ್ಡಿನ ಟಕಟಕ ಹೊಡೆತ
ಕುಟ್ಟುವ ಮೌಸಿನ ಕುಟುಕ
ಸ್ಪೀಕರುಗಳಲ್ಲಿ ಬೊಬ್ಬಿಡುವ ಯಾರೋ..
ಇಲ್ಲದ ಪ್ರಪಂಚದೊಳು
ನಮ್ಮಿಬ್ಬರ ಅಸ್ತಿತ್ವವನ್ನು
ಮರೆತ ನಿನಗಿಲ್ಲಿ 
ಕೇಳದು ನನ್ನೆದೆಯ ಬಡಿತ
ನನಗೂ ಕೇಳುತ್ತಿಲ್ಲ ಈಗೀಗ
ನಿನ್ನೆದೆಯ ತುಡಿತ
 


ಸೋತೆ ಎಂದು ಕೈ ಚೆಲ್ಲಿದ ನೀನು
ಸೋಲಲಾರೆ, 
ಈ ಕೂಪಕ್ಕೊಂದು
ಎಸ್ಕಲೇಟರ್ ತರಿಸುವ 
ಎಂದು ಎದ್ದೇಳುವ
ಛಲದ ಕಪ್ಪೆ ನಾನು
ಬರಿಯ ಅವಶೇಷಗಳಲ್ಲಿ ಬದುಕಲಾರೆ
ಇನ್ನೂ ನನ್ನಲ್ಲಿ ಕೆಚ್ಚು ಇರುವಾಗ
ಬರಿಯ ನೆನಪುಗಳಲ್ಲಿ ನನ್ನನ್ನೇಕೆ ಕಾಣುವೆ
ಇನ್ನೂ ವಾಸ್ತವ ನಾನು
ಸೋಲನ್ನೊಪ್ಪಬೇಡ ಇಷ್ಟು ಬೇಗ!

Rating
No votes yet

Comments