ಸ್ವಗತ

ಸ್ವಗತ

ರಾಮ ಕೃಷ್ಣರು ಬೋಧಿಸಿದರು ನಿತ್ಯ
ಧರ್ಮ ನ್ಯಾಯ ನೀತಿ ಕರ್ಮ ಗೀತೆ
ಬುದ್ಧ ಉಪದೇಶಿಸಿದ ಅಹಿಂಸೆ ಸತ್ಯ
ಗಾಂಧೀಜಿಯವರದು ಸತ್ಯಾಗ್ರಹ ಸಂಹಿತೆ

ಬಸವಣ್ಣ ಅಲ್ಲಮ ಅಕ್ಕ ಶರಣರು
ಕಾಯಕದ ಮಂತ್ರ ಜಪಿಸಿದರು
ಹರಿದಾಸ ಪುರಂಧರ ಕನಕರು
ಭಕ್ತಿ ಮಾರ್ಗದಿ ಮುನ್ನಡೆದರು

ಮನುಕುಲ ಮುನ್ನಡೆದಿದೆ ಅದೇ ಹಾದಿಯಲಿ
ಕಲಿಯಲಿಲ್ಲ ಏನೂ ರಕ್ತ ಸಿಕ್ತ ಇತಿಹಾಸದಲಿ
ಕೇಳಿದವರೆಷ್ಟು ಬಿಟ್ಟವರಿನ್ನೆಷ್ಟು
ಮತ್ತದೇ ನೋವು ಮತ್ತದೇ ಪಯಣ

ನಾನಲ್ಲ ಇವರಿಗಿಂತ ಮಿಗಿಲಾದ ಸರ್ವಜ್ಞೆ
ನನಗಿಲ್ಲ ಸುಪ್ತವಾಗಿ ಹುದುಗಿರುವ ಪ್ರಜ್ಞೆ
ದಿನ ನಿತ್ಯ ಜೀವನದಿ ಹೆಣಗಾಡುತ್ತಿರುತ್ತೇನೆ
ಏನೋ ಒಂದಿಷ್ಟು ಗೊಣಗಾಡುತ್ತಿರುತ್ತೇನೆ
ಇದೇ ನನ್ನ ಸ್ವಗತ .....!

Rating
No votes yet

Comments