ಸ್ಪಟಿಕ ಎಸ್ಟೇಟ್ - 2

ಸ್ಪಟಿಕ ಎಸ್ಟೇಟ್ - 2

ರಾಮಮುರ್ತಿಗಾಗಲಿ, ಶಾರದಮ್ಮನಿಗಾಗಲಿ ಮಕ್ಕಳ ಭವಿಷ್ಯದ ಬಗ್ಗೆ ಯಾವ ಯೋಚನೆ ಇರಲಿಲ್ಲ ಅವರ ಮದುವೆಗೆ ಎಲ್ಲಾ ರೀತಿಯ ಹಣ, ಒಡವೆ ತಯಾರಿತ್ತು, ಗಂಡು ನೋಡಿ ಮಾಡುವುದೊಂದು ಬಾಕಿ.ಸುಮನ ..ಕವನ ಇಬ್ಬರು ತಂದೆ ತಾಯಿಯ ಆರೈಕೆಯಲ್ಲಿ ಅತಿ ಶಿಸ್ತಿನಿಂದ, ಪ್ರೀತಿಯಿಂದ ಬೆಳೆದಿದ್ದರು.ಮಕ್ಕಳ ಬೇಕು ಬೇಡಗಳಿಗೆ ಯಾವತ್ತು ತಲೆಯಾಡಿಸಿದವರಲ್ಲ. ಮಕ್ಕಳು ಅಷ್ಟೆ ತಂದೆ ತಾಯಿಯ ಮನಸ್ಸಿಗಾಗಲಿ, ಬೇರೆಯವರ ಮನಸ್ಸಿಗಾಗಲಿ ನೋವಾಗದಂತೆ ನಡೆದುಕೊಳ್ಳುತ್ತಿದ್ದರು.ಒಟ್ಟಿನಲ್ಲಿ ಅವರ ಸಂಸಾರ ನಂದಗೋಕುಲವಾಗಿತ್ತು. ಕವನಳಿಗೆ ಹೋಲಿಸಿದರೆ ಸುಮನ ಸ್ವಲ್ಪ ಮಾತು ಹೆಚ್ಚು, ಯಾವಗಲು ಕುಣಿಯುತ್ತಾ ನಗೆಯುತ್ತಾ ಮನೆ ತುಂಬಾ ಓಡಾಡಿಕೊಂಡಿರುವಳು, ಮನೆಯಲ್ಲಿ ತಾಯಿಗೆ ಮನೆಕೆಲಸದಲ್ಲಿ ನೆರವಾಗುತ್ತ, ಸ್ನೇಹಿತರು, ಕಥೆ, ಪುಸ್ತಕ ಎಂದು ಕಾಲ ಕಳೆಯುವಳು ಕವನ ಹಾಗಲ್ಲ ಸ್ವಲ್ಪ ಮಾತು ಕಡಿಮೆ ತಾನಯಿತು ತನ್ನ ಓದಾಯಿತು, ತಂಗಿಯ ಮನಸ್ಸನ್ನರಿತ ಸುಮ ತುಂಬಾ ಒತ್ತಾಯ ಮಾಡಿ ಅವಳನ್ನು ಹೊರಗಡೆ ಸುತ್ತಾಡಿಸುವಳು, ತನ್ನ ಸ್ನೇಹಿತರ ಮನೆಗೆ ಎಂದು ಕರೆದುಕೊಂಡುಹೋಗುತ್ತಿದ್ದಳು ಅವಳ ಉದ್ದೇಶ ಹಾಗದರು ಕವನ ಜನರ ಜೊತೆ ಬೆರೆಯಲಿ ಸ್ವಲ್ಪನಾದರು ಸ್ವತಂತ್ರ ಭಾವನೆ ಬರಲಿ ಎಂದು. ಕವನ ತುಂಬಾ ಬಾವನಾತ್ಮಕ ಜೀವಿ. ಯಾರೊಡನೆಯು ಬೆರೆಯುತ್ತಿರಲಿಲ್ಲ,ಕಾಲೇಜಿನಲ್ಲಿ ಸ್ನೇಹಿತರ ಜೊತೆ ಇದ್ದರು ,ಅವ್ರ ಒತ್ತಾಯಕ್ಕೆ ಕಟ್ಟು ಬಿದ್ದು ಸುತ್ತಾಡಿದರು ಯಾವುದನ್ನು enjoy ಅಂತು ಮಾಡುತ್ತಿರಲಿಲ್ಲ ಪ್ರತಿಯೊಂದನ್ನು ಯಾಂತ್ರಿಕವಾಗೆ ಮಾಡುತ್ತಿದ್ದಳು. ಇಬ್ಬರ ನಡುವಿನ ಅಂತರ ಹೆಚ್ಚಿರದ ಕಾರಣ ಕೆಲವೊಮ್ಮೆ ಅಕ್ಕ ಅಂತ ಕೆಲವೊಮ್ಮೆ ಸುಮ ಎಂದು ಕರೆಯುತ್ತಿದ್ದಳು ಅವಳು ಹೇಗೆ ಕರೆದರು ಸುಮನಿಗೆ ತಂಗಿಯ ಮೇಲೆ ಅತಿಯಾದ ಅಕ್ಕರೆ ಅವಳ ಮುಗ್ಧ ಸ್ವಭಾವ ನೋಡಿಯೆ ಹೆಚ್ಚು ಪ್ರೀತಿ. ಅಕ್ಕ ನಾಲ್ಕು ಮಾತನಾಡಿದರೆ ಇವಳು ಎರಡೆ ಮಾತನಾಡುತಿದ್ದಳು.