ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು (1957)

ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು (1957)

ಚಿತ್ರ

ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು  (1957)

 

1952 ರಲ್ಲಿ ಬಹುಮತದೊಂದಿಗೆ ಆಡಳಿತವನ್ನು ವಹಿಸಿಕೊಂಡ ನೆಹರು ನೇತೃತ್ವದ ಪಕ್ಷಕ್ಕೆ ಸಾಕಷ್ಟು ಸಂಕಷ್ಟಗಳು ಹೋರಾಟಗಳು ಇದ್ದವು. ಸಮಸ್ಯೆಗಳನ್ನು ಬಗೆಹರಿಸುತ್ತಲೇ ಅಭಿವೃದ್ದಿಯ ಪಥದತ್ತಲೂ ಸಾಗುವ ಸವಾಲು ಎದುರಿಗಿತ್ತು.  

ಭಾರತ ಪಾಕಿಸ್ತಾನ ವಿಭಜನೆಯ ಪರಿಣಾಮಗಳು,  ಹಿಂದು ಮುಸ್ಲಿಮ್ ಮತೀಯ ಗಲಭೆಗಳು, ನಡುವೆಯೇ ಸಣ್ಣ ಸಣ್ಣ ಪ್ರಾಂತ್ಯಗಳಾಗಿದ್ದ  ಭಾರತವನ್ನು ಒಕ್ಕೂಟ ಸ್ವರೂಪಕ್ಕೆ ತರಬೇಕಾದ ಜವಾಬ್ದಾರಿ,  ಒಕ್ಕೂಟ ವ್ಯವಸ್ಥೆಯನ್ನು ಎಲ್ಲರೂ ಸೇರಲು ಮನಒಲಿಸುವ ಜೊತೆಗೆ, ಸೇರಲು ನಿರಾಕರಿಸುವರನ್ನು ಬಲವಂತವಾಗಿಯಾದರು ಸೇರಿಸಿಕೊಳ್ಳಬೇಕಾದ ಪರಿಸ್ಥಿತಿ.

 

ಮೇ 13 , 1952 ರಲ್ಲಿ ಮೊದಲ ರಾಜ್ಯಸಭೆಯು ನಡೆಯಿತು, ೨೫೦  ಬಲದ ಸಭೆಯಲ್ಲಿ ,  12 ಜನರನ್ನು ರಾಷ್ಟ್ರಾದ್ಯಕ್ಷರು ಆಯ್ಕೆ ಮಾಡುವರು. ಉಳಿದ ಸದಸ್ಯರು ಲೋಕಸಭೆ ಹಾಗು ವಿಧಾನ ಸಭೆ  ವಿಧಾನ ಪರಿಷನ್ ಗಳಿಂದ  ಆಯ್ಕೆ ನಡೆಸಲಾಗುತ್ತೆ. ಅವದಿ 6 ವರ್ಷಗಳಿದ್ದು ಇದು ಸತತವಾಗಿ ಇರುವ ವ್ಯವಸ್ತ್ಯೆ. ಲೋಕಸಭೆಯಂತೆ ಇದು ಅನೂರ್ಜಿತವಾಗುವದಿಲ್ಲ.

 

1953 ರಲ್ಲಿ ಇಂಡಿಯನ್ ಏರ್ ಲೇನ್ಸ್ ಸ್ಥಾಪಿತವಾಯಿತು.

ಹಿಂದುಳಿದ ವರ್ಗಗಳ ಆಯೋಗ (ಬ್ಯಾಕ್ ವರ್ಡ್ ಕ್ಲಾಸಸ್ ಕಮೀಷನ್) ಸ್ಥಾಪನೆಯಾಯಿತು.  

5-7-1953 ರಲ್ಲಿ ಅಂದ್ರದ ಹೈಕೋರ್ಟ್ ಪೀಠ ಸ್ಥಾಪನೆ,

6-11-54 ಬಾಂಬೆ ಎಲಕ್ಟ್ರಿಸಿಟಿ ಭೋರ್ಡ್  ,  

ಆಲ್ ಇಂಡಿಯಾ  ರೇಡಿಯೋ ಇವೆಲ್ಲ ಪ್ರಮುಖ ಘಟನೆಗಳು.  

