ಸ್ಪಂಜಿನ ಹೊಡೆತ

ಸ್ಪಂಜಿನ ಹೊಡೆತ

ಸ್ಪಂಜಿನ ಹೊಡೆತ
ಸ್ಪಂಜಿನ ಹೊಡೆತ ,.,.,..,.,.,.,
ಪರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ ಇವನ ಮಾತು ಕೆಲಸ ಎಲ್ಲ ಹೊಡೆತ ತಿನ್ನುವಂತದೆ ಆದರೆ ಇವನ ಮನಸ್ಸು ತುಂಬ ಒಳ್ಳೆಯದು, ಜನ ಮನಸ್ಸು ನೋಡೋದಲ್ಲ, ಇವನ ಕೆಲಸ ಅಂತಹುದು.
ಏನಾದರು ಆದರೆ ಮೊದಲು ಬಂದು ನನ್ನ ಬಳಿ ಹೇಳಿ ನಂತರ ಸಮಾದಾನ ಮಾಡಿದ ನಂತರ ಮನೆಗೆ ಹೋಗುತ್ತಾನೆ ಅಲ್ಲಿ ವರೆಗೂ ನಿದ್ದೆ ಮಾಡುವದಿಲ್ಲಾ.
ಇಂದು ಅದೇ ಆದದ್ದು ಅದು ಆದದ್ದು ಹೀಗೆ, ಸಂಜೆ ಫಸ್ಟ್ ಶೋ ಸಿನಿಮಾ ನೋಡಲು ವಿನಾಯಕ ಟಾಕಿಸಿಗೆ ಹೋದಾಗ ಸಿನಿಮಾ ಪ್ರಾರಂಭವಾಗಿ ೨೦ ನಿಮಿಷ ಆಗಿತ್ತು ನಮಗೆಲ್ಲಾ ತಿಳಿದಿರುವಂತೆ ಗೇಟ್ ಮ್ಯಾನ್ ಟಾರ್ಚ್ ಹಾಕಿ ದಾರಿ ತೋರಿಸುತ್ತಾನೆ ಅದರಂತೆ ನಾವು ಹೋಗಿ ಕೂರುತ್ತೇವೆ. ಇಲ್ಲೂ ಅದೇ ಆದದ್ದು ಇವನು ಕತ್ತಲೆಯಲ್ಲಿ ಹೋಗಿ ಸೀಟಿನಲ್ಲಿ ಕುಳಿತ ನಂತರ, ಎದುರು ಸೀಟಿಗೆ ಕಾಲು ತಾಗಿಸಿ ಕುಳಿತ ಅದು ಸ್ಪಂಜಿನ ಸೀಟು ನಮಗೆಲ್ಲ ತಿಳಿದಿದೆ . ಸಿನಿಮಾ ನೋಡುವದರಲ್ಲಿ ತಲ್ಲಿನನಾದ ಪರೇಶ್ ಗೆ ಇದು ಸ್ಪಂಜಿಗಿಂತ ಮೃದು ಇದೆ ಎಂಬ ವಿಷಯ ತಿಳಿಯಲು ಸುಮಾರು ೩೦ ನಿಮಿಷ ಕಳೆದಿತ್ತು. ಕ್ರಮೇಣ ತನ್ನ ಎರಡು ಕಾಲುಗಳನ್ನು ಎದುರಿನ ಸ್ಪಂಜಿನ ಮೇಲೆ ಒತ್ತ ತೊಡಗಿದ ಅಷ್ಟರಲ್ಲಿ ಕತ್ತಲೆಯಲ್ಲಿ ಎದುರಿನ ಸೀಟಿನಿಂದ ಒಂದು ಆಕೃತಿ ಇವನ ಕಡೆಗೆ ತಿರುಗಿ ಚಟಾರಣೆ ಬೀಸಿ ಇವನ ಕೆನ್ನೆಗೆ ಹೊಡೆಯಿತು . ಕಾರಣ ಇಷ್ಟೇ ಸ್ಪಂಜು ಎಂದು ಇವನು ತಿಳಿದದ್ದು ಮುಂದೆ ಕುಳಿತಿದ್ದ ಹೆಂಗಸಿನ ಸೀಟ್ ಆಗಿತ್ತು ಅವಳು ನೋವು ತಡೆಯಲಾರದೆ ಚಟಾರಣೆ ಬಾರಿಸಿದ್ದಳು ಕ್ಷಣಮಾತ್ರದಲ್ಲಿ ಇದು ನಡೆದು ಹೋಯಿತು. ರಾಸ್ಕಲ್ ಅರ್ದ ಗಂಟೆ ಇಂದ ನೋಡ್ತಿದೀನಿ ಎಂದು ಗಲಾಟೆ ಶುರು ಮಾಡಿದಳು ಅಷ್ಟರಲ್ಲಿ ಇವನು ಅಲ್ಲಿಂದ ಓಡಿದ್ದು ಮತ್ತೆ ಬಂದು ಕುಳಿತದ್ದು ನಮ್ಮ ಮನೆಯ ಮುಂದಿನ ಕಾಂಪೌಂಡ್ ನಲ್ಲಿ ಇದಿಷ್ಟು ನಡೆದ ಸಂಗತಿ .
ಇದು ನಾನು ಬೇಕಂತ ಮಾಡಿದ್ದಲ್ಲ ಕತ್ತಲೆಯಲ್ಲಿ ನನಗೆ ಗೊತ್ತಾಗಲಿಲ್ಲ ಅಂತ ಅಳತೊಡಗಿದ ನಂತರ ನಗತೊಡಗಿದ . ನಾನು ಅವನಿಗೆ ಮನೆ ಒಳಗೆ ಕರೆದು ಮುಖ ನೋಡಿದಾಗ ಸರಿ ಸುಮಾರೋ ೧೦೦ ಪೌಂಡ್ ಹೊಡೆತ ಬಿದ್ದ ಹಾಗೆ ಕಿವಿ ಕೆನ್ನೆ ಎಲ್ಲಾ ಸರಿಯಾಗಿ ಊದಿಕೊಂಡಿತ್ತು , ಇನ್ನಾದರು ಹುಷಾರಾಗಿರು ಅಂತ ಹೇಳಿ ಮನೆ ಕಳಿಸಿದೆ . ಇದು ಅಲ್ಲಿಗೆ ಮುಗಿಯಲಿಲ್ಲಾ ಮತ್ತೊಂದು ವಾರದಲ್ಲಿ ಹೊಸ ವಿಷಯ ಮಾಡಿ ಕೊಂಡು ಬಂದ ಅದು ನಿಮಗೆ ಮುಂದೆ ತಿಳಿಸುತ್ತೇನೆ ,,.,.,.,.,.,.,.

Rating
No votes yet

Comments