ಫ್ಲಾಶ್ ನ್ಯೂಸ್ : ನಗರದಲ್ಲಿ ಐದು ಕಡೆ ಬಾಂಬ್ ಸ್ಫೋಟ. ಮೂವತ್ತಕ್ಕೂ ಹೆಚ್ಚು ಮಂದಿ ದುರ್ಮರಣ, ನೂರಾರು ಮಂದಿ ಗಾಯಾಳುಗಳಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳು ಇವೆ.
ಇಂದು ಸಂಜೆ ಐದರಿಂದ ಆರು ಗಂಟೆಯ ಒಳಗೆ ನಗರದ ವಿವಿಧ ಭಾಗಗಳಲ್ಲಿ ಐದು ಬಾಂಬ್ ಸ್ಫೋಟಿಸಿದೆ. ಮೊದಲ ಮೂರು ಸ್ಪೋಟದ ತೀವ್ರತೆ ಹೆಚ್ಚಾಗಿದ್ದು ಸಾವು ನೋವು ಸಂಭವಿಸಿದೆ. ಇನ್ನೆರೆಡು ಸ್ಫೋಟ ಸಂಭವಿಸಿದ ಜಾಗದಲ್ಲಿ ಹೆಚ್ಚು ಜನ ಸಂದಣಿ ಇರದ ಕಾರಣ ಹೆಚ್ಚು ಹಾನಿ ಸಂಭವಿಸಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗ್ರುಹ ಮಂತ್ರಿಗಳು ಸ್ಫೋಟ ಸಂಭವಿಸಿದ ಜಾಗಕ್ಕೆ ಭೇಟಿ ಕೊಟ್ಟು ಸ್ಪೋಟದ ಹಿಂದೆ ಇರುವವರ ಪತ್ತೆಗೆ ಆದೇಶ ನೀಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ನಗರದ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಮೂರು ದಿನಗಳ ಕಾಲ ಸೆಕ್ಷನ್ ೧೪೪ ಜಾರಿಯಲ್ಲಿ ಇರುತ್ತದೆ. ಬಸ್ ಸ್ಟ್ಯಾಂಡ್, ರೈಲ್ವೆ ನಿಲ್ದಾಣ, ಏರ್ ಪೋರ್ಟ್ ಮುಂತಾದ ಜನಸಂದಣಿ ಇರುವ ಜಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ತಪಾಸಣೆ ಇಲ್ಲದೆ ಯಾರನ್ನೂ ಒಳಗೆ ಬಿಡುವಂತಿಲ್ಲ. ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳು ಕಂಡು ಬಂದಲ್ಲಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬೇಕೆಂದು ನಗರದ ಕಮೀಷನರ್ ಸೂಚಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಜನತೆಯನ್ನು ಕುರಿತು ನೀಡಿದ ಸಂದರ್ಶನದಲ್ಲಿ ನಾಗರೀಕರು ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡಬಾರದೆಂದು ಶಾಂತಿ ನೆಮ್ಮದಿ ಕಾಪಾಡಿ ಕೊಳ್ಳಬೇಕಾಗಿ ಕೇಳಿಕೊಂಡಿದ್ದಾರೆ. ಈ ದಾಳಿಯ ಹಿಂದೆ ಇರುವವರನ್ನು ಶೀಘ್ರವೇ
ಸೆರೆ ಹಿಡಿಯುವುದಾಗಿ ಹೇಳಿಕೆ ನೀಡಿದ್ದಾರೆ.
------------------------------------------------------------------------------------------------------------------------------------------------------------
ಹಲೋ...ಪವನ್ ಹೇಗಿದೀಯಪ್ಪ?
ಅದೇನೋ ಎಲ್ಲ ಕಡೆ ಬಾಂಬ್ ಸ್ಫೋಟ ಆಗಿದೆಯಂತೆ, ನೂರಾರು ಜನ ಸತ್ತು ಹೋಗಿದ್ದಾರಂತೆ, ಎಷ್ಟೊಂದು ಬಿಲ್ಡಿಂಗ್ ಗಳು ಬಿದ್ದು ಹೋಗಿವೆಯಂತೆ, ಮೂರು ದಿನ ರೈಲು, ಬಸ್ಸು, ಎಲ್ಲ ಕೆಲಸ ಮಾಡುವುದಿಲ್ಲವಂತೆ, ಎಲ್ಲ ಕಡೆ ಕರ್ಫ್ಯೂ ಇದೆಯಂತೆ ಹೌದೇನೋ. ಮೊದಲು ನೀನೊಂದು ಕೆಲಸ ಮಾಡು, ಈ ಕೂಡಲೇ ಯಾವುದಾದರೂ ಗಾಡಿ ಹಿಡಿದುಕೊಂಡು ಹೇಗಾದರೂ ಮಾಡಿ ಊರಿಗೆ ಬಂದುಬಿಡು. ಅದೆಲ್ಲ ಗಲಾಟೆಗಳು ಮುಗಿದ ಮೇಲೆ ಹೋಗುವೆಯಂತೆ ಎಂದು ಪವನ್ ನ ತಾಯಿ ಒಂದೇ ಉಸಿರಿನಲ್ಲಿ ಎಲ್ಲ ಹೇಳಿಬಿಟ್ಟರು.