ಕವನಳ ಬಟ್ಟೆ ಬರೆ ಎಲ್ಲವನ್ನು ಸುಮನೆ ಗಮನಿಸಬೇಕೆತ್ತು. ಪ್ರತಿಯೊಂದಕ್ಕು ಅಕ್ಕನನ್ನೆ ಅವಲಂಬಿಸಿದ್ದಳು, ತನಗೆ ಏನು ಬೇಕಾದರು ಅಕ್ಕನನ್ನೆ ಕೇಳುತಿದ್ದಳು, ತಾನಾಗಿ ಎಂದು ಹೊರಗೋಗಿ shopping ಮಾಡಿದವಳಲ್ಲ, ಹಾಗೇನಾದರು ಅಂತ ಪ್ರಸಂಗ ಬಂದರೆ ಅಕ್ಕನನ್ನೆ ಕರೆದುಕೊಂದು ಹೋಗುವಳು, ಹಾಗೆಲ್ಲ ದಾರಿಯುದ್ದಕು ಸುಮನೆ ಮಾತಾಡಬೇಕಿತ್ತು, ಅದಕೆಲ್ಲ ಅವಳ ನಗುವೆ ಉತ್ತರವಾಗಿರುತ್ತಿತ್ತು, ತೀರ ಅಗತ್ಯ ಎಂದರೆ ಮಾತ್ರ ಮಾತನಾಡುತ್ತಿದ್ದಳು.ಎಷ್ಟೊ ಸಾರಿ ಸುಮನೆ ..ಲೇ ಕವನ ನಿನಗೆ ಆಸೆನೆ ಇಲ್ವೇನೆ ನಾನ್ ಯಾವ್ ಬಟ್ಟೆ ತಂದ್ಕೊಟ್ರು ಹಾಕ್ಕೊತಿಯಲ್ಲ ಒಂದ್ ಸಾರಿನಾದ್ರು ಇದು ಬೇಡ, ಬೇಕು , ಇಷ್ಟಾಅಗ್ಲಿಲ್ಲ ಏನು ಹೇಳದೆ ಇಲ್ವಲ್ಲೆ ಒಳ್ಳೆ ಗೊಂಬೆ ಥರ,,,,,,,,,ಅಕ್ಕ ಗೊಂಬೆ ಎಲ್ ಹಾಕ್ಕೊಳುತ್ತೆ ನಾವೆ ಹಾಕ್ ಬೇಕಲ್ಲ ನಕ್ಕುಬಿಡುವಳು. ಎಷ್ಟೊ ಬಾರಿ ತಂಗಿಯನ್ನು ಕೂರಿಸಿಕೊಂಡು ಬುದ್ಧಿ ಹೇಳುತ್ತಿದ್ದಳು, ಓದು ಒಂದೆ ಪ್ರಪಂಚ ಅಲ್ಲಕಣೆ double degree ಮಾಡ್ತಾಯಿದೀಯ, ಸ್ವಲ್ಪನಾದ್ರು life enjoy ಮಾಡೆ ಏನೆಲ್ಲ ಹೇಳಿದರು ಪ್ರಯೋಜನಕ್ಕಂತು ಬಂದಿರಲಿಲ್ಲ. ಕೆಲವೊಮ್ಮೆ ಶಾರದಮ್ಮನಿಗು ಮಗಳ ಯೋಚನೆ ಸುಳಿಯದಿರುತಿರಲಿಲ್ಲ ಮುಂದೆ ಹೋದವರ ಮನೆಯಲ್ಲಿ ಹೇಗೊ ಏನೊ ಎಂದು?, ಅದನ್ನು ಗಂಡನ ಬಳಿ ಪ್ರಸ್ತಾಪಿಸಿದ್ದರು ಕೂಡ, ಹಾಗೆಲ್ಲ ಅವರು ಏನಾದರು ಹೇಳಿ ಸಮಾಧಾನ ಮಾಡುತಿದ್ದರು, ಆ ಯೋಚನೆ ಅವರ ಮನದಲ್ಲಿಲ್ಲ ಎಂದಲ್ಲ ಅದನ್ನು ಹೆಂಡತಿಯ ಮುಂದೆ ತೋರ್ಪಡಿಸುತ್ತಿರಲಿಲ್ಲ, ಮಕ್ಕಳಿಬ್ಬರ ಮೇಲೆ ಅತಿಯಾದ ಅಭಿಮಾನ ರಾಮಮುರ್ತಿಯವರಿಗೆ, ತಮಾಷೆಗು ಮಕ್ಕಳನ್ನು ಒಮ್ಮೆಯು ಗದರಿದವರಲ್ಲ.ಮಕ್ಕಳಿಲ್ಲದ ಸಮಯದಲ್ಲಿ ಅವರ ಭವಿಷ್ಯದ ಬಗ್ಗೆ ಮಾತನಾಡುತಿದ್ದರು, ಮುಂದಿನ ಯುಗಾದಿಯ ನಂತರ ಸುಮನ ಮದುವೆ ಮಾಡುವ ಯೋಚನೆ ಮಾಡಿದ್ದರು.

ಸುಮನ.... ಏ ಸುಮ ಒಂದೆ ಸಮನೆ ಅಮ್ಮ ಕೂಗುತ್ತಿರುವುದು ಕೇಳಿ ಪಕ್ಕದ ಮನೆ ರಾಧನ ಜೊತೆ ಮಾತು ನಿಲ್ಲಿಸಿ ಸುಮ ಓಡಿ ಬಂದಳು ಹೊರಗಿನಿಂದ. ಏನಮ್ಮ ನಿಂದು?.. ಏನೆ ಮಾಡ್ತಾಇದೀಯೆ... ಶಾರದಮ್ಮ ಹಾಗೆ ಹೊರಗಡೆ ಇಣುಕುತ್ತ... ಮಳೆ ಬರೊ ಹಾಗಿದೆ... ಬಟ್ಟೆ ತಂದ್ಬಿಡು..... ಅಪ್ಪ, ಕವನ ಬರೊ ಹೊತ್ತಾಯಿತು...........ಕಾಫಿ ಕುಡಿಯೋಣ ಹಾಗೆ ಬಜ್ಜಿ ಮಾಡ್ತಾಇದೀನಿ ಹೇಳುತ್ತಲೆ ಒಳ ನಡೆದರು ಶಾರದಮ್ಮ. ಅದನ್ನು ನೆನದು ಚಂಗನೆ ಓಡಿದಳು ಸುಮನ ಬಟ್ಟೆ ತರಲು.

