ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್

ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್

'ಹಾಯ್,ಹಲೋ..ನಾನು ನಿಮ್ಮೆಲ್ಲರ ಅಚ್ಚುಮೆಚ್ಚಿನ ಹಾರ್ ಭಜನ್.ಕಮೆಂಟರಿ ಬಾಕ್ಸ್ ನಲ್ಲಿ ನನ್ನ ಬಲ ಪಕ್ಕದಲ್ಲಿ ಗೋಡೆ,(ಕೇತುಲ್ ಕೈಯೆತ್ತಿ ನಮಸ್ಕರಿಸುವರು)ಎಡಕ್ಕೆ ಮಲ್ಲಿ ಕಾ ಸೀರೆಬಿತ್ತು...ಹಾಯ್ ಮಲ್ಲಿ ಈ ದಿನ ಬಹಳ ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ..'(ಮಲ್ಲಿ ಊರಗಲ ನಕ್ಕು ಸೀರೆ ಸರಿಮಾಡಿಕೊಳ್ಳುವಳು)
..................ಜಾಹೀರಾತು.
ಕೇತುಲ್, ಬಾಜಿಯನ್ನು"ಈಗ ಕ್ರಿಕೆಟ್ ಬಗ್ಗೆ ಮಾತನಾಡೋಣ"ಎಂದು ಎಚ್ಚರಿಸಿದಾಗ, 'ಯಾ..ಯಾ.. ಈ ದಿನ ಸ್ಲೆಡ್ಜಿಂಗ್ ಕಪ್ ಫೈನಲ್,ಇಂಡಿಯಾ-ಆಸ್ಟ್ರೇಲಿಯಾದ ನಡುವೆ.ಮ್ಯಾಚ್ ಸ್ಟಾರ್ಟ್ ಆಗಲು ಇನ್ನೇನು ೨೦ ನಿಮಿಷ ಬಾಕಿ ಇದೆ.ಬಾಕಿ ಜಾಹೀರಾತಿನ ನಂತರ.
..................ಜಾಹಿರಾತು.
'ನಮಸ್ತೆ, ಈ ಸ್ಲೆಡ್ಜಿಂಗ್ ಕಪ್ ಬಗ್ಗೆ ಕೇತುಲ್ ತಮ್ಮ ಅಭಿಪ್ರಾಯ...'
"ನಾನು ಕ್ರಿಕೆಟ್ ಗೆ ಬಂದ ಈ ೨೦ ವರ್ಷದಲ್ಲಿ ಕ್ರಿಕೆಟ್ ನಲ್ಲಿ ಬಹಳಷ್ಟು ಬದಲಾವಣೆಯಾಗಿದೆ.ಕ್ರಿಕೆಟ್ fast..faster..fast test..ಆಗಿದೆ.
...........ಈಗ ಜಾಹಿರಾತಿನ ನಂತರ ಮುಂದುವರಿಸುವೆವು.
ಟೆಸ್ಟ್ ನಿಂದ ಒನ್ ಡೇ,ನಂತರ ೨೦-೨೦.,ಮತ್ತೆ ಮುಂದುವರಿಸುವೆ.ಈಗ ಇಬ್ಬರು ಕ್ಯಾಪ್ಟನ್ ಗಳು ಟಾಸ್ ಗೆ ಸ್ಲೆಡ್ಜಿಂಗ್ ಮಾಡುತ್ತಾವಿಕೆಟ್ ಬಳಿ ಹೋಗುತ್ತಿದ್ದಾರೆ. '॒॑॑%॒॑'ಕ್ಯಾಪ್ಟನ್ ಹಡಗು ಹೇಳಿದ ಸ್ಲೆಡ್ಜಿಂಗ್ ಸೂಪರ್,ನನಗನಿಸುತ್ತಿದೆ ಟಾಸ್ ಗೆದ್ದರೂ,ಸೋತರೂ ಈ ಪಿಚ್ ಬೈಯಿಂಗ್ ಪಿಚ್ ಆದುದರಿಂದ ಇಂಡಿಯಾನೇ ಗೆಲ್ಲುವುದು.
............ಜಾಹೀರಾತು
'ನಾನೆಲ್ಲಿದ್ದೆ?'
"ಮಲ್ಲಿಯ.."
