ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952)
ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು ( ಮೊದಲ ಚುನಾವಣೆ 1952)
1947 ಅಗಸ್ಟ್ 15 ರ ೦೦:೦೦ ಗಂಟೆ
1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ್ಕಿಕವಾಗಿ ಅಂತ್ಯಗೊಂಡಿತ್ತು. ದೆಹಲಿಯಲ್ಲಿ ಹಾರುತ್ತಿದ್ದ ಬ್ರೀಟಿಷರ ಯೂನಿಯನ್ ಜಾಕ್ ಎನ್ನುವ ದ್ವಜ, ಬ್ರೀಟಿಷರ ವ್ಯಾಪಾರಿಗಳು ಭಾರತಕ್ಕೆ ತಂದು ಇಲ್ಲಿ ೧೫೦ ವರ್ಷಕ್ಕು ಅಧಿಕ ಹಾರಾಡಿದ ದ್ವಜ ನಿಧಾನವಾಗಿ ಕೆಳಗಿಳಿಯಿತು. ಭಾರತದ ತ್ರಿವರ್ಣ ದ್ವಜ ಮೇಲೇರಿತು.
ಎಲ್ಲ ಕಡೆಯೂ ಉತ್ಸಾಹ ಮೇರೆ ಮೀರಿತ್ತು. ದೇಶಭಕ್ತಿಯ ಗೀತೆಗಳು ಮಾತುಗಳು ಮೊಳಗುತ್ತಿದ್ದವು. ಎಲ್ಲಡೆ ಸಿಹಿ ಹಂಚಲಾಯಿತು. ಆದರೆ ಮೈಮರೆತು ಕುಳಿತುಕೊಳ್ಳುವಂತಿರಲಿಲ್ಲ.
ಬ್ರೀಟಿಷರು ಬರಿ ಸ್ವಾತಂತ್ರವನ್ನು ನಮಗೆ ಕೊಟ್ಟು ಹೋಗುತ್ತಿರಲಿಲ್ಲ. ಅದರೊಂದಿಗೆ ಸಾವಿರ ಸಾವಿರ ಸಮಸ್ಯೆಗಳನ್ನು ನಮ್ಮೊಂದಿಗೆ ಬಿಟ್ಟು ಹೋಗುತ್ತಿದ್ದರು. ಅದಕ್ಕೆಲ್ಲ ಎದೆಗೊಟ್ಟು ನಿಲ್ಲುವ ನಾಯಕರು ಬೇಕಾಗಿತ್ತು. ಜನರ ನಡುವೆ ಬೆರೆತು ಸಮಸ್ಯೆಗಳನ್ನು ಪರಿಹರಿಸುವ ನಾಯಕರು ಬೇಕಾಗಿತ್ತು. ನಮಗೆ ನಮ್ಮದೆ ಆದ ಒಂದು ಆಡಳಿತ ಬೇಕಾಗಿತ್ತು, ನಮಗೆ ನಮ್ಮದೆ ಆದ ಒಂದು ಸಂವಿದಾನ ಬೇಕಾಗಿತ್ತು. ಸುತ್ತಲೂ ಇರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಮಿಲಿಟರಿ ಕಟ್ಟಬೇಕಿತ್ತು. ಒಳಗಿನ ಶತ್ರುಗಳನ್ನು ಎದುರಿಸಬೇಕಾಗಿತ್ತು.
ಮೊದಲಿಗೆ ಭಾರತಕ್ಕೆ ತನ್ನದೆ ಆದ ಬೌಗೋಳಿಕ ರೂಪವೇ ಇರಲಿಲ್ಲ.
ಲಾರ್ಡ್ ಮೌಂಟ್ ಬ್ಯಾಟನ್ನರೆ ಗೌರನರ್ ಆಗಿ ಮುಂದುವರೆದರು
ಸ್ವತಂತ್ರ ಬಂದ ಹೊಸಿಲಲ್ಲೆ , 30-ಜನವರಿ- 1948 , ಭಾರತ ಮಹಾತ್ಮ ಗಾಂಧೀಜಿಯವರನ್ನು ಕಳೆದುಕೊಂಡಿತು. ಅವರು ಪ್ರಾರ್ಥನೆಗೆ ತೆರಳುವಾಗ ಕೊಲೆಯಾದರು.