ಗೇಟ್ ತೆರೆದ ಸದ್ದಾಯಿತು ಬಗ್ಗಿ ನೋಡಿದರು ಶಾರದಮ್ಮ, ಶಂಕ್ರಣ್ಣ ಅಲ್ವ!!!............ ತವರಿನ ದೂರದ ಸಂಬಂಧ ಖುಷಿಯಿಂದಲೆ ಸ್ವಾಗತಿಸಿದರು........ಶಂಕ್ರಣ್ಣ ಬಂದಿದಾನೆ ಅಂದ್ರೆ ಏನೊ ವಿಷಯ ಇರಲೆಬೇಕೆಂದು ಮನಸ್ಸಿನಲ್ಲೆ ಲೆಕ್ಕಹಾಕಿದಳು. ಬಾ...!! ಶಂಕ್ರಣ್ಣ ಎಷ್ಟು ದಿನ ಆಯ್ತು ನಿನ್ನ ನೋಡಿ.......... ನಗುತ್ತಲೆ ಒಳ ಬಂದು ಕುರ್ಚಿಯಲ್ಲಿ ಕುಳಿತ ಮನೆಯಲ್ಲ್ಲಿ ಎಲ್ಲ ಚೆನ್ನಾದಿದ್ದಾರ .........ಎಲ್ಲರು ಚೆನ್ನಾಗಿದ್ದಾರೆ ಶಾರದಕ್ಕ.. ಭಾವ ಇನ್ನು ಬಂದಿಲ್ವೆ ವಿಚಾರಿಸಿದ.....ಇನ್ನೇನು ಬರುವ ಹೋತ್ತಾಯಿತು ನಡಿ ಕೈ ಕಾಲು ತೊಳಿ ಕಾಫಿ ಕುಡಿಯುವಂತೆ. ಭಾವನು ಬರ್ಲಿ ಬಿಡಕ್ಕ ಒಟ್ಟಿಗೆ ಕುಡಿದ್ರಾಯ್ತು ಎನ್ನುತ್ತ ಕೈ ಕಾಲು ತೊಳೆದು ಬಂದು ಕುಳಿತ. ಎಲ್ಲಕ್ಕ ಮಕ್ಕಳು ಕಾಣಿಸ್ತಾ ಇಲ್ಲ ಕಣ್ಣುಗಳು ಯಾರನ್ನೋ ಅರಸುವಂತಿತ್ತು. ಕವನ ಪರೀಕ್ಷೆ ಬರಿಯೋಕೆ ಹೋಗಿದ್ದಾಳೆ ಕೊನೆ ವರ್ಷ ಅಲ್ವ. ಸುಮ ಹಿಂದಿದಾಳೆ, ಅದೊ ಬಂದ್ಲು ನೋಡು ಸುಮ..........ಸುಮ ಶಂಕ್ರಣ್ಣ ಬಂದಿದಾರೆ ನೋಡೆ..... ಓ ಶಂಕ್ರಣ್ಣ ಚೆನಾಗಿದ್ದೀರ ವಿಚಾರಿಸುತ್ತಲೆ ಒಳ ನಡೆದಳು ಸುಮ ಬಟ್ಟೆಗಳನ್ನು ಮಡಚಲು ಅವಳ ಹಿಂದೆಯೆ ಶಂಕ್ರಣ್ಣನ ಕಣ್ಣುಗಳು ಓಡಿದವು.

ಎಲ್ಲಕ್ಕ ಊರ್ ಕಡೆ ಬರ್ಲೆ ಇಲ್ಲ ತುಂಬಾ ದಿನ ಆಯ್ತು ಯಾವುದೊ ವಿಷಯಕ್ಕೆ ಪೀಠಿಕೆ ಇದ್ದಂತಿತ್ತು ಮಾತು...............ಹಾಗೆನಿಲ್ಲ ಶಂಕ್ರಣ್ಣ ಮೊನ್ನೆ ಕಮಲಕ್ಕನ ಮಗಳ ಸವಿತನ ಮದುವೆಗೆ ಬಂದಿದ್ವಲ್ಲ. ಹೋ!!........... ಹೌದಲ್ವ ಅಂತು ಒಳ್ಳೆ ಕಡೆ ಕೊಟ್ರು ಎನ್ನುತ್ತಲ್ಲೆ ನೆನಪು ಮಾಡಿಕೊಂಡಂತೆ ನಕ್ಕ. ಅಕ್ಕ.? ಕಮಲಕ್ಕನ ಮಗಳು ನಮ್ಮ ಸುಮ ಒಂದೆ ವಾರಿಗೆ ಅಲ್ವ ವಿಷಯ ಮುಂದುವರೆಸಲು ಎಳೆ ಸಿಕ್ಕಂತಾಯಿತು ಶಂಕ್ರಣ್ಣನಿಗೆ.
ಹೌದು!!.. ಶಂಕ್ರಣ್ಣ..ನಮ್ ಸುಮನ್ ಗಿಂತ ಆರು ತಿಂಗಳು ದೊಡ್ಡವಳು ಸವಿತ ಅನ್ನುತ್ತಲೆ ಬಂದು ಕುಳಿತಳು ಶಾರದಕ್ಕ. ಅಕ್ಕ ಹಿಂಗ್ ಹೇಳ್ತೀನಿ ಅಂತಲ್ಲ , ನಮ್ ಸುಮ ಯಾವುದರಲ್ಲಿ ಕಮ್ಮಿ ಅಂತ ಹ್ಹೂ ಅಂದ್ರೆ ಮನೆ ಬಾಗ್ಲಿಗೆ ಗಂಡುಗಳು ಬರ್ತಾವೆ ಯಾಕಕ್ಕ ಅದ್ರು ಬಗ್ಗೆ ಇನ್ನು ಭಾವ ಮನಸ್ಸು ಮಾಡಿಲ್ವ?!!.. ಸುಮ್ಮನೆ ನಕ್ಕು (ತನ್ನ ಲೆಕ್ಕಾಚಾರ ತಪ್ಪಿಲ್ಲ ಎನಿಸಿತು) ಹಾಗೆನಿಲ್ಲ ಶಂಕ್ರಣ್ಣ ಈ ಯುಗಾದಿ ಕಳಿಯಲಿ ನೋಡೊದುಕ್ಕೆ ಶುರುಮಾಡಿದ್ರಾಯ್ತು ಅಂತ ಅನ್ಕೊಂಡಿದ್ವಿ.ಯಾಕೆ?!! ಯಾವುದಾದ್ರು ಗಂಡು ಗೊತ್ತೇನು?...........ಅದೆ ವಿಚಾರಕ್ಕೆ ಬಂದಿದ್ದಕ್ಕ ನಾನು ಅನ್ನುವಾಗಲೆ ......ಏನ್ ಶಂಕ್ರಣ್ಣ ಯಾವಗ್ ಬಂದಿದ್ದು ನಗುತ್ತಲೆ ರಾಮಮುರ್ತಿ್ಯವರು ಒಳ ಅಡಿಯಿಟ್ಟರು..ಹೋ ಭಾವ ಹೇಗಿದ್ದೀರ?... ಚೆನ್ನಾದ್ದೀವಯ್ಯ ಏನು ತುಂಬಾ ಅಪರೂಪ ಅಗ್ಬಿಟ್ಟೆ .........