 

14 ನೇ ಅಕ್ಟೋಬರ್ 1956 ರಲ್ಲಿ  ಡಾ| ಬೀ ಅರ್ ಅಂಬೇಡ್ಕರ್ ರವರು ತಮ್ಮ 3,65,000ಅನುಯಾಯಿಗಳೊಡನೆ ನಾಗಪುರದಲ್ಲಿ ಹಿಂದೂ ಧರ್ಮವನ್ನು ತೊರೆದು ಬೌದ್ದಧರ್ಮ ಸ್ವೀಕರಿಸಿದರು,

ಅದು ಕೇವಲ ಅವರ ಸಾವಿಗಿಂತ ಎರಡು ತಿಂಗಳ ಹಿಂದಿನ ಘಟನೆ ,

ಎರಡು ತಿಂಗಳಲ್ಲಿಯೆ , 6-Dec-1956 ರಲ್ಲಿ ಅವರು ಸಾವಿಗೀಡಾದರು.

 

ಭಾರತದ ಕಾಂಗ್ರೆಸ್ ಪಕ್ಷವಲ್ಲದೆ ಹಲವು ರಾಜಕೀಯ ಪಕ್ಷಗಳು ಸಾಕಷ್ಟು ಸಕ್ರೀಯವಾಗಿದ್ದವು.   ಶ್ಯಾಮ ಪ್ರಸಾದ್‌ ಮುಖರ್ಜಿಯವರ ಜನಸಂಘ , ಪರಿಶಿಷ್ಟ ಜಾತಿಗಳ ಒಕ್ಕೂಟಕ್ಕೆ(ಗಣತಂತ್ರವಾದಿ ಪಕ್ಷ) ದಲಿತ ನಾಯಕ B. R. ಅಂಬೇಡ್ಕರ್‌ ಪುನಶ್ಚೈತನ್ಯ ನೀಡಿದರು.  ಆಚಾರ್ಯ ಕೃಪಲಾನಿಯವರ  ಕಿಸಾನ್‌ ಮಜ್ದೂರ್‌ ಪ್ರಜಾ ಪರಿಷದ್‌, ರಾಂ ಮನೋಹರ್‌ ಲೋಹಿಯಾ ಮತ್ತು ಜಯ್‌ಪ್ರಕಾಶ್‌ ನಾರಾಯಣ್‌ರವರ ನಾಯಕತ್ವವನ್ನು ಹೊಂದಿದ್ದ ಸಮಾಜವಾದಿ ಪಕ್ಷ ಹಾಗೂ ಭಾರತದ ಕಮ್ಯುನಿಸ್ಟ್‌ ಪಕ್ಷಗಳು ಸೇರಿದ್ದವು. ಆದರೂ ಕಾಂಗ್ರೆಸಿನ ಏಕಸಾಮ್ಯವನ್ನು ಮುರಿಯುವುದು ಅಷ್ಟು ಸುಲುಭವಾಗಿರಲಿಲ್ಲ. ಕಾಂಗ್ರೆಸಿಗೆ ಬೆನ್ನುಲಬಾಗಿ ನೆಹರು ಇದ್ದರು, ಗಾಂಧೀಜಿಯವರ ಹೆಸರಿನ ಹಿನ್ನಲೆಯ ಪ್ರಭಾವ ಆ ಪಕ್ಷಕ್ಕೆ ಇತ್ತು.  

 

ಅತ್ಯಂತ ಹೆಚ್ಚು ದೀರ್ಘಕಾಲದ ಸಂಸತ್ತಿನ ಅದಿವೇಶನದ ದಾಖಲೆಯ ನಂತರ ಎಲ್ಲ ಪಕ್ಷಗಳು ಭಾರತದ ಎರಡನೇ ಚುನಾವಣೆ ಎದುರಿಸಲು ಸಜ್ಜಾಗಿದ್ದವು.

 

1952ರಲ್ಲಿನ ತನ್ನ  ಯಶಸ್ಸಿನ ಕತೆಯನ್ನು 1957ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತಿಸುವಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸಮರ್ಥವಾಯಿತು.   ಒಟ್ಟು 490 ಉಮೇದುವಾರರ ಪೈಕಿ 371 ಸ್ಥಾನಗಳನ್ನು ಗೆಲ್ಲುವಲ್ಲಿ  ಕಾಂಗ್ರೆಸ್ ಯಶಸ್ವಿಯಾಗಿತ್ತು. ಒಟ್ಟಾರೆಯಾಗಿ 57,579,589 ಮತಗಳನ್ನು ಗೆಲ್ಲುವ ಮೂಲಕ ಪಕ್ಷವು  ಶೇಕಡ 47.78   ಬಹುಮತವನ್ನೂ ಗಳಿಸಿತು.   