ಭಾರತ ಪಾಕಿಸ್ತಾನದ ನಡುವೆ ಸುಮಾರು ಒಂದು ಕೋಟಿಗೂ ಅಧಿಕ ಜನರ ದೇಶಾಂತರ ಪ್ರಾರಂಭವಾಗಿತ್ತು, ಮತೀಯ ಗಲಬೆಗಳು ಪ್ರಾರಂಬವಾಗಿ ಹಲವು ಲಕ್ಷ ಜನರು ಪ್ರಾಣ ಕಳೆದುಕೊಂಡರು. ಪಂಜಾಬ್ ಪ್ರಾಂತ್ಯ ನಲುಗಿತು. ರಸ್ತೆ ರಸ್ತೆಯಲ್ಲಿ ರೈಲುಗಳಲ್ಲಿ ಹೆಣ ಬಿದ್ದವು.
ಎಲ್ಲ ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತದ ಗಣತಂತ್ರ ರಚಿಸುವ ಕೆಲಸ ಪಟೇಲರು ಪ್ರಾರಂಬಿಸಿದಂತೆ ಕಾಶ್ಮೀರ ಸಮಸ್ಯೆ ಎರಗಿತು. ನಮ್ಮ ದೇಶದಿಂದಲೇ ವಿಭಜನೆಗೊಂಡು ಪ್ರತ್ಯೇಕಗೊಂಡ ಪಾಕಿಸ್ತಾನ ಭಾರತದ ಮೇಲೆ ಯುದ್ದಕ್ಕೆ ಎರಗಿತು.
26 ಜನವರಿ 1950 ರಂದು ಭಾರತ ಗಣರಾಜ್ಯವಾಗಿ ಘೋಶಿಸಲ್ಪಟ್ಟಿತ್ತು. ನೆಹರು ಪ್ರಧಾನಿಯಾಗಿ ನೇಮಿಸಲ್ಪಟ್ಟರು. ಸರ್ಧಾರ್ ವಲ್ಲಭಾಯಿ ಪಟೇಲರು ಗೃಹಖಾತೆ ತೆಗೆದುಕೊಂಡರು. 25 ಜನವರಿಯಲ್ಲಿ 1950 ಭಾರತದ ಎಲೆಕ್ಷನ್ ಕಮೀಷನ್ ನೇಮಕವಾಯಿತು. ರಾಜೇಂದ್ರಪ್ರಸಾದರು ಭಾರತ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಹಿನ್ನಲೆಯೊಂದಿಗೆ ಭಾರತದ ಪ್ರಥಮ ಲೋಕಸಭೆಗೆ ಚುನಾವಣೆ ನಡೆಯಿತು. ದೀರ್ಘಕಾಲ ತೆಗೆದುಕೊಂಡ ಚುನಾವಣ ಪ್ರಕ್ರಿಯೆ 25 ಅಕ್ಟೋಬರ್ 1950 ರಿಂದ 21 ಫೆಬ್ರುವರಿ 1952 ರವರೆಗೂ ನಡೆಯಿತು. ಪ್ರಥಮ ಚುನಾವಣೆಯಲ್ಲಿ ಇಂಡಿಯನ್ ನಾಶನಲ್ ಕಾಂಗ್ರೆಸ್ ನೆಹರೂರವರ ನಾಯಕತ್ವದೊಂದಿಗೆ ಜಯ ಸಾಧಿಸಿತ್ತು. ಒಟ್ಟು 489 ಸೀಟುಗಳಲ್ಲಿ, ಕಾಂಗ್ರೆಸ್ 364 ಸೀಟುಗಳಲ್ಲಿ ಗೆಲುವು ಸಾಧಿಸಿ ಒಟ್ಟು ಮತದಲ್ಲಿ 45% ಮತಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿತ್ತು.