ಅಮ್ಮ ಅಮ್ಮ ಒಂದು ನಿಮಿಷ ಅದೆಲ್ಲ ಅಂತೆ ಕಂತೆಗಳು ಅಷ್ಟೇ. ಬಾಂಬ್ ಸಿಡಿದಿರುವುದು ನಿಜ. ಆದರೆ ನೂರಾರು ಜನರೇನು ಸತ್ತಿಲ್ಲ, ಹಾಗೆ ಯಾವ ಬಿಲ್ಡಿಂಗ್ ಗಳೂ ಬಿದ್ದಿಲ್ಲ, ಯಾವ ಬಸ್ಸು, ರೈಲು ಸ್ಥಗಿತಗೊಂಡಿಲ್ಲ, ಎಲ್ಲವೂ ಮಾಮೂಲಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸುಮ್ಮನೆ ಜನ ಏನೇನೋ ಹಬ್ಬಿಸುತ್ತಾರೆ. ಆಮೇಲೆ ನಾನಿರುವ ಏರಿಯಾದಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ ಹಾಗೆಯೇ ನನಗೆ ಈಗ ಊರಿಗೆ ಬರಲು ಸಾಧ್ಯವಿಲ್ಲ. ಇಲ್ಲಿ ಆಫಿಸಿನಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ, ರಜೆ ಸಿಗುವುದಿಲ್ಲ ನಾನು ಹಬ್ಬಕ್ಕೆ ಬರುತ್ತೇನೆ. ನೀನೇನೂ ಗಾಭರಿಯಾಗಬೇಡ ನಾನೂ ಆರಾಮಾಗೆ ಇದ್ದೀನಿ ಎಂದು ಕರೆ ಕಟ್ ಮಾಡಿ ಟೀವಿ ಆನ್ ಮಾಡಿದ.
ಸುದ್ದಿ ವಾಹಿನಿಯೊಂದರಲ್ಲಿ ಬಿತ್ತರಗೊಳ್ಳುತ್ತಿದ್ದ ಸುದ್ದಿ ಹೀಗಿತ್ತು. ನಗರದಲ್ಲಿ ನಡೆದ ದಾಳಿಯ ಬಗ್ಗೆ ಗೃಹ ಸಚಿವಾಲಯಕ್ಕೆ ಒಂದು ಇಮೇಲ್ ಬಂದಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ದಾಳಿಕೋರರು ಲಷ್ಕರ್ ಎ ತೊಯ್ಬಾ ಸಂಘಟನೆಯವರು ಎಂದು ತಿಳಿದು ಬಂದಿದೆ. ಆಘಾತಕಾರಿ ಸುದ್ದಿ ಎಂದರೆ ಆ ಇಮೇಲ್ ಬಂದಿರುವುದು ಹೊರದೇಶದಿಂದಲ್ಲ ಬದಲಿಗೆ ಇಲ್ಲಿಯೇ ಒಂದು ಕಂಪ್ಯೂಟರ್ ಬಳಸಿ ಕಳುಹಿಸಲಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರಂತರವಾಗಿ ತಿಳಿಸುತ್ತೇವೆ.
ಆ ಸುದ್ದಿ ನೋಡಿ ಪವನ್ ಗೆ ಮೈಯೆಲ್ಲಾ ಉರಿಯುತ್ತಿತ್ತು. ಛೆ ಎಂಥಹ ಕಚಡಾ ಜನಗಳು ಇವರು. ಜನರು ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಇಂತಹವರನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಸುಟ್ಟು ಹಾಕಬೇಕು. ಎಷ್ಟು ಜನ ಅಮಾಯಕರ ಪ್ರಾಣ ತೆಗೆದಿದ್ದಾರೆ. ನಮ್ಮ ಸರ್ಕಾರವೂ ಅಷ್ಟೇ ನಿಷ್ಕ್ರಿಯವಾಗಿದೆ. ಇಂಥಹ ಘಟನೆಗಳು ಸಂಭವಿಸಿದಾಗ ಅಂಥಹ ಸಮಯದಲ್ಲಿ ಒಂದೆರೆಡು ಹೇಳಿಕೆಗಳು ಕೊಟ್ಟು ಸುಮ್ಮನಾಗಿ ಬಿಡುತ್ತಾರೆ. ಆಮೇಲೆ ಯಥಾಪ್ರಕಾರ. ಉಗ್ರವಾದಿಗಳನ್ನು ಅರೆಸ್ಟ್ ಮಾಡಿದರೆ ಅವರನ್ನು ದೇಶಭಕ್ತರಿಗಿಂತ ಹೆಚ್ಚು ಸೌಲಭ್ಯಗಳನ್ನು ಕೊಟ್ಟು ಸಾಕುತ್ತಾರೆ. ಒಂದೆರೆಡು ದಿನ ಎಲ್ಲೆಡೆ ಕಟ್ಟೆಚ್ಚರ ಎನ್ನುತ್ತಾರೆ,ಮೂರನೇ ದಿನ ಇನ್ನೊಂದು ಸ್ಫೋಟ ಸಂಭವಿಸಿದರೂ ಇವರಿಗೆ ಗೊತ್ತಾಗುವುದಿಲ್ಲ. ಥೂ...