'ಶ್..ಶ್..ಒನ್ ಡೇ ನಂತರ ೨೦-೨೦,ಈಗ ಸ್ಲೆಡ್ಜಿಂಗ್ ಮ್ಯಾಚ್ ಗಳು.ಹಿಂದೆ ಟೆಸ್ಟ್ ಮ್ಯಾಚ್ ನೋಡುತ್ತಿರುವಾಗ ಟಿ.ವಿ.ರಿಲೇಯಲ್ಲಿ ಆಟಗಾರರು ಮಾತನಾಡುತ್ತಿದ್ದರೋ,ಆಕಳಿಸುತ್ತಿದ್ದರೋ ಗೊತ್ತೇ ಆಗುತ್ತಿರಲಿಲ್ಲ,ಮಲ್ಲಿ'."ಹೀಈಈಈಹಿ ಹಿ ಹಿ ಹಿ"ಮಲ್ಲಿ ನಗು ಇತ್ಯಾದಿ. ಈಗ ಸ್ಲೆಡ್ಜಿಂಗ್ ಮ್ಯಾಚ್ ೫-೫ ಓವರಿನದ್ದು,೧/೨ ಗಂಟೆ ಟಿ.ವಿ ಸೀರಿಯಲ್ ಟೈಮಲ್ಲಿ ಮುಗಿಯುತ್ತಿದೆ.
.............ಜಾಹಿರಾತು
'ಪ್ರತೀ ಪ್ಲೇಯರ್ ಗೂ ಮೈಕ್ ಸಿಕ್ಕಿಸಿರುವುದು ಭಾರೀ ಉತ್ತಮ ಬೆಳವಣಿಗೆ.ಈಗ ಇಂಡಿಯಾದ ಗೋತಮ್ಮಾ ಬ್ಯಾಟಿಂಗ್ ಗೆ ಹೋಗಿದ್ದಾರೆ.ಇಲೀ ಬೌಲಿಂಗ್..॒॒॑॑****॑॑ ವಾಹ್,ವಾಹ್, ಮಲ್ಲಿ ಕಿವಿ ಮುಚ್ಚಿಕೋ..'
...........ಜಾಹೀರಾತು.
'ಅಂದಹಾಗೆ ಬಾಜಿ,ಸಾಚಿನ್ನು ಇನ್ನೂ ಟೀಮಲ್ಲಿ ಇದ್ದಾನೆ.ತಮ್ಮನ್ನು ಬಿಟ್ಟಿರುವುದು ನನಗೆ ಸರಿಕಾಣಲಿಲ್ಲ.'
"ಅದಾ..ನನ್ನ ಸ್ಲೆಡ್ಜಿಂಗ್ ನಲ್ಲಿ ಪಂಚ್ ಇಲ್ಲವಂತೆ.ನಾನು ಬೈದರೂ ಸರ್ದಾರ್ಜೀ ಜೋಕ್ ತರಹ ಕೇಳಿಸಿ ಆಸ್ಸಿಯವರು ನಗಲು ಸುರುಮಾಡುವರು.ಅದಕ್ಕೆ ನನ್ನನ್ನು ೩ ಮ್ಯಾಚ್ ಗೆ ಟೀಮಿಂದ ಹೊರಹಾಕಿರುವರು."
..............ಜಾಹಿರಾತು
'॒॒॒॒॒॒॒॒॒॒॑॑॑॑॑*****'"ಸೂಪರ್ ಊಟಪ್ಪಾ.ಆಸ್ಸಿ ವಿಕೆಟ್ ಕೀಪರ್ ಕಿವಿ ಮುಚ್ಚಿಕೊಂಡು ಓಡಿ ಹೋದ.
..............ಜಾಹಿರಾತು.
ಗೆಲ್ಲಲು ಇನ್ನು ಐದೇ ಬೈಗಳು ಬಾಕಿ .ಶ್ರೀಶಾಂತ್ ಈಗ ಬ್ಯಾಟಿಂಗ್'॒॒॒॒॒*****॑॑॑'ಬೌಲರ್ ಕಸೈಮಂಡ್ಸ್ ಓಡಿದ ******॒॒॑॑॑॑॑॑॑॑॑ ಓಡಿದ ವಿಕೆಟ್ ಕಡೆಗಲ್ಲಾ..ಪೆವಿಲಿಯನ್ ಕಡೆಗೆ...ಇಂಡಿಯಾ ವಿನ್ ..ಚಕ್ ದೇ ಇಂಡಿಯಾ..ಕ್ಯಾಷ್ ಬೀ ಒ.ಕೆ.
..............ಜಾಹಿರಾತು
..............ಜಾಹೀರಾತು
..............ಜಾ.......

Rating
No votes yet

Comments