ಸ್ವಗತ
1:52 PM ಸ್ವಗತ: ಕಸದಲ್ಲಿ ಬಿದ್ದಿರೋ ಪ್ಲಾಸ್ಟಿಕ್ ನಂತೆ ಎನೂ ಮಾಡ್ಲಾಗದೆ ಕೊಳೆಯದೆ... ಕರಗದೆ ಜಡವಾಗಿ ಬಿಟ್ಟಿದ್ದೀನಿ..
1:53 PM ನನಗೆ ನಾನು ಸಮಾಧಾನ ಪಡಿಸಿಕೊಳ್ಲೋದಿಕ್ಕೆ ಮತ್ತು ಉತ್ತಮವಾಗೋದಿಕ್ಕೆ.. ಈ ಎರೆಡು ವರ್ಷದಿಂದ ಸಾಕಷ್ಟು ಪ್ರಯತ್ನ ಮಾಡ್ತಾ ಇದೀನಿ.. ಆದರೂ ಸೋಲ್ತಾ ಇದೀನಿ..
ಅದರ ಅರ್ಥ ಇಷ್ಟೇ ನಾನು ದಡ್ದ... ನನ್ಗೇನೂ ಗೊತ್ತಿಲ್ಲ..
ಜಗತ್ತಿನಲ್ಲಿರೋ ಅತ್ಯಂತ ವೇಸ್ಟ್ ವಸ್ತುಗಳಲ್ಲಿ ನಾನು ಒಬ್ಬ..
ಭೂಮಿಗೆ ಭಾರ..
1:54 PM .. ಹೀಗೆಲ್ಲ ಕುಡಿದಾಗ ಮಾತ್ರವಲ್ಲ ನಾರ್ಮಲ್ ಆಗಿ ಇದ್ದಾಗಲೂ ಅನ್ಸುತ್ತೆ...
ಆದರೆ ಇದ್ಯಾವುದು ಸತ್ಯವಲ್ಲ.. ಅನ್ನೋದು ನನಗೆ ಗೊತ್ತು..
ಇದು ಅಮಲಿನಲ್ಲಿದ್ದಾಗಲೂ ಗೊತ್ತು..
ನಾರ್ಮಲ್ ಆಗಿ ಇದ್ದಾಗಲೂ ಗೊತ್ತು....
1:56 PM ಸತ್ಯ ಬಹುಶಃ ಅದು ನನ್ನ ಮಟ್ಟಿಗೆ ಅಂತ ಯಾರು ಏನಂದುಕೊಂಡರು ನನಗೆ ಚಿಂತೆ ಯಿಲ್ಲ..
ಯಾಕಂದರೆ ನನ್ನನ್ನು ನನ್ನಷ್ಟು ಆಳವಾಗಿ ಬಲ್ಲವರು ಯಾರು ಇಲ್ಲ ಅನ್ನೋ ಕಾರಣಕ್ಕೆ..
1:57 PM ನನ್ನ ಚಿಂತನೆಗಳು ಯೋಚನೆಗಳು ಆಲೋಚನೆಗಳು... ಆಸಕ್ತಿಯ ವಿಶಯಗಳು.. ನನ್ನ ಪ್ರತಿಭೆ ಹೆಸರು.. ಎಲ್ಲಾ ಹುಟ್ಟಿನಿಂದ ಬಂದದ್ದಲ್ಲ..
1:58 PM ಎಲ್ಲಾ ನನ್ನ ಯೋಚನೆ ಚಿಂತನೆ ಆಸಕ್ತಿ ಶ್ರಮದ ಫಲ...
ಸೊ..
ನನಗೆ ಅದೃಷ್ಟಕ್ಕಿಂತ ನನ್ನ ಅನುಭವದ ಮೇಲೆ ನಂಬಿಕೆ ಜಾಸ್ತಿ.. ಇದನ್ನು ಯಾರು ಒಪ್ಪಲಿ ಬಿಡಲಿ..
1:59 PM ಆ ಅನುಭವ ಹೇಳಿಕೊಟ್ಟಿರೋ ಪಾಠಗಳನ್ನ ಯಾವುದೇ ಕಾರಣಕ್ಕು ಬದಲಾಯಿಸಿಕೊಳ್ಳಲು ಸಾದ್ಯವಿಲ್ಲ..
2:00 PM ಅಕಸ್ಮಾತ್ ಬದಲಾಯಿಸಿಕೊಳ್ಲಬೇಕೆಂದರೆ ಆ ಅನುಭವಗಳನ್ನು ಮೀರಿದ ಅನುಭವಗಳು ಆದಾಗ ಮಾತ್ರ ಬದಲಾಯಿಸಿಕೊಳ್ತೀನಿ..
2:02 PM ಆದರೆ ನನ್ನ ಮನಸ್ಸಾಕ್ಷಿ ಮತ್ತು ನನ್ನ ಮನಸ್ಸಿನ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ... ತ್ರುಶ.. ಪ್ಲೀಸ್ ನನಗೆ ಹುಡುಗಿಯರ ತೆವಲು... ಆಸಕ್ತಿ ಹುಚ್ಚು ಇಲ್ಲ..
ನನ್ನನ್ನು ನಂಬಿದರೆ ನಂಬಿ ಬಿಟ್ಟರೆ ಬಿಡಿ..
2:03 PM ನನಗೆ ಹುಡುಗಿ ಅಂದರೆ ನನ್ನಂತೆ ನಿಮ್ಮಂತೆ ಒಬ್ಬ ಜೀವಿ ಅಷ್ಟೆ ಹೊರತು ಬೇರೇನೂ ಇಲ್ಲಾ..
ಅವರ ಬಗ್ಗೆ ಸಹಜ ಕುತೂಹಲವೇ ಹೊರತು ಬೇರಾವ ಉದ್ದೇಶವೂ ಇಲ್ಲ...