ಅಷ್ಟರಲ್ಲಿ ಯಾರೋ ಪವನ್ ಮನೆಯ ಬಾಗಿಲನ್ನು ತಟ್ಟಿದ ಹಾಗಾಯ್ತು. ಯಾರಪ್ಪ ಎಂದು ಬಾಗಿಲು ತೆರೆದರೆ ಎದುರುಗಡೆ ಪೋಲೀಸರ ತಂಡ ಕೈಯಲ್ಲಿ ಬಂದೂಕುಗಳನ್ನು ಹಿಡಿದು ಪವನನತ್ತ ಗುರಿ ಮಾಡಿ ನಿಂತಿದ್ದರು. ಪವನನಿಗೆ ಏನಾಗುತ್ತಿದೆ ಎಂದು ಅರಿಯುವ ಮುನ್ನವೇ ಒಳಗಡೆ ನುಗ್ಗಿದ ಪೇದೆಯೊಬ್ಬ ಪವನನ ಕಾಲರ್ ಹಿಡಿದು ನಡಿಯೋ ಬದ್ಮಾಶ್ ಎಂದು ಅವನ ಕೈಗಳನ್ನು ಹಿಂದಕ್ಕೆ ತಿರುಗಿಸಿ ಕೋಳಗಳನ್ನು ತೊಡಿಸಿ ದರದರನೆ ಆಚೆಗೆ ಎಳೆದುಕೊಂಡು ಬಂದರು. ಅಕ್ಕಪಕ್ಕದ ಜನರೆಲ್ಲ ಇವನನ್ನೇ ನೋಡುತ್ತಿದ್ದರು. ಪವನ ಜೋರಾಗಿ ಕಿರುಚಾಡುತ್ತಿದ್ದ. ನನ್ನನ್ನು ಏಕೆ ಕರೆದೊಯ್ಯುತ್ತಿದ್ದೀರ? ನಾನು ಮಾಡಿದ ತಪ್ಪಾದರೂ ಏನು? ನನ್ನನ್ನು ಬಿಡಿ...ಎಂದು ಕೊಸರಾಡುತ್ತಿದ್ದ. ಆದರೆ ಅವನ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಯಾರಿಗೂ ಇರಲಿಲ್ಲ. ಸೀದಾ ಅವನನ್ನು ಗಾಡಿಯಲ್ಲಿ ಕೂಡಿಸಿಕೊಂಡು ಸ್ಟೇಶನ್ ಗೆ ಕರೆದುಕೊಂಡು ಬಂದರು.
ಪವನ ಇನ್ನೂ ಕಿರುಚಾಡುತ್ತಲೇ ಇದ್ದ. ಸ್ಟೇಶನ್ ಒಳಗೆ ಬಂದ ತಕ್ಷಣ ಪೋಲಿಸ್ ಅಧಿಕಾರಿಯೊಬ್ಬ ಲಾಟಿಯಿಂದ ಅವನ ಬೆನ್ನ ಮೇಲೆ ಒಮ್ಮೆ ಸವರಿದ. ಆ ನೋವಿನಿಂದ ಪವನ ಗಂಟಲು ಹರಿಯುವಂತೆ ಚೀರಿದ. ಸರ್ ಮೊದಲು ವಿಷಯ ಏನೆಂದು ತಿಳಿಸಿ ಆಮೇಲೆ ಮುಂದಿನದನ್ನು ಮಾತಾಡಿ ಎಂದು ಮತ್ತೊಮ್ಮೆ ಕೂಗಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಕಮೀಷನರ್ ಪೋಲಿಸ್ ಅಧಿಕಾರಿಯನ್ನು ಕರೆದು ವಿಚಾರಣೆ ನಡೆಸಿದಿರ ಎಂದು ಕೇಳಿದ. ಇನ್ನೂ ಇಲ್ಲ ಸಾರ್ ಈಗಷ್ಟೇ ಕರೆದುಕೊಂಡು ಬಂದಿದ್ದೇವೆ. ಮುಂದೆ ವಿಚಾರಿಸಬೇಕು ಎಂದು ತಿಳಿಸಿದ. ಆದಷ್ಟು ಬೇಗ ತಿಳಿದುಕೊಳ್ಳಿ ಮೇಲಿನಿಂದ ಪ್ರೆಶರ್ ಜಾಸ್ತಿ ಆಗಿದೆ. ಯಾವುದಕ್ಕೂ ನನಗೆ ಪ್ರತಿ ಗಂಟೆಗೊಮ್ಮೆ ವಿಷಯಗಳನ್ನು ತಿಳಿಸುತ್ತಿರಿ ಎಂದು ಹೊರಟು ಹೋದರು.