ಇರು ಕೈ ಕಾಲು ತೊಳ್ಕಂಡು ಬರ್ತೀನಿ, ರಾಮಮುರ್ತಿ ಬಟ್ಟೆ ಬದಲಾಯಿಸಿ ಕೈ ಕಾಳು ತೊಳೆದು ಟವಲ್ ನಲ್ಲಿ ಮುಖ ಒರೆಸುತ್ತಾ ಬಂದು ಕುಳಿತರು. ಅಷ್ಟೊತ್ತಿಗಾಗಲೆ ಶಾರದಮ್ಮ ಬಿಸಿ ಬಿಸಿ ಕಾಫಿ, ಬಜ್ಜಿ ತಂದರು, ಮೋಡ ದಟ್ಟವಾದೆಂತನಿಸಿತು, ಕವನ ಬರ್ಲಿಲ್ವ ಶಾರು ದಿನಾ ಇಷ್ಟೊತ್ತಿಗಾಗ್ಲೆ ಬಂದ್ಬಿಡ್ತಾ ಇದ್ಲಲ್ವ??!!! .... ಯಾವತ್ತು ಹೀಗೆ ತಡಮಾಡಿದವಳಲ್ಲ ಮುಖದಲ್ಲಿ ಆತಂಕದ ಗೆರೆ ಮೊಡಿದವು, ಇಲ್ಲಾಂದ್ರೆ ಇವತ್ತು ಕಾಲೇಜಿನ ಕೊನೆ ದಿನ ಅಲ್ವ ಸ್ವಲ್ಪ ಹೊತ್ತಾಗುತ್ತೆ ಅಂತ ಹೇಳ್ ಹೋಗಿದಾಳೆ..........ನಿರ್ಮಳವಾಯಿತು ಮನಸು.ಮತ್ತೆ ಶಂಕ್ರಣ್ಣನ್ನ ನೆನಪಾಗಿ ಮಾತು ಮುಂದುವರೆಸಿದರು, ಎನ್!!? ಶಂಕ್ರಣ್ಣ ಮತ್ತೇನ್ ಉರ್ ಕಡೆ ವಿಷಯ, ಏನು ಇಲ್ಲ ಭಾವ ಹಾಗೆ ಪರಿಚಯದವರ ಮನೆಗೆ ಬಂದಿದ್ದೆ ನಿಮ್ಮ ನೆನಪಾಯಿತು ಮಾತಾಡಿಸಿಕೊಂದು ಹೋಗೋಣ ಅಂತ ಬಂದೆ, ರಾಮಮುರ್ತಿಯವರಿಗು ಗೊತ್ತು ಕೆಲಸವಿಲ್ಲದೆ ಬರುವ ಅಸಾಮಿ ಅಲ್ಲವೆಂದು. ಇಬ್ಬರು ಕಾಫಿ ಕುಡಿಯುತ್ತಾ ಬಜ್ಜಿ ತಿನ್ನುತ್ತಾ ಮಾತು ಮುಂದುವರೆಸಿದರು , ಶಂಕ್ರಣ್ಣನಿಗೆ ತಾನು ಬಂದ ಕಾರಣ ತಿಳಿಸಲು ಹೇಗೆ ಮಾತು ಪ್ರಾರಂಭಿಸಬೇಕೆಂದು ತಿಳಿಯದೆ ಚಡಪಡಿಸಿದ ಅದನ್ನರಿತ ಶಾರದಕ್ಕ ತಾವೆ ಮುಂದುವರೆಸಿದರು, ಏನೂಂದ್ರೆ.. ಶಂಕ್ರಣ್ಣ ನಮ್ ಸುಮನ ಮದುವೆ ವಿಚಾರ ಮಾತಾಡಲು ಬಂದಿದ್ದಾನೆ.

ಹೌದ!!.. ಎಂಬಂತೆ ನೋಡಿದರು ಶಂಕ್ರಣ್ಣನ ಕಡೆ....Green signal ಸಿಕ್ಕಂತಾಗಿ ಮುಂದುವರೆಸಿದ ಶಂಕ್ರಣ್ಣ ಹೌದು ಭಾವ ಎಂದ ಮೊನ್ನೆ ಕಮಲಕ್ಕನ ಮಗಳ ಮದುವೆಗೆ ಬಂದಿದ್ರಲ್ಲ ಅಕ್ಕನು ಸುಮನು ( ರಾಮಮುರ್ತಿ ಕೆಲಸದ ಒತ್ತಡದಿಂದ, ಕವನ ಪರೀಕ್ಷೆ ಹತ್ತಿರ ಇದ್ದ ಕಾರಣದಿಂದ ಮದುವೆಗೆ ಹೋಗಲಾಗಲಿಲ್ಲ) ಆಗ ಒಬ್ಬ ಹುಡುಗ ನಮ್ ಸುಮನ್ನ ನೋಡಿ ಇಷ್ಟ ಪಟ್ಟಿದಾನೆ,. ಎಂದು ಭಾವನ ಮುಖ ನೋಡಿದ ಮುಂದುವರೆಸು ಎನ್ನುವಂತಿತ್ತು ಮುಖಬಾವ.ಹುಡುಗನ ಹೆಸರು ಚಂದ್ರಕಾಂತ ಊರು ಬೆಂಗಳೂರು, ಒಬ್ಬನೆ ಮಗ ಸಂಭಾವಿತ, ಸಾಕಷ್ಟು ಸ್ಠಿತಿವಂತರು, ಹುಡುಗ Businees ಮಾಡ್ಕೊಂಡಿದಾನೆ, ಸ್ವಂತ ಮನೆ, ಆಸ್ತಿಪಾಸ್ತಿ ಬೇಕಾದಷ್ಟಿದೆ, ಅವರ ಅಪ್ಪ ಅಮ್ಮನಿಗು ಸುಮ ಒಪ್ಪಿಗೆ ಆಗಿದಾಳೆ. ಹುಡುಗನ ಜಾತಕ, ಫೋಟೊ ಕೊಟ್ಟಿದ್ದಾರೆ ತನ್ನ ಚೀಲದಿಂದ ತೆಗೆಯೊತ್ತಾ, ನೀವು ಒಪ್ಪೊದಾದ್ರೆ ಮುಂದುವರೆಯಬಹುದು ಅಂದು ಅವರ ಕೈಗೆ ಕೊಟ್ಟ. ಆಗಲೆ ಶಾರದಮ್ಮನಿಗೆ ಸಡಗರ ಶುರುವಾದೆಂತನಿಸಿತು.ರಾಮಮುರ್ತಿಯವರು ಫೊಟೋ ಕೈಗೆ ತೆಗೆದು ಕೊಂಡು ನೋಡಿದರು, ಹುಡುಗ ರೂಪದಲ್ಲಿ ತೆಗೆದು ಹಾಕುವಂತಿಲ್ಲ ಎನಿಸಿತು, ಸುಮಳನ್ನು ಮನದಲ್ಲೆ ನೆನೆದು ಹೋಲಿಸಿ ನೋಡಿದರು, ಜೋಡಿ ಒಪ್ಪುವಂತಿತ್ತು.ಎಲ್ಲಾರೀತಿಯಿಂದಲು ಹೊಂದಿಕೆಯಾದರೆ ಮುಂದುವರಿಯಲು ಅಭ್ಯಂತರವಿಲ್ಲ ಎನಿಸಿತು. ಹೆಂಡತಿಯ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದರು, ಆಗಲೆ ಸಂಭ್ಹ್ರಮದ ಕಳೆ ಕಂಡರು, ಎಷ್ಟಾದರು ಹೆತ್ತತಾಯಲ್ಲವೆ ಅರ್ಥವಾದಂತೆ ನಕ್ಕು ಸುಮ್ಮನಾದರು. ಫೊಟೋವನ್ನು ಶಾರುವಿನ ಕೈಗೆ ಕೊಡುತ್ತಾ ಸರಿ ಶಂಕ್ರಣ್ಣ, ಮುಂದಿನ ವಿಷಯವನ್ನು ನಿನಿಗೆ ತಿಳುಸ್ತೀವಿ.

