ಸೌತೆಕಾಯಿ ಪೀಸ್ ಪೀಸ್
ಸೌತೆಕಾಯಿ ಪೀಸ್ ಪೀಸ್
===============
ಇದನ್ನು ತಯಾರಿಸಲು ಸ್ವಲ್ಪ ಅನುಭವ ಬೇಕು :-) , ಮೊದಲಿಗೆ ಒಂದು ಎಳೆಯ ಸೌತೆಕಾಯಿ ತೆಗೆದುಕೊಳ್ಳಿ. ನೀರಿನಲ್ಲಿ ತೊಳೆಯಿರಿ, ನಂತರ ಎರಡು ತುದಿಗಳನ್ನು ಕತ್ತರಿಸಿ ತೆಗೆದುಹಾಕಿಬಿಡಿ. ಈಗ ಸೌತೆಕಾಯಿಯನ್ನು ತೆಳ್ಲನೆಯ ಬಿಲ್ಲೆಗಳನ್ನಾಗಿ ಕತ್ತರಿಸಿ ಒಂದು ಪ್ಲೇಟಿನಲ್ಲಿ ಜೋಡಿಸಿಕೊಳ್ಳಿ.
ಒಂದು ಚಮಚ ಪುಡಿಮಾಡಿದ ಮೆಣಸು ಅಥವ ಒಂದು ಚಮಚ ಕಾರದಪುಡಿಯ ಜೊತೆ ಒಂದು ಚಮಚ ಪುಡಿ ಉಪ್ಪನ್ನು ಬೆರೆಸಿ ಅದೆ ತಟ್ಟೆಯ ಕೊನೆಯಲ್ಲಿ ಹಾಕಿ ಇಟ್ಟುಕೊಳ್ಳಿ,
ಈಗ ಅರಾಮವಾಗಿ ಕುಳಿತು, ಒಂದೊಂದೆ ಪೀಸ್ ಸೌತೆಕಾಯನ್ನು ಉಪ್ಪು,ಕಾರದ ಮಿಶ್ರಣದಲ್ಲಿ ಅದ್ದಿ ತಿನ್ನಿರಿ, ಹಾಗೆ ಒಂದೊಂದೆ ಪೀಸ್ ಪೀಸ್ ಸೌತೆಕಾಯನ್ನು ಉಪ್ಪುಕಾರ ಮಿಶ್ರಣದಲ್ಲಿ ಅದ್ದಿ ತಿನ್ನುತ್ತ ಅದರ ಸವಿಯನ್ನು ಸವಿಯಿರಿ.
(ಜಾಸ್ತಿ ಕಾರ ಬೇಕೆನಿಸಿದರೆ ಹಸಿಮಣಸಿನಕಾಯನ್ನು ಕತ್ತರಿಸಿ ಸೌತೆಕಾಯಿಗೆ ಸವರಿ, ಉಪ್ಪಲ್ಲಿ ಅದ್ದಿ ತಿನ್ನಿ. ಆದರೆ ಒಂದು ಲೋಟ ತಣ್ಣನೆಯ ನೀರು ಪಕ್ಕದಲ್ಲಿರಲಿ)
ಚಿತ್ರ ತಂದಿದ್ದು ಇಲ್ಲಿಂದ : http://kannada.boldsky.com/img/2013/02/04-01-1359728441-cucumber.jpg
Rating
Comments
ಓದುತ್ತಿರುವಾಗಲೇ ಬಾಯಲ್ಲಿ ನೀರು
ಓದುತ್ತಿರುವಾಗಲೇ ಬಾಯಲ್ಲಿ ನೀರು ಬರುತ್ತಿದೆ...
:))
:))