ಅವರು ಹೋದ ಮೇಲೆ ಪವನನನ್ನು ವಿಚಾರಣೆ ಕೋಣೆಗೆ ಕರೆದುಕೊಂಡು ಬಂದ ಅಧಿಕಾರಿ ಸುಮ್ಮನೆ ಬಾಯಿ ಬಿಟ್ಟು ಬಿಡು, ಯಾವಾಗಿನಿಂದ ಈ ಸ್ಫೋಟದ ಸಂಚು ನಡೆಸಿದ್ದೀರಿ? ಇದರಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ? ನಿಮ್ಮ ಮುಂದಿನ ಟಾರ್ಗೆಟ್ ಏನು? ನಿಮಗೆ ಸ್ಫೋಟಕಗಳು ಎಲ್ಲಿಂದ ಸರಬರಾಜು ಆಗುತ್ತಿದೆ? ನಿಮ್ಮ ಮುಖ್ಯಸ್ಥ ಯಾರು? ಇನ್ನೂ ಅನೇಕ ಪ್ರಶ್ನೆಗಳನ್ನು ಒಂದಾದ ಮೇಲೆ ಒಂದನ್ನು ಕೇಳುತ್ತಿದ್ದ. ಪವನನಿಗೆ ಒಂದೂ ಅರ್ಥ ಆಗಲಿಲ್ಲ. ಸರ್ ಯಾವ ಸ್ಫೋಟದ ಬಗ್ಗೆ ಕೇಳುತ್ತಿದ್ದೀರಾ? ಯಾವ ತಂಡದ ಬಗ್ಗೆ ಕೇಳುತ್ತಿದ್ದೀರಾ? ನನಗೊಂದೂ ಅರ್ಥ ಆಗುತ್ತಿಲ್ಲ. ದಯವಿಟ್ಟು ವಿವರವಾಗಿ ಹೇಳಿ ಎಂದ.
ಓಹೋ ನಿನಗೆ ವಿವರವಾಗಿ ಹೇಳಬೇಕ? ಹಾಗಿದ್ದರೆ ಕೇಳು, ನೆನ್ನೆ ನಗರದಲ್ಲಿ ನಡೆದ ಸ್ಫೋಟದ ಬಗ್ಗೆ ನಿನಗೆ ಗೊತ್ತಿದೆಯೋ ಇಲ್ಲವೋ?
ಹಾ ಗೊತ್ತು ಸರ್. ಆದರೆ ಅದಕ್ಕೂ ನನಗೂ ಏನು ಸಂಬಂಧ? ಏನು ಸಂಬಂಧಾನ? ಪಾಪ ಮಗೂ ಏನೂ ಗೊತ್ತೇ ಇಲ್ಲ ಇವನಿಗೆ. ಈ ಸ್ಫೋಟದ ಹೊಣೆಯನ್ನು ತನ್ನದೇ ಎಂದು ಲಷ್ಕರ್ ಎ ತೊಯ್ಬಾ ಸಂಘಟನೆ ಇಂದ ಒಂದು ಇಮೇಲ್ ಬಂದಿದೆ. ಆ ಇಮೇಲ್ ಬಂದಿರುವುದು ನಿನ್ನ ಕಂಪ್ಯೂಟರ್ ಇಂದ. ಈಗ ಗೊತ್ತಾಯ್ತ ನಾವು ಏತಕ್ಕೆ ನಿನ್ನನ್ನು ಕರೆದುಕೊಂಡು ಬಂದಿದ್ದು ಎಂದು. ಈಗಲಾದರೂ ಬಾಯಿ ಬಿಡು ಇದರ ಹಿ೦ದೆ ಇನ್ನೂ ಯಾರ್ಯಾರು ಇದ್ದಾರೆ, ನಿಮ್ಮ ಮುಂದಿನ ಟಾರ್ಗೆಟ್ ಏನು ಎಂದು.
ಪವನನಿಗೆ ಆ ಮಾತುಗಳನ್ನು ಕೇಳಿ ಆಘಾತವಾಯಿತು. ನಿಂತಿದ್ದ ಜಾಗದಲ್ಲಿ ಹಾಗೆ ಕುಸಿದು ಕುಳಿತ. ಸರ್ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ, ಅದು ಹೇಗೆ ನನ್ನ ಕಂಪ್ಯೂಟರ್ ಇಂದ ನಿಮಗೆ ಆ ಮೇಲ್ ಬಂದಿದೆಯೋ ಗೊತ್ತಾಗುತ್ತಿಲ್ಲ. ಎಂದವನೇ ಒಂದು ಕ್ಷಣ ತಡೆದು...ಸರ್ ಆ ಮೇಲ್ ನಿಮಗೆ ಎಷ್ಟು ಗಂಟೆಗೆ ಬಂದಿದೆ ಎಂದು ತಿಳಿಸುತ್ತೀರಾ?