ಅರ್ಥಮಾಡಿಕೊಂಡವನಂತೆ ಹೊರಡಲನುವಾದ ಶಂಕ್ರಣ್ಣ ಅವನಿಗು ಗೊತ್ತು ಭಾವ ಯಾವುದೆ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳುವರಲ್ಲವೆಂದು, ಇಷ್ಟ್ಟು ವರ್ಷದಲ್ಲಿ ಭಾವ ಅವರ ಜೀವನದಲ್ಲಿ ಎಂದು ಎಡವಿದ್ದನ್ನು ಕಂಡಿರಲಿಲ್ಲ, ಇನ್ನು ಇದು ಅವರ ಮುದ್ದಿನ ಮಕ್ಕಳ ಮದುವೆ ವಿಚಾರ ಅಳೆದು ಸುರಿದೆ ನಿರ್ಧಾರ ಕೈ ಗೊಳ್ಳುವರೆಂದು ಅರಿತು, ಸರಿ ಭಾವ ನೀವ್ ಹೇಗ್ ಹೇಳ್ತೀರೊ ಹಾಗೆ ಅನ್ನುತ್ತಾ ಹೊರಡಲನುವಾದ

ಏಯ್! ಶಂಕ್ರಣ್ಣ ಹಾಗ್ಲೆ ಹೊರಟ್ಬಿಟ್ಯ, ರಾತ್ರೀಗೆ ಊಟ ಮಾಡ್ಕ್ಂಡ್ ಹೋಗುವಂತೆ ಎದ್ದರು ಶಾರದಕ್ಕ.. ಇಲ್ಲಕ್ಕ ಬರ್ತಿನಿ ಇನ್ನೊಬ್ರುನ್ನ ನೋಡೋದಿದೆ ನೋಡ್ಕ್ಂಡು ಹೋಕ್ತೀನಿ. ಬರ್ತೀನಿ ಭಾವ, ಸರಿ ಎಂದರು ರಾಮಮುರ್ತಿಯವರು, ಅವರ ಮನಸ್ಸಾಗಲೆ ಲೆಕ್ಕಾಚಾರ ಶುರುಮಾಡಿತ್ತು.
ಶಂಕ್ರಣ್ಣನನ್ನು ಗೇಟಿನವರೆಗು ಬೀಳ್ಕೊಟ್ಟು ಒಳಬಂದರು ಶಾರದಕ್ಕ. ಮುಂದೆನು ಅನ್ನುವಂತಿತ್ತು ಇಬ್ಬರ ಕಣ್ಣೋಟ. ಬಾ ಶಾರು ಕೂತ್ಕೊ ನಿನ್ನ ಅಭಿಪ್ರಾಯ ಎನು ಈ ವಿಷಯದಲ್ಲಿ, ಹುಡ್ಗ ಒಪ್ಪಿಗೆ ಆದ್ನ, ನಗುತ್ತಾ ಶಾರದಕ್ಕ ನಂದೇನಿದೆ ಅಂದ್ರೆ ಜಾತಕ ಎಲ್ಲಾ ಕೂಡಿ ನಮ್ ಸುಮ ಒಪ್ಪಿದ್ರೆ ಆಯ್ತು , ಸರಿ ಬಿಡು ನೀನು ಸುಮಂಗೆ ಸುಕ್ಷ್ಮವಾಗೆ ವಿಷಯ ತಿಳ್ಸು, ನಮ್ ಕಮಲು ಮಗಳ್ ಮದುವೆಗೆ ಹುಡ್ಗ ಬಂದಿದ್ದ ಅಂದ್ಮೇಲೆ ಕಮಲು ಯಜಮಾನ್ರಿಗು ವಿಷಯ ತಿಳ್ದಿರುತ್ತೆ, ರಾತ್ರೆ ಫೊನ್ ಮಾಡಿ ವಿಚಾರ ಮಾಡ್ತೀನಿ ಅವರ ಅಭಿಪ್ರಾಯ ತಿಳ್ಕೊಂಡು ಮುಂದುವರ್ಸಣ ಎನ್ನುತ್ತಲೆ ಮನಸ್ಸು ಕವನನ್ನ ನೆನೆಯಿತು, ಅರಾಕ್ತ ಬಂತು ಕವನ ಬರ್ಲೆಇಲ್ವಲ್ಲೆ ಎನ್ನುತ್ತ ಗೇಟಿನ ಬಳಿ ಹೋದರು ಈ ತರಹದ ಚಡಪಡಿಕೆ ಶಾರದಮ್ಮನಿಗೇನು ಹೊಸದಲ್ಲ ಮಕ್ಕಳು ಮನೆಗೆ ಬರುವುದು ಸ್ವಲ್ಪ ಹೊತ್ತಾದಾಗಲೆಲ್ಲ ಅವರ ಚಡಪಡಿಕೆ ಕಂಡಿದ್ದರು, ನಕ್ಕು ತಟ್ಟೆ ಲೋಟಗಳನ್ನು ತೆಗೆದುಕೊಂದು ಒಳನಡೆದರು.

