ಸ್ಯಾಂಕೀ ರಸ್ತೆ (ಸ್ಯಾಂಕಿ ಕೆರೆಯ ಬಳಿ)
ಬೆಂಗಳೂರಿನ ಯಾವುದೇ ಬೀದಿ ಮುಂಜಾನೆಯಿಂದಲೇ ಬಿಝಿ. ಆದರೆ ಈ ಬೀದಿಯ ಚಿತ್ರಗಳನ್ನು ನೋಡಿ- ಸಂಜೆಯ ೩-೩೦ ಹೊತ್ತಿಗೆ ಬಂದ್ ದಿನದಂತೆ ಖಾಲಿ ಖಾಲಿ..
ಕೆಂಪು ಸಿಗ್ನಲ್‌ನಿಂದಾಗಿ ವಾಹನ ಸಂಚಾರ ನಿಂತಿರಬಹುದು ಅನ್ನುವಂತಿಲ್ಲ. ನಾನು ನನ್ನ ಬೈಕನ್ನು ಪಾರ್ಕ್ ಮಾಡಿ, ಜರ್ಕಿನ್( ಮಳೆ ಬರುತ್ತದೆಂದು ಹಾಕಿದ್ದೆ- ನೋಡಿದರೆ ತುಂಬಾ ಸೆಖೆ ಇತ್ತು) ತೆಗೆದು, ರಸ್ತೆಯ ಈ ಬದಿಯ ಕೆರೆಯನ್ನೂ, ಆಬದಿಗೆ ಹೋಗಿ ಮರಗಳನ್ನೂ ನೋಡಿ ಬರುವವರೆಗೂ ಕೆಂಪು ಸಿಗ್ನಲ್ ಇರಲಾರದು ಅಲ್ಲವೇ?
ಈ ಸ್ಯಾಂಕಿ ರಸ್ತೆಯನ್ನು( http://www.mycitybuddy.com/map.do?l=area&id=379 ) ಇನ್ನಷ್ಟು ಅಗಲ ಮಾಡುವ ಅಗತ್ಯ ಇದೆಯಾ?
Rating