ನೆನ್ನೆ ಸಂಜೆ ಸ್ಫೋಟ ನಡೆದ ಒಂದು ಗಂಟೆ ಅಂದರೆ ಎಂಟು ಗಂಟೆ ಸಮಯಕ್ಕೆ ಬಂದಿರುವುದು. ಅಲ್ಲ, ನೀನೆ ಕಳಿಸಿ ಮತ್ತೆ ನೀನೆ ಕೇಳ್ತಾ ಇದ್ದೀಯ? ಪರವಾಗಿಲ್ಲ ಕಣೋ ಚೆನ್ನಾಗಿ ನಾಟಕ ಆಡುತ್ತೀಯ. ಸರ್ ನಾನು ನಾಟಕ ಆಡುತ್ತಿಲ್ಲ. ನಾನು ಹೇಳುವ ವಿಷಯ ಪೂರ್ತಿ ಕೇಳಿ, ಆಮೇಲೆ ನೀವೇ ನಿರ್ಧಾರ ತೆಗೆದುಕೊಳ್ಳಿ. ಇದು ಬಹುಶಃ ನನ್ನ ರೂಂ ಮೇಟ್ ಖಾನ್ ನ ಕೆಲಸವೇ ಇರಬೇಕು. ಇದೇನೋ ಇದು ಹೊಸ ಕಥೆ ಕಟ್ಟುತ್ತಿದ್ದೀಯ ಎಂದು ಗದರಿಸಿದ ಆ ಪೋಲಿಸ್ ಅಧಿಕಾರಿ. ಸರ್ ಕಥೆ ಅಲ್ಲ ಸರ್ ಮೊದಲು ನನಗೆ ಪೂರ್ತಿ ಹೇಳಲು ಅವಕಾಶ ಕೊಡಿ. ಸರಿ ಹೇಳು..
ಸರ್ ಸರಿಯಾಗಿ ಎರಡು ತಿಂಗಳ ಹಿಂದೆ ನಮ್ಮ ಆಫೀಸಿಗೆ ಹೊಸದಾಗಿ ಸೇರಿದವನು ಈ ಖಾನ್. ನಾನು ಉಳಿದುಕೊಂಡಿದ್ದ ರೂಂ ಆಫೀಸಿಗೆ ಹತ್ತಿರದಲ್ಲಿ ಇದ್ದಿದ್ದರಿಂದ ಮತ್ತು ನಾನು ಒಬ್ಬನೇ ಇದ್ದಿದ್ದರಿಂದ ಅವನೇ ಬಂದು ನಾನೂ ಸಹ ನಿನ್ನ ರೂಮಿನಲ್ಲಿ ಇರುತ್ತೇನೆ ಎಂದ. ನಾನೂ ಸಹ ಒಪ್ಪಿಗೆ ನೀಡಿದೆ. ಅವನು ಬೆಂಗಳೂರಿಗೆ ಹೊಸದಾಗಿ ಬಂದಿರುವುದಾಗಿ ತನ್ನದು ಮು೦ಬೈ ಎಂದೂ ಹೇಳಿಕೊಂಡಿದ್ದ. ಜಾಸ್ತಿ ದಿವಸ ಇಲ್ಲಿ ಇರುವುದಿಲ್ಲ ಆರು ತಿಂಗಳು ಇಲ್ಲಿ ಕೆಲಸ ಮಾಡಿ ಮರಳಿ ಮುಂಬೈಗೆ ಹೊರಟು ಹೋಗುತ್ತೇನೆ ಎಂದು ಹೇಳಿದ್ದ. ಈ ಎರಡು ತಿಂಗಳಲ್ಲಿ ಅವನ ಚರ್ಯೆಗಳು ವಿಚಿತ್ರವಾಗಿದ್ದವು. ಆಫಿಸಿನಲ್ಲಿ, ರೂಮಿನಲ್ಲಿ ಜಾಸ್ತಿ ಹೊತ್ತು ಫೋನಿನಲ್ಲೇ ಇರುತ್ತಿದ್ದ. ಯಾರ ಜೊತೆ ಇಷ್ಟು ಹೊತ್ತು ಮಾತಾಡುತ್ತೀಯ ಎಂದು ಕೇಳಿದರೆ ತನ್ನ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡಿದ್ದ. ಅವನ ಫೋನನ್ನು ಯಾರಿಗೂ ಮುಟ್ಟಲು ಕೊಡುತ್ತಿರಲಿಲ್ಲ. ಒಮ್ಮೆ ಅವನು ಸ್ನಾನಕ್ಕೆ ಹೋಗಿದ್ದಾಗ ಅವನ ಮೊಬೈಲ್ ರಿಂಗಾಗುತ್ತಿತ್ತು, ನಾನು ಹೋಗಿ ನೋಡಿದರೆ ಅದು ಯಾವುದೋ ಐಎಸ ಡಿ ಸಂಖ್ಯೆಯ ಹಾಗೆ ಕಂಡಿತು. ನಾನು ಫೋನ್ ಎತ್ತುವುದರಲ್ಲಿ ಅವನೇ ಗಾಭರಿಯಿಂದ ಬಚ್ಚಲು ಮನೆಯಿಂದ ಓಡಿ ಬಂದು ಫೋನ್ ಎತ್ತಿಕೊಂಡು ಒಳಕ್ಕೆ ಹೋದ.
ಆಫೀಸಿನಲ್ಲೂ ಅಷ್ಟೇ ಯಾರೊಡನೆಯೂ ಜಾಸ್ತಿ ಕಲಿಯುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದಿದ್ದ. ನಾವು ಯಾವಾಗಲಾದರೂ ಉಗ್ರವಾದ ಅಥವಾ ಟೆರರಿಸ್ಟ್ ಬಗ್ಗೆ ಮಾತಾಡಿದರೆ ಅವನು ಅಲ್ಲಿಂದ ಹೊರಟು ಹೋಗಿ ಬಿಡುತ್ತಿದ್ದ. ನಾವು ಆ ಸಮಯದಲ್ಲಿ ಅವನನ್ನು ಛೇಡಿಸುತ್ತಿದ್ದೆವು ನಾವು ನಿನ್ನ ಬಗ್ಗೆ ಅಲ್ಲ ಮಾತಾಡುತ್ತಿರುವುದು ಎಂದು. ಆಗೆಲ್ಲ ಅವನು ಸುಮ್ಮನಾಗಿಬಿಡುತ್ತಿದ್ದ. ಒಂದು ವಾರದ ಕೆಳಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೋದವನು ಮೊನ್ನೆ ವಾಪಸ್ ಬಂದ. ಬರುವಾಗ ಎರಡು ದೊಡ್ಡ ದೊಡ್ಡ ಬ್ಯಾಗ್ ಗಳನ್ನು ತಂದಿದ್ದ. ಅದೇನೆಂದು ಕೇಳಿದ್ದಕ್ಕೆ ನಾಳೆ ಬೆಳಿಗ್ಗೆ ಇದನ್ನು ಸ್ನೇಹಿತನಿಗೆ ಕೊಡಬೇಕೆಂದು ಹೇಳಿದ. ನಾನೇನು ಹೆಚ್ಚು ಕೇಳಲು ಹೋಗಲಿಲ್ಲ. ಮರುದಿನ ಬೆಳಿಗ್ಗೆ ಬೇಗನೆ ಎದ್ದು ಆ ಎರಡು ಬ್ಯಾಗ್ ಗಳನ್ನು ತೆಗೆದುಕೊಂಡುಹೊರಟವನು ಮತ್ತೆ ಸಂಜೆ ಏಳು ಗಂಟೆ ಸುಮಾರಿಗೆ ವಾಪಸ್ ಬಂದವನೇ ಪವನ್ ಊರಿನಲ್ಲಿ ಅಪ್ಪನಿಗೆ ಹುಷಾರಿಲ್ಲ ನಾನು ಅರ್ಜೆಂಟಾಗಿ ಊರಿಗೆ ಹೋಗುತ್ತಿದ್ದೇನೆ. ಮತ್ತೆ ನಾನು ವಾಪಸ್ ಬರುವುದು ಅನುಮಾನ ಎಂದು ತನ್ನ ಲಗೇಜನ್ನು ಸಿದ್ಧಪಡಿಸಿಕೊಂಡು ಹೊರಡಲು ಅನುವಾದ. ನಾನು ಈಗಷ್ಟೇ ಸ್ಪೋಟ ಸಂಭವಿಸಿದೆ ಹೇಗೆ ಹೋಗುತ್ತೀಯ ಎ೦ದು ಕೇಳಿದ್ದಕ್ಕೆ ನಾನು ಹೇಗೋ ಹೋಗುತ್ತೀನಿ ನೀನು ಏನೂ ಚಿಂತೆ ಮಾಡಬೇಡ. ಒಂದೇ ಒಂದು ನಿಮಿಷ ನಿನ್ನ ಕಂಪ್ಯೂಟರ್ ಬಳಸಬೇಕು ಎಂದು ಕೇಳಿದ. ನಾನು ಆಗಲಿ ಎಂದು ಕೊಟ್ಟೆ. ಬಹುಶಃ ಅವನೇ ಕಳಿಸಿರಬಹುದು...ಹಾಗಿದ್ದರೆ ಈ ಎರಡು ತಿಂಗಳು ಒಬ್ಬ ಉಗ್ರವಾದಿ ನನ್ನ ಜೊತೆಯಲ್ಲಿ ಇದ್ದನೇ?
ಲೇ ನೀನು ಹೇಳಿದ್ದೆಲ್ಲ ನಿಜವೇ ಎಂದು ಅನುಮಾನಾಸ್ಪದವಾಗಿ ಕೇಳಿದ ಪೋಲಿಸ್ ಅಧಿಕಾರಿ. ಪವನನಿಗೆ ಈಗ ಎಲ್ಲ ಸ್ಪಷ್ಟವಾಗಿತ್ತು. ಹಾಗಾಗಿ ಅವನು ಧೈರ್ಯವಾಗಿಯೇ ಉತ್ತರಿಸಿದ. ಸರ್ ಇದರಲ್ಲಿ ಯಾವುದೇ ಅನುಮಾನವಿಲ್ಲ, ಬೇಕಾದರೆ ನಿಮ್ಮ ಎಲ್ಲ ತನಿಖೆ ಮುಗಿಯುವ ತನಕ ನಾನು ನಿಮಗೆ ಸಹಕಾರ ಕೊಡುತ್ತೇನೆ, ಅವನ ಬಗ್ಗೆ ನನಗೆ ತಿಳಿದಿರುವ ಎಲ್ಲ ಮಾಹಿತಿ ಕೊಡುತ್ತೇನೆ. ಮೊದಲು ಆ ದೇಶದ್ರೋಹಿಯನ್ನು ಬಂಧಿಸಿ ಸರ್.