ಎರಡನೇ ಸ್ಥಾನ ಸ್ವತಂತ್ರ ಅಭ್ಯರ್ಥಿಗಳು ಆಗಿದ್ದರು !!
ಒಟ್ಟು 37 ಸ್ವತಂತ್ರ್ಯ ಅಭ್ಯರ್ಥಿಗಳು ಜಯ ಸಾಧಿಸಿದ್ದರು,
ಉಳಿದಂತೆ ಸಿಪಿಐ ಮತ್ತು ಸೋಶಿಯಲಿಸ್ಟ್ ಪಾರ್ಟಿಗಳು ಮತ್ರ ಎರಡಂಕೆಯಷ್ಟು ಸೀಟಿಗಳನ್ನು ಗೆಲ್ಲಲು ಸಾದ್ಯವಾಗಿತ್ತು.
ಸೋತವರಲ್ಲಿ ಅತ್ಯಂತ ಪ್ರಮುಖರು ಡಾ! ಅಂಬೇಡ್ಕರ್ ಮುಂಬಯಿಯಿಂದ ನಿಂತು ಪರಾಭವ ಹೊಂದಿದ್ದರು.
ಎಪ್ಪತ್ತಕ್ಕೂ ಅಧಿಕ ಪಕ್ಷಗಳಿಂದ 1830 ರಷ್ಟು ಅಭ್ಯರ್ಥಿಗಳು ಭಾಗವಹಿಸಿ ಮುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು,
ನಿರೀಕ್ಷೆಯಂತೆ ನೆಹರು ಪ್ರಧಾನಿಯಾದರು.
ಮೊದಲ ಲೋಕಸಭೆಯ ಸ್ಪೀಕರ್ ಆಗಿ G V ಮಾವಲಂಕರ್ ಆಯ್ಕೆಯಾದರು. ದೀರ್ಘಕಾಲ ನಡೆದ ಮೊದಲ ಪಾರ್ಲಿಮೆಂಟ್ 17-ಏಪ್ರಿಲ್-1952 ರಿಂದ 4-ಏಪ್ರಿಲ್-1957 ರವರೆಗೂ ನಡೆಯಿತು
Reference:
http://en.wikipedia.org/wiki/Indian_general_election,_1951
http://en.wikipedia.org/wiki/Assassination_of_Mahatma_Gandhi
ಚಿತ್ರಗಳು :
https://fbcdn-sphotos-c-a.akamaihd.net/hphotos-ak-prn1/t1.0-9/s851x315/1...
http://1.bp.blogspot.com/-o3IJYzWljy8/UzwRqUdGDDI/AAAAAAAAFIg/u3EJ5ch6rX...
http://3.bp.blogspot.com/-mfLJItSbS9w/UzwRq1sQyjI/AAAAAAAAFIw/3scZ-x20pv...
http://1.bp.blogspot.com/-zR_eOOhZ-z8/UzwRqSV5epI/AAAAAAAAFIk/PHd-S-foG8...
Comments
ಉ: ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952)
ಸ್ವಾತಂತ್ರ ಬಂದ ನಂತರ ಲಾರ್ಡ್ ಮೌಂಟನ್ ಗೌರನರ್ ಜನರಲ್ ಆದರು 21 jun 1948 ವರೆಗೂ ಅವರೇ ಇದ್ದರು
21 jun ನಂತರ ರಾಜಗೋಪಾಲಚಾರಿರವರು ಗೌರನರ್ ಜನರಲ್ ಆದರು 26 ಜನವರಿ 1950 ರವ ವರೆಗೂ ಅವರು ಇದ್ದರು
List_of_Governors-General_of_India
ಉ: ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952)
ಒಳ್ಳೆಯ ಮಾಹಿತಿಗಳು. ಧನ್ಯವಾದಗಳು, ಪಾರ್ಥರೇ.
In reply to ಉ: ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952) by kavinagaraj
ಉ: ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು (1952)
ಕವಿನಾಗರಾಜರೆ ತಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು