ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)
ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)
1957 ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮತ್ತು ಬೆಳವಣಿಗೆಯ’ ಕ್ಷೇತ್ರಗಳಲ್ಲಿ ದೇಶಕ್ಕೆ ಸಂಬಂಧಿಸಿದ ಒಂದು