ಈಗ ಆ ಪೋಲಿಸ್ ಅಧಿಕಾರಿಗೂ ಪವನ್ ಮಾತಿನ ಮೇಲೆ ಸ್ವಲ್ಪ ನಂಬಿಕೆ ಬಂದಿತು. ನೋಡಿ ಪವನ್ ನಾವು ನಿಮ್ಮನು ನಂಬುತ್ತೇವೆ. ಅವನ ಫೋಟೋ ಯಾವುದಾದರೂ ನಿಮ್ಮ ಬಳಿ ಇದೆಯಾ? ಅವನ ಮೊಬೈಲ್ ನಂಬರ್ ಬೇಡ ಬಿಡಿ ಅವನು ಖಂಡಿತ ಆ ನಂಬರ್ ಬಳಸುತ್ತಿರುವುದಿಲ್ಲ. ಮೊದಲು ಅವನ ಫೋಟೋ ಕೊಡಿ. ಪವನ ಸ್ವಲ್ಪ ಹೊತ್ತು ಯೋಚಿಸಿ ಸರ್ ನಮ್ಮ ಆಫೀಸಿನಲ್ಲಿ ನಡೆದ ಸಮಾರಂಭ ಒಂದರಲ್ಲಿ ತೆಗೆದ ಫೋಟೋ ಒಂದು ಇದೆ. ಅದು ನನ್ನ ಸಿಸ್ಟಂ ಅಲ್ಲಿ ಇದೆ. ಸರಿ ನಡಿ ಮೊದಲು ಹೋಗೋಣ ಎಂದು ಪವನನ ಮನೆಗೆ ಬಂದು ಅವನ ಸಿಸ್ಟಂ ನಿಂದ ಖಾನ್ ನ ಫೋಟೋ ತೆಗೆದು ಕೂಡಲೇ ಅದನ್ನು ಸ್ಕ್ಯಾನ್ ಮಾಡಿ ಎಲ್ಲ ಕಡೆ ಕಳುಹಿಸಲಾಯಿತು. ಎಲ್ಲ ಮಾಧ್ಯಮಗಳು ಫೋಟೋಗಳನ್ನು ಬಿತ್ತರಿಸಿ ಮಾಹಿತಿ ಸಿಕ್ಕಲ್ಲಿ ಕೂಡಲೇ ಸಂಪರ್ಕಿಸಬೇಕಾಗಿ ಕೋರಲಾಯಿತು.
ಫೋಟೋ ಬಿತ್ತರಿಸಿ ಎಂಟು ಗಂಟೆಗಳ ನಂತರ ಕಂಟ್ರೋಲ್ ರೂಂ ಗೆ ಒಂದು ಕರೆ ಬಂದಿತು. ಆ ಖಾನ್ ಎಂಬುವ ವ್ಯಕ್ತಿ ಮಂಗಳೂರಿನಲ್ಲಿ ಇದ್ದಾನೆಂದು ಮಾಹಿತಿ ಸಿಕ್ಕಿದೆಯೆಂದು ಮಂಗಳೂರಿನ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂಬ ಸುದ್ದಿತಿಳಿದು ಬಂದಿತು. ಮತ್ತೆರಡು ಗಂಟೆಗಳ ನಂತರ ಯಶಸ್ವಿ ಕಾರ್ಯಾಚರಣೆಯ ಮೂಲಕ ಖಾನ್ ನನ್ನು ಬಂಧಿಸಲಾಗಿದೆ ಎಂದು ಸುದ್ದಿ ಬಂದಿತು. ಪವನ್ ಸಂತಸದಲ್ಲಿ ಸರ್ ಈಗಲಾದರೂ ನಾನು ಮನೆಗೆ ಹೋಗಬಹುದ ಎಂದು ಕೇಳಿದ್ದಕ್ಕೆ ಆ ಪೋಲಿಸ್ ಅಧಿಕಾರಿ ಸಂತೋಷದಿಂದ ಪವನ್ ಹೆಗಲ ಮೇಲೆ ಕೈ ಹಾಕಿ ಒಬ್ಬ ಪೇದೆಯನ್ನು ಕರೆದು ಇವರನು ಮನೆಯ ಹತ್ತಿರ ಬಿಟ್ಟು ಬಾ ಎಂದರು. ಪವನ್ ಇನ್ನು ಮುಂದೆ ಯಾರಾದರೂ ಅಪರಿಚಿತರಿಗೆ ಆಶ್ರಯ ಕೊಡುವ ಮುನ್ನ ಅವರ ಪೂರ್ವಾಪರ ಎಲ್ಲ ತಿಳಿದುಕೊಂಡು ಆಮೇಲೆ ಮುಂದುವರೆಯಿರಿ. ಅಂತಹವರ ಚರ್ಯೆಗಳು ಅನುಮಾನ ಬಂದ ಕೂಡಲೇ ನೀವು ಪೋಲಿಸ್ ಬಳಿ ಬಂದರೆ ಇಷ್ಟೆಲ್ಲಾ ಅನಾಹುತಗಳೇ ಸಂಭವಿಸುವುದಿಲ್ಲ. ಇನ್ನು ಮುಂದಾದರೂ ಹುಷಾರಾಗಿರಿ ಎಂದು ಬೀಳ್ಕೊಟ್ಟ.