2:05 PM ಇವತ್ತಿನ ನನ್ನ ನಿಮ್ಮೊಂದಿಗೆ ವಾದ.. ಅದು ಸುವರ್ಣ ಅಂತಲ್ಲ.. ಅದು ಯಾರೇ ಆಗಲಿ ಅವರ ಬಗ್ಗೆ ಸಾಕಷ್ಟು ಅರಿವು ಮಾಡಿಕೊಳ್ಲದೆ ಅವರು ಇದಿಷ್ಟೇ.. ಅವರ ಮಿತಿ ಇಷ್ಟೇ ಅಂತ ಹೇಳುವುದು ಸರಿಯಲ್ಲ ಅಂತಷ್ಟೇ ಹೇಳ ಹೊರಟಿದ್ದು.. ಅದು ಸುವರ್ಣ ಆಗಬಹುದು.. ಇನ್ನ್ಯಾರೋ ಹುಡುಗಿ ಆಗಬಹುದು.. ಹುಡುಗ ಆಗಬಹುದು.. ಯಾರು ಅದರಿಂದ ಹೊರತಲ್ಲ..
2:07 PM ಯಾವುದೇ ಪ್ರತಿಭೆ ಪ್ರೌಡಿಮೆ... ಶಕ್ತಿ ಹೊರಗೆ ಬರುವುದು ಅದನ್ನ ಅವರು ಆಸಕ್ತಿಯ ವಿಶಯವನ್ನಾಗಿಸಿಕೊಂಡು ಅದರ ಬೆಳವಣಿಗೆ ಗೆ ಬಳಸಿಕೊಂಡಾಗ ಮಾತ್ರ ಅಂತ ಹೇಳುವುದಷ್ಟೇ ನನ್ನ ಉದ್ದೇಶ..
2:10 PM ಹೇಳ್ತಾ ಹೋದ್ರೆ.. ನನ್ನಲ್ಲಿರುವ ಎಷ್ಟೋ ಮಣ್ಣುಮಾಡಿರುವ ವಿಶಯಗಳು ಹೊರಗೆ ಬರ್ತಾನೆ ಇರುತ್ತೆ..
2:13 PM ಆ ಕಾರಣಕ್ಕಾಗಿಯೇ ನನ್ನೆಲ್ಲಾ ನೋವುಗಳನ್ನು ನನ್ನಲ್ಲಿ ಮಣ್ಣು ಮಾಡಲು ಒಂದು ಕ್ವಾಟರ್ ರಮ್ ತಂದು ಕುಡೀತಾ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೀನಿ... ಪ್ಲೀಸ್ ಇದೆಕ್ಕೆ ಬೇಜಾರು ಮಾಡಿಕೊಂಡರೆ ನನಗೇನೂ ಅಭ್ಯಂತರವಿಲ್ಲ... ನನ್ನಿಂದ ನಿಮಗೆ ನೋವಾಗಿದ್ದರೆ ಅದಕ್ಕೆ ನಾನು ಯಾವ ಶಿಕ್ಷೆ ಬೇಕಾದರು ಅನುಭವಿಸಲು ಖಂಡಿತ ಸಿದ್ದನಿಲ್ಲ...
2:14 PM
ನನ್ನಿಂದ ತಪ್ಪಾಗಿದ್ದರೆ ದಯವಿಟ್ಟು ಸಾಧ್ಯವಾದರೆ ನನ್ನನ್ನು ಕ್ಷಮಿಸಿ ಬಿಡಿ..
ನಾನು ಇಷ್ಟೆಲ್ಲ ಮಾತಾಡಿ ನಿಮಗೆ ಕಾಲ್ , ಮೆಸೇಜ್ ಮಾಡೋದಿಕ್ಕೆ ಇಷ್ಟ ಇಲ್ಲ.
ನನ್ನ ಮೊಬೈಲ್ ಬೆಳಗ್ಗೆ ಆನ್ ಆಗುತ್ತೆ..ನಿಮ್ಮ ಕಾಲ್ ಗಾಗಿ ಇನ್ಯಾವತ್ತಿಗೂ ಕಾಯದ...?????
ಟೇಕ್ ಕೇರ್ ಬೈ..
Rating
Comments
ಉ: ಸ್ವಗತ
ಉ: ಸ್ವಗತ
In reply to ಉ: ಸ್ವಗತ by asuhegde
ಉ: ಸ್ವಗತ
ಉ: ಸ್ವಗತ (ಹೀಗೆ ಮಾಡಿದರೆ ಹೇಗೆ?) :-)
In reply to ಉ: ಸ್ವಗತ (ಹೀಗೆ ಮಾಡಿದರೆ ಹೇಗೆ?) :-) by inchara123
ಉ: ಸ್ವಗತ (ಹೀಗೆ ಮಾಡಿದರೆ ಹೇಗೆ?) :-)
In reply to ಉ: ಸ್ವಗತ (ಹೀಗೆ ಮಾಡಿದರೆ ಹೇಗೆ?) :-) by manjunath s reddy
ಉ: ಸ್ವಗತ (ಹೀಗೆ ಮಾಡಿದರೆ ಹೇಗೆ?) :-)
ಉ: ಸ್ವಗತ
In reply to ಉ: ಸ್ವಗತ by manju787
ಉ: ಸ್ವಗತ
In reply to ಉ: ಸ್ವಗತ by inchara123
ಉ: ಸ್ವಗತ
In reply to ಉ: ಸ್ವಗತ by manjunath s reddy
ಉ: ಸ್ವಗತ
In reply to ಉ: ಸ್ವಗತ by manju787
ಉ: ಸ್ವಗತ
ಉ: ಸ್ವಗತ