ಇತ್ತ ಶಾರದಮ್ಮ ಎಲ್ಲವನ್ನು ಬಚ್ಚಲಿಗಾಕಿ, ಸುಮನ ಹತ್ತಿರ ಬಂದರು ಮುಖ ತೊಳೆದು ಸಂಜೆಯ ವಾಕಿಂಗ್ ಗೆ ರೆಡಿಯಾಗುತ್ತಿದ್ದಳು. ಅವಳ ದಿನಚರಿಯಲ್ಲಿ ಅದು ಒಂದಾಗಿತ್ತು.ಮಗಳನ್ನೆ ದಿಟ್ಟಿಸಿ ನೋಡಿದರು ಭಾವನಳಷ್ಟು ಉದ್ದವಲ್ಲದಿದ್ದರು ಅವಳಷ್ಟೆ ದಟ್ಟವಾದ ಕಪ್ಪು ಕೂದಲು, ತಮ್ಮಂತೆ ಬಿಳುಪಾದ ಮೈ ಬಣ್ಣ ತನ್ನಷ್ಟೆ ಎತ್ತರ, ನೀಳ ನಾಸಿಕ, ಕೆಂದುಟಿಗಳು, ತಿದ್ದಿ ತೀಡಿದಂತ ಹುಬ್ಬು, ಮೊಗು, ಪುಟ್ಟದಾದ ಬಾಯಿ ಎಲ್ಲವು ಸೇರಿ ಸುಂದರಿ ಎಂದು ಹೇಳುತಿದ್ದವು. ಮೊಂಗುರುಳನ್ನು ಸರಿ ಮಾಡಿಕೊಳ್ಳೂತ್ತಾ ಏನಮ್ಮ ಹಾಗ್ ನೋಡ್ತಾಯಿದೀಯ ಇವತ್ತು ಏನಾದ್ರು special ಆಗಿ ಕಾಣ್ತಾಯಿದೀನ, ನಕ್ಕು ಅಕ್ಕರೆಯಿಂದ ತಲೆ ಸವರಿದರು ಶಾರದಕ್ಕ, ಅಚ್ಚರಿಯಾದಂತೆನಿಸಿತು ಸುಮನಿಗೆ ಏನೋ ಹೊಸತನ ಕಂಡಂತಾಯಿತು ತಾಯಿಯ ಮುಖದಲ್ಲಿ, ಏನು ಎಂಬಂತೆ ದಿಟ್ಟಿಸಿದಳು ಶಾರದಮ್ಮ.ನೇರವಾಗಿ ಹೇಳಲಾರದೆ ಇವತ್ತು ಮಳೆ ಬರೊ ಹಾಗಿದೆ ವಾಕಿಂಗ್ ಏನ್ ಹೋಗ್ಬೆಡ ರಾಧಂಗೆ ಬರಲ್ಲ ಅಂತ ಹೇಳ್ಬಿಡು ಏನೋ ಮರೆತವರಂತೆ ಹಿಂತಿರುಗಿದರು ಶಾರದಮ್ಮ, ತಿರುಗಿ ಮಾತನಾಡಲಾರದೆ ಗೊಣಗುತ್ತಲೆ ಸುಮ್ಮನಾದಳು, ಬೇರೆ ದಿನವಾದರೆ ಹೋಕ್ತೀನಮ್ಮ ಎಂದು ಗೋಗರಿಯುತಿದ್ದಳೇನೊ ಆದರೆ ಇವತ್ತು ಎನೋ ವಿಷಯವಿದ್ದಂತೆನಿಸಿ ತಾಯಿ ಮತ್ತೆ ಬಂದದ್ದನ್ನು ನೋಡಿ ಸುಮ್ಮನಾದಳು, ಸುಮಿ !! ಈ ಫೊಟೊ ನೋಡು ಯಾವ್ದು ಎನ್ನುತ್ತಲೆ ನೋಡಿದಳು ಶಂಕ್ರಣ್ಣ ಬಂದಿದ್ದು, ಅಮ್ಮ ವಾಕಿಂಗ್ ಹೋಗ್ಬೆಡ ಎಂದಿದ್ದು ಎಲ್ಲವು ಅರ್ಥವಾದೆಂತೆನಿಸಿ ಮುಜುಗರವಾಯಿತು ಯಾರಮ್ಮ ಇವ್ರು ಸರಿಯಾದ ನಿರ್ಧಾರಕ್ಕೆ ಬರಲಾರದೆ ಕೇಳಿದಳು, " ಚಂದ್ರಕಾಂತ" ಅಂತ ಹೆಸರು ನಾವು ಕಮಲಕ್ಕನ ಮಗಳು ಸವಿತನ್ ಮದುವೆಗೆ ಹೋಗಿದ್ವಲ್ಲ ಆಗ್ ಬಂದಿದ್ರಂತೆ ನಿನ್ನ ನೋಡಿ ಮೆಚ್ಕೊಂಡಿದಾರೆ, ಅದುಕ್ಕೆ ಫ್ಹೊಟೊ ಜಾತ್ಕ ಕಳ್ಸಿದಾರೆ ಹೇಗಿದಾನೆ ಹುಡ್ಗ ಮತ್ತೊಮ್ಮೆ ಕೇಳಿದರು, ಮತ್ತೊಮ್ಮೆ ದಿಟ್ಟಿಸಿದಳು ಫೊಟೊವನ್ನು " ಚಂದ್ರಕಾಂತ" ಯಾರೊ ಮನಸ್ಸನ್ನು ಮೀಟಿದಂತಾಯಿತು, ನೋಡ್ತಾಯಿರು ಮುಖ ತೊಳ್ಕೊಂಡು ಬರ್ತೀನೀ ಒಳ ನಡೆದರು ಶಾರದಕ್ಕ. ಯಾರು ಇಲ್ಲದ್ದನು ಖಚಿತಪಡಿಸಿಕೊಂಡು ಫೊಟೊವನ್ನೆ ದಿಟ್ಟಿಸಿದಳು ಸುಮ, ಮದುವೆಯ ಬಗ್ಗೆ ಜೀವನ ಸಂಗಾತಿಯ ಬಗ್ಗೆ ಕಥೆ, ಕಾದಂಬರಿ ಓದಿದ್ದಳು, ಸಿನಿಮಾ ನೋಡಿದ್ದಳು , ಸ್ನೇಹಿತರ ಜೊತೆ ಚರ್ಚಿಸಿದ್ದಳು, ಕನಸು ಕಂಡಿದ್ದಳು ಆದರೆ ಯಾವುದು ಅತಿ ಯಾಗಿರಲಿಲ್ಲ, ತಂದೆ ತಾಯಿಯ ನಿಲುವೆ ತನ್ನದು ಎಂದು ತಿಳಿದಿದ್ದಳು.ಮೊದಲ ಬಾರಿ ಒಬ್ಬ ಹುಡುಗನ ಫೊಟೊವನ್ನು ಇಷ್ಟು ಹತ್ತಿರದಿಂದ ನೋಡಿದ್ದಳ್ಳು ನಾಚಿಕೆಯಾದೆಂತೆನಿಸಿತು.ಕಲ್ಪನಾ ಲೋಕದಿಂದ ಹೊರ ಬಂದು ಅಡುಗೆ ಮನೆಗೆ ಓಡಿದಳು ತಾಯಿ ದೇವರ ದೀಪ ಹಚ್ಚಿ ಅಡುಗೆ ಮನೆಗೆ ಬಂದು ಮತ್ತೆ ಕಾಫಿ, ಬಜ್ಜಿ ಮಾಡುತ್ತಿದ್ದರು , ಸುಮಿ ಬಂದದ್ದು ಕಂಡು ಮೊಖ ನೋಡಿದರು ಹಿಂದಿನಿಂದ ಬಂದು ತಬ್ಬಿಕೊಂಡು ನಿಂತಳು ತಾಯಿಯನ್ನು, ಅವಳ ನಿರ್ಧಾರವನ್ನು ಅರಿತವರಂತೆ ಹಿಂದಿನಿಂದಲೆ ಕೆನ್ನೆಯನ್ನು ತಟ್ಟಿ ತಗೊ ಕಾಫಿ ತುಂಬಿದ ಲೋಟಗಳ ತಟ್ಟೆಯನ್ನು ಕೈಗೆ ಕೊಡುತ್ತಾ ಕವನನು ಬಂದ್ಲು ಒಟ್ಟಿಗೆ ಕುಡಿಯೋಣ ನಡಿ ಎಂದು ಬಜ್ಜಿ ತಟ್ಟೆಯನ್ನು ತಾವು ತೆಗೆದುಕೊಂದು ಹೊರನಡೆದರು.