ಪವನ್ ಹೊರಡುವ ಮುನ್ನ, ಸರ್ ನಿಮ್ಮ ಬಳಿ ಒಂದು ವಿನಂತಿ. ಈಗಾಗಲೇ ಹಲವಾರು ಉಗ್ರರನ್ನು ಬಂಧಿಸಿದ್ದೀರ. ಆದರೆ ಅವರಿಗೆ ಕೂಡಲೇ ಶಿಕ್ಷೆ ಕೊಡುವಲ್ಲಿ ಮಾತ್ರ ವಿಫಲರಾಗುತ್ತಿದ್ದೀರ. ದಯವಿಟ್ಟು ಇನ್ನು ಮುಂದೆ ಅಮಾಯಕರ ಸಾವಿಗೆ ಕಾರಣರಾದ ಇಂಥಹ ಉಗ್ರರನ್ನು ಬಂಧಿಸಿದರೆ ಅವರಿಗೆ ಕೂಡಲೇ ಶಿಕ್ಷೆ ಆಗುವ ಹಾಗೆ ನೋಡಿಕೊಳ್ಳಿ ಸರ್ ಎಂದು ಅಲ್ಲಿಂದ ಹೊರಟ
Comments
ಉ: ಸ್ಫೋಟ (ಕಥೆ)
In reply to ಉ: ಸ್ಫೋಟ (ಕಥೆ) by kavinagaraj
ಉ: ಸ್ಫೋಟ (ಕಥೆ)
ಉ: ಸ್ಫೋಟ (ಕಥೆ)
In reply to ಉ: ಸ್ಫೋಟ (ಕಥೆ) by makara
nimma maatu nija shreedhar
nimma maatu nija shreedhar avare.
ಸಕಾಲಿಕ ಬರಹ ಚೆನ್ನಾಗಿದೆ.
ಸಕಾಲಿಕ ಬರಹ ಚೆನ್ನಾಗಿದೆ.
In reply to ಸಕಾಲಿಕ ಬರಹ ಚೆನ್ನಾಗಿದೆ. by kamalap09
+1
+1
In reply to +1 by gopaljsr
Vandanegalu gopal ji...
Vandanegalu gopal ji...
In reply to ಸಕಾಲಿಕ ಬರಹ ಚೆನ್ನಾಗಿದೆ. by kamalap09
vandanegalu kamala avare :)
vandanegalu kamala avare :)
ಇನ್ನೊಂದು ಸ್ಫೋಟ!
ನನಗನಿಸುತ್ತದೆ ಇದರಲ್ಲಿ ಹಿಂದೂ ಉಗ್ರವಾದಿಗಳ ಕೈವಾಡವೇ ಇರಬಹುದು. ಲಂಚತಿಂದ ಪೋಲೀಸರು, ಸರಿಯಾದ ತನಿಖೆ ನಡೆಸದೇ ಪವನ್‌ನ್ನು ಬಿಟ್ಟು, ಕೇವಲ ಜಾತಿಯ ಕಾರಣಕ್ಕೆ ಖಾನ್ ನನ್ನ ಬಂಧಿಸಿದ್ದಾರೆ. ಇದು ಖಂಡನೀಯ.:)
-ವಿಚಾರವಾದಿ.
ಕತೆ ಚೆನ್ನಾಗಿದೆ.
-ಗಣೇಶ
In reply to ಇನ್ನೊಂದು ಸ್ಫೋಟ! by ಗಣೇಶ
Ganeshanna idu
Ganeshanna idu buddhijeevigalu heluva maatu...neevooo aa saalige seriddeera? :)
dhanyavaadagalu.
In reply to Ganeshanna idu by Jayanth Ramachar
neevooo aa saalige seriddeera
neevooo aa saalige seriddeera? :) ಹಾಂ ಜಯಂತ್, ನಾನೂ ಬುದ್ಧಿಜೀವಿ, ವಿಚಾರವಾದಿ, ಹಾಗೇ ಮುಠ್ಠಾಳವಾದಿ(ಹೊಸಪಂಗಡ- ಒಂದು ವಾಕ್ಯದಲ್ಲಿ ಕೊನೇ ಪಕ್ಷ ಒಂದು ಬಾರಿಯಾದರೂ "ಮುಠ್ಠಾಳ" ಪದ ಉಪಯೋಗಿಸುವವರನ್ನು ಮಾತ್ರ ಈ ಪಂಗಡಕ್ಕೆ ಸೇರಿಸಲಾಗುವುದು) :)
-ಗಣೇಶ.
In reply to neevooo aa saalige seriddeera by ಗಣೇಶ
ಗಣೇಶಣ್ಣ ಹೋಸ ಪ0ಗಡದ ಹೇಸರೂ
ಗಣೇಶಣ್ಣ ಹೋಸ ಪ0ಗಡದ ಹೇಸರೂ ಚೇನ್ನಾಗೀದೇ. yaako hosa sampadadalli kannadadalli pratikriye bareyuvudu bahala traasaaguttide. idara bagge yaaraadaroo sahaaya maadidare olleyadu.
ಚೆನ್ನಾಗಿದೆ ಕಥೆ ಜಯಂತ್
ಚೆನ್ನಾಗಿದೆ ಕಥೆ ಜಯಂತ್
In reply to ಚೆನ್ನಾಗಿದೆ ಕಥೆ ಜಯಂತ್ by Chikku123
ಧನ್ಯವಾದಗಳು ಚಿಕ್ಕು
ಧನ್ಯವಾದಗಳು ಚಿಕ್ಕು