ಬಹುಮತದೊಂದಿಗೆ ಪಂಡಿತ್‌ ಜವಹರಲಾಲ್‌ ನೆಹರೂ ಅಧಿಕಾರಕ್ಕೆ ಮರಳಿದರು. 1957ರ ಮೇ 11ರಂದು, ಹೊಸ ಲೋಕಸಭೆಯ ಸಭಾಪತಿಯಾಗಿ   ಅನಂತಶಯನಂ ಅಯ್ಯಂಗಾರ್‌ರವರು ಅವಿರೋಧವಾಗಿ ಚುನಾಯಿಸಲ್ಪಟ್ಟರು. ಅವರ ಹೆಸರು ಪ್ರಧಾನಮಂತ್ರಿ ನೆಹರೂರವರಿಂದ ಪ್ರಸ್ತಾವಿಸಲ್ಪಟ್ಟಿತು ಹಾಗೂ ಶ್ರೀಮಾನ್‌ ಸತ್ಯನಾರಾಯಣ್‌ ಸಿನ್ಹಾರಿಂದ ಅನುಮೋದಿಸಲ್ಪಟ್ಟಿತು.

ಕಾಂಗ್ರೆಸ್‌ ಸದಸ್ಯ ಫಿರೋಜ್‌ ಗಾಂಧಿಯವರ , (ನೆಹರೂರವರ ಮಗಳು ಇಂದಿರಾರನ್ನು ನಂತರದಲ್ಲಿ ಇವರು ಮದುವೆಯಾದರು) ರಾಜಕೀಯ  ಜೀವನ ಈ ಚುನಾವಣೆಯಿಂದ ಪ್ರಾರಂಭವಾಯಿತು. ತಮ್ಮ ಅತ್ಯಂತ ಸಮೀಪದ ಎದುರಾಳಿ ನಂದಕಿಶೋರ್‌ರವರನ್ನು 29,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ಫಿರೋಜ್‌ ಗಾಂಧಿ, ಉತ್ತರ ಪ್ರದೇಶದ ರಾಯ್‌ಬರೇಲಿ ಚುನಾವಣಾ ಕ್ಷೇತ್ರದಲ್ಲಿ  ಗೆದ್ದರು.

ಕುತೂಹಲಕರವೆಂಬಂತೆ, 1957ರ ಚುನಾವಣೆಯಲ್ಲಿ ಒಬ್ಬ ಮಹಿಳಾ ಉಮೇದುವಾರರೂ ಚುನಾವಣಾ ಕಣದಲ್ಲಿರಲಿಲ್ಲ. 1957ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು 19 ಪ್ರತಿಶತದಷ್ಟು ಮತವನ್ನು ಪಡೆದರು.

ಆಸಕ್ತಿ ಇರುವವರು ಚುನಾವಣ ಕಮೀಷನ್ ರವರ   ರಿಪೋರ್ಟ್ ಓದಬಹುದು , ಕರ್ನಾಟಕದಲ್ಲಿ ಆಗ ೨೬ ಸೀಟ್ ಗಳಿದ್ದವು, ಮತ್ತೊಂದು ವಿಷಯ ಆಗ 1-seat , 2-seat constituencies  ಅನ್ನುವ ವಿಂಗಡನೆ ಇದ್ದವೂ  (?)

1957 ರಿಂದ 1962ರವರೆಗೂ ಸಂಸತ್ ಜಾರಿಯಲ್ಲಿತ್ತು.

1962ರ ಮಾರ್ಚ್‌ 31ರಂದು 2ನೇ ಲೋಕಸಭೆ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಿತು.

 

ಚುನಾವಣ ವಿಷ್ಲೇಷಣೆ:

 

Lok Sabha elections 1957

(total 494)

Bharatiya Jana Sangh

BJS  4

Communist Party of India

CPI 27

Indian National Congress

INC 371

for full election analysys see 

http://en.wikipedia.org/wiki/Indian_general_election,_1957

 

Reference: 

ಅಂಬೇಡ್ಕರ್ ಬೌದ್ದಧರ್ಮಕ್ಕೆ ಸೇರಿದರು:

http://www.mapsofindia.com/on-this-day/14th-october-1956-b.r.-ambedkar-c...

 

statitics election commission report

http://eci.nic.in/eci_main/statisticalreports/LS_1957/Vol_I_57_LS.pdf

all india radio

http://en.wikipedia.org/wiki/Akashvani_(radio_broadcaster)

ಚಿತ್ರಗಳು :
http://3.bp.blogspot.com/-yzCr9wH7DlQ/Uz7niJ46LUI/AAAAAAAAFJA/Ut83BXYJ2B...
http://1.bp.blogspot.com/-Tl8ZwnS21P4/Uz7nni8KpeI/AAAAAAAAFJI/5Nd-9f68Tt...

Rating
No votes yet