ಇತ್ತ ರಾಮಮುರ್ತಿ ತಮ್ಮ ಕಣ್ಣುಗಳನ್ನು ರಸ್ತೆಯ ತಿರುವಿನವರೆಗು ಹರಿಸಿದರು ಮಗಳು ತನ್ನ ಸ್ನೇಹತೆ ಲಲಿತಳ ಜೊತೆ ಬರುವುದು ಕಾಣಿಸಿತು ಮನಸ್ಸು ನಿರಾಳವೆನಿಸಿತು, ಅಷ್ಟೊತ್ತಿಗಾಗಲೆ ಮಳೆ ತನ್ನ ಹೆಜ್ಜೆ ಇಡಲು ಪ್ರಾರಂಭಿಸಿತು, ಮಳೆ ಬಂದರು ಓಡಿಬರಲು ಅಂಜುವ ಹುಡುಗಿ, ಬೇಗ ಬೇಗನೆ ಹೆಜ್ಜೆ ಹಾಕಿ ಗೇಟ್ ತಲುಪಿದಳು, Bye...kavana ಲಲಿತ ತನ್ನ ದಾರಿ ಹಿಡಿದಳು ಇವರ ಮನೆಯ ನಾಲ್ಕೈದು ಮನೆ ದಾಟಿದರೆ ಅವರ ಮನೆ.ಅಂದಿನ ಪರೀಕ್ಷೆಯ ಬಗ್ಗೆ ಮಾತನಾಡುತ್ತಲೆ ತಂದೆಯ ಜೊತೆ ಒಳ ನಡೆದಳು ಹೋಗಮ್ಮ ಮೊದಲು ಬಟ್ಟೆ ಬದಲಾಯಿಸು ತಂದೆ ಅಕ್ಕರೆಯಿಂದ ಹೇಳಿದರು. ಸರಿ ಎಂಬಂತೆ ಒಳನಡೆದಳು. dress change ಮಾಡಿ fresh ಆಗಿ ಬಂದಳು. ಆಗಲೆ ಅಕ್ಕ ಅಮ್ಮ ಅಪ್ಪ ಯಾವುದೊ ಗಹನವಾದ ವಿಚಾರ ಮಾತಾಡುತ್ತಿರುವಂತೆ ಕಂಡರು , ಬಾ ಕೂತ್ಕೊ ಪ್ರೀತಿಯಿಂದ ಕರೆದು ಮಗಳ ಕೈಗೆ ಕಾಫಿ ಕಪ್ಪನ್ನು ಇಟ್ಟರು ಅಮ್ಮ, ತೆಗೆದುಕೊಂಡು ಗುಟುಕರಿಸಿದಳು ಮನಸ್ಸಿಗೆ ಹಾಯೆನಿಸಿತು, ರಾಮಮುರ್ತಿ ಅಂದಿನ ಪೇಪರ್ ಮೇಲೆ ಕಣ್ಣಾಡಿಸುತ್ತಿದ್ದರು, ದಿನಾ ಕಾಲೇಜಿನಿಂದ ಬಂದ ಕೂಡಲೆ ಎನಾದರು ವಿಷಯ ತೆಗೆದು ಮಾತಿಗೆಳೆಯುತಿದ್ದ ಅಕ್ಕ ಇಂದು ಸುಮ್ಮನಿರುವುದನ್ನು ಕಂಡು ಅಕ್ಕನನ್ನೆ ಗಮನಿಸಿದಳು, ಏನೊ ಹೊಸ ಬದಲಾವಣೆ ಕಂಡಂತಾಯಿತು ಅಕ್ಕನ ಮುಖದಲ್ಲಿ ಪ್ರಶ್ನಾರ್ಥಕವಾಗಿ ನೋಡಿದಳು ಅಮ್ಮನ ಕಡೆ, ಅದನ್ನರಿತವರಂತೆ ಅವಳಿಗು ವಿಷಯವನ್ನು ತಿಳಿಸಲನುವಾದರು, ಫೊಟೊ ಎಲ್ಲೆ ಸುಮಿ ತಾಯಿ ಕೇಳಿದಾಕ್ಷಣ ತರಲು ಓಡಿದಳು ಅವಳ ಸಂಭ್ರಮ ಕಂಡು ತಂದೆ ತಾಯಿ ಇಬ್ಬರು ನಕ್ಕರು. ಪೇಪರಿನಿಂದ ಮುಖ ಹೊರಹಾಕಿ ಕನ್ನಡಕ ಸರಿ ಮಾಡಿಕೊಂಡು ಶಂಕ್ರಣ್ಣ ಬಂದಿದ್ದ ವಿಷಯವೆಲ್ಲ ತಿಳಿಸಿದರು ತಂದೆ,

ಅಕ್ಕ ಬರುವುದನ್ನ್ನು ನೋಡಿ ಜೋರಾಗಿ ನಕ್ಕಳು ಕವನ ಒಹೋ!! ಅದಕ್ಕೆ ಅಕ್ಕಂಗೆ ಇವತ್ತು ನಾನ್ ಮನೆಗ್ ಬಂದಿದ್ದು ಗೊತ್ತಾಗ್ಲಿಲ್ಲ ಅನ್ಸುತ್ತೆ , ದಿನಾ ನಾ ಬರೊ ಹೊತ್ತಿಗೆ ಕಾಯ್ಕೊಂಡಿದ್ದು ಮಾತಾಡ್ಸಿ ವಾಕಿಂಗ್ ಹೋಕ್ತಿದ್ದೋಳು ಇವತ್ತು ಆ ಸುದ್ದೀನೆ ಇಲ್ದೆ ಇರೋದು......... ಅಮ್ಮ ಅಕ್ಕನ ಮುಖ ನೋಡಮ್ಮ್ಮ ಎಷ್ಟು ಕೆಂಪುಗಾಗಿದೆ ಎಲ್ಲರು ನಕ್ಕರು ಅಕ್ಕ ತಂಗಿಯರಿಬ್ಬರು ಮಾತನಾಡಲಿ ಎಂದು ರಾಮಮುರ್ತಿಯವರು ಮುಂದಿನ ಕೈತೋಟಕ್ಕೆ ಹೋದರು, ಶಾರದಮ್ಮನು ರಾತ್ರಿಯ ಅಡುಗೆ ನೋಡಲು ಎದ್ದರು.
