ಸ್ತ್ರೀಯರೇಕೆ ಚಂಡಮಾರುತಗಳು?
ಚಂಡಮಾರುತಗಳಿಗೂ, ಹೆಣ್ಣಿಗೂ ಇರುವ ಸಂಬಂಧವೇನು?
ಇದೀಗ ಆಂಧ್ರ, ತಮಿಳು ನಾಡಿನ ತೀರಗಳನ್ನು ಅಪ್ಪಳಿಸಲಿರುವ ಚಂಡಮಾರುತದ ಹೆಸರು "ಲೈಲಾ" ಲೈಲಾ, ಹೋ ಲೈಲಾ ಲೈಲಾ, ಕೈಸಿ ಹೋ ಲೈಲಾ, ಹರ್ ಕೊಯಿ ಚಾಹೇ ತುಜ್ಸೆ, ಮಿಲ್ನಾ ಅಕೇಲಾ" ಎಂದು ತೀರದ ಮೀನುಗಾರರಂತೂ ಖಂಡಿತ ಹಾಡಲಾರರು. WMO (World Meterological Organization ) ಅದ್ಯಾವ ಮಾನದಂಡವನ್ನು ಉಪಯೋಗಿಸುತ್ತಾರೋ ಹೆಸರನ್ನು ನಿರ್ಧರಿಸುವಲ್ಲಿ ಎನ್ನುವುದು ಗೊತ್ತಿಲ್ಲ. ಆದರೂ ಈ ಹೆಸರುಗಳು invariably female ಆದ್ದರಿಂದ ಇವರೇನಾದರೂ ಸ್ತ್ರೀ ಧ್ವೇಷಿಗಳೋ ಎನ್ನುವ ಅನುಮಾನವೂ ಕಾಡದಿರದು. ಕೆಲವು ಪುರುಷರಿಗಂತೂ ಈ ಹೆಸರುಗಳು ಪುಳಕ ತರುವುದಂತೂ ನಿಜ. ಆಗೊಮ್ಮೆ ಈಗೊಮ್ಮೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಚಂಡಮಾರುತ brew ಆಗೋ ಲಕ್ಷಣ ಕಂಡಾಗ ನಾನು ನೋಡು, WMO ಇಲಾಖೆಗೆ ಮುಂದಿನ ಚಂಡಮಾರುತಕ್ಕೆ ಎಂದು ನಿನ್ನ ಹೆಸರನ್ನು ಸೂಚಿಸಿ ಮನವಿಯನ್ನು ಸಲ್ಲಿಸುತ್ತೇನೆ ಎಂದು ಬೆದರಿಸಿದಾಗ ಚಂಡಮಾರುತ ಹಿತ ಮಾರುತವಾಗಿ ಪರಿವರ್ತಿತವಾಗುತ್ತದೆ. ಸ್ತ್ರೀರತ್ನಗಳ ಹೆಸರುಗಳನ್ನ ಚಂಡಮಾರುತಕ್ಕೆ ಇಟ್ಟು ಮನೋರಂಜನೆ ಪಡೆಯುವ WMO ಇಲಾಖೆಗೆ ನಾರೀ ಮಣಿಗಳು ಪ್ರತಿಭಟನೆ ಸಲ್ಲಿಸಿದ್ದರಿಂದ ಈಗ ಈ ಕೆಣಕುವ ಪರಿಪಾಠವನ್ನು ನಿಲ್ಲಿಸಲಾಗಿದೆಯಂತೆ. ಈಗ ಒಂದು ಹೆಸರು ಹೆಣ್ಣಿನದ್ದಾದರೆ ಮತ್ತೊಂದು ಹೆಸರು ಗಂಡಿನದು. ಈಗ ಇಲ್ಲೊಂದು ಅನ್ಯಾಯ BREW ಆಗ್ತಾ ಇದೆ ನೋಡಿ. ಹೆಣ್ಣು, ಗಂಡಿನ ದೇನೋ ಆಯಿತು ಚಂಡಮಾರುತಗಳಿಗೆ ನಾಮಕರಣ, ಆದರೆ ಇವೆರೆಡರ ನಡುವಿನವರ ಕತೆ ಏನು? ಪಾದ್ರಿ ಮುಲ್ಲಾಗಳು ಮುನಿಸಿಕೊಂಡಾರು.
ಅಮೆರಿಕೆಗೆ ಬೆಚ್ಚುವ ಅಪ್ಪುಗೆ ನೀಡಿದ ಚಂಡಮಾರುತ "ಕತ್ರೀನಾ". ಆಹಾ ಎಂಥ ಹೆಸರು, ಆದರೆ ಆ ಹೆಸರೆಬ್ಬಿಸಿದ ರಾಡಿಯೋ? SHAKESPEARE ಹೇಳುತ್ತಾನೆ ರೋಮಿಯೋ – ಜೂಲಿಯೆಟ್ ನಲ್ಲಿ
" Whats in a name? that which we call a rose,
By any other name would smell as sweet.
ಆದರೆ ಲಲನೆಯರ ಹೆಸರಿಟ್ಟುಕೊಂಡ ಬಿಂಕದ ಚಂಡ ಮಾರುತಗಳಂತೂ ಜನರಿಗೆ ರೋಮಾಂಚನಕ್ಕೆ ಬದಲು ಭಯಗ್ರಸ್ಥರಾಗಿಸುತ್ತವೆ.
ಚಂಡ ಮಾರುತಗಳಿಗೆ ಮಹಿಳೆಯರ ಹೆಸರನ್ನಿಡುವ ಟ್ರೆಂಡ್ ಶುರು ಮಾಡಿದ್ದು ಆಸ್ಟ್ರೇಲಿಯಾದ Clement Wragge. ಈತ ಹವಾಮಾನ ಶಾಸ್ತ್ರಜ್ಞ.
Comments
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಸ್ತ್ರೀಯರೇಕೆ ಚಂಡಮಾರುತಗಳು?
In reply to ಉ: ಸ್ತ್ರೀಯರೇಕೆ ಚಂಡಮಾರುತಗಳು? by suresh nadig
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ?
In reply to ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ? by asuhegde
ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ?
In reply to ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ? by asuhegde
ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ?
In reply to ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ? by asuhegde
ಉ: ಪತ್ನಿಯ ಹೆಸರನ್ನು ಈ ರೀತಿಯಾಗಿ ಬಹಿರಂಗ ಪಡಿಸುವ ಅಗತ್ಯ ಇತ್ತೇ?
ಉ: ಸ್ತ್ರೀಯರೇಕೆ ಚಂಡಮಾರುತಗಳು?
ಉ: ಸ್ತ್ರೀಯರೇಕೆ ಚಂಡಮಾರುತಗಳು?