ಫೋಟೊ ತಂದು ತಂಗಿಯ ಕೈಗಿಟ್ಟಳು, ಹುಡುಗನ ಫೋಟೊ ದಿಟ್ಟಿಸಿದಳು ಸುಮ ಅಕ್ಕನಿಗೆ ಸರಿಯಾದ ಜೋಡಿ ಎನಿಸಿತು, ಏನ್ ಹೆಸ್ರೆ ಅಕ್ಕ!! " ಚಂದ್ರಕಾಂತ " ಅಂತೆ ಕಣೆ ನಾಚುತ್ತಲೆ ಹೇಳಿದಳು, ಓಹೋ ಹುಡ್ಗನ್ನ direct ಆಗಿ ನೋಡೆ ಇಲ್ಲ ಆಗ್ಲೆ ನಾಚ್ಕೆನಾ ಛೇಡಿಸಿದಳು ಅಕ್ಕನನ್ನು, ಥೂ ಹೋಗೆ ಎಂಥದು ಇಲ್ಲ ನಕ್ಕಳು, ಲೇ!! ಅಕ್ಕ ಭಾವ ಚೆನಾಗಿದಾರೆ ಕಣೆ, ಥೂ ಹೋಗೆ ಇನ್ನು settle ಆಗೆ ಇಲ್ಲ ಆಗ್ಲೆ ಭಾವನ, ಹೌದೆ ಅಕ್ಕ ಇವ್ರುನ್ನ ನೋಡಿದ್ರೆ ನನಿಗ್ಯಾಕೊ ನಿನಿಗೆ perfect match ಅನ್ಸುತ್ತೆ ಕಣೆ ಸುಮ. ನಗುತ್ತಲೆ ತಂಗಿಯನ್ನು ದಿಟ್ಟಿಸಿದಳು ಅವಳ ಮುಖದಲ್ಲಿರುವ ಸಂತೋಷದ ಜೊತೆ ಎಲ್ಲೊ ಒಂದು ಕಡೆ ನೋವಿನ ಎಳೆ ಕಂಡಂತಾಯಿತು ಅರಿತವಳಂತೆ ಯಾಕೆ ಕವನ ನಿನಿಗೆ ಓಪ್ಗೆ ಅಗ್ಲಿಲ್ವ ಹುಡ್ಗ? ಹಾಗೇನು ಇಲ್ಲ ಅಕ್ಕ ಹುಡ್ಗ ತುಂಬಾ ಚೆನ್ನಾಗಿದಾನೆ ಆದ್ರೆ ನೀನು ನನ್ನ ಮದುವೆ ಆಗಿ ಬಿಟ್ ಹೋಕ್ತಿಯಲ್ಲ ಅಂತ!! ಅವಳ ಬಗ್ಗೆ ಕರುಣೆ ಉಕ್ಕಿ ಬಂತು ಆದರು ಇದೆ ಸರಿಯಾದ ಸಮಯ ಬುದ್ಧಿ ಹೇಳಲು ಎಂದು, ಹೌದು ಕವನ ಇವತ್ತಲ್ಲ ನಾಳೆ ನಾನಾಗ್ಲಿ ನೀನಾಗ್ಲಿ ಮದುವೆ ಆಗಿ ಹೋಗ್ಲೆ ಬೇಕು, ಹೊಸ ಪರಿಸರ ಹೊಸ ಜನ ಹೊಂದಿಕೊಂಡು ಬಾಳಲೆ ಬೇಕು, ಗಂಡನ ಮನೆ ಅಂತ ಹೋಗ್ಲೆ ಬೇಕು, ಇವತ್ತು ನಾನು ನಾಳೆ ನೀನು ಅಷ್ಟೆ ವ್ಯತ್ಯಾಸ, ಅದುಕ್ಕೆ ನಾನ್ ಹೇಳದು ಸ್ವಲ್ಪನಾದ್ರು independent ಆಗು ಅಂತ atleast ನಾಳೆ ನಿನ್ ಮದುವೆ ಆಗೊ ಹುಡ್ಗನ್ನಾದು select ಮಾಡ್ಬೇಕಲ್ಲ ರೇಗಿಸಿದಳು, ಥೂ ಹೋಗಕ್ಕ ಅಳುವಂತಾಯೆತು ಮುಖ, Be bold ಕವನ ಅಬ್ಬ!! ಒಳ್ಳೆ ಹುಡ್ಗಿ ಏನು ಹೇಳೊ ಹಾಗೆಲ್ಲ , ಸರಿ ಬಿಡು ಸದ್ಯಕ್ಕೆ ನನ್ life patrner select ಮಾಡೋಕೆ help ಮಾಡು ಹೀಗೆ ಒಬ್ಬರಿಗೊಬ್ಬರು ಮಾತನಾಡುತ್ತ ಕುಳಿತರು.

Rating
No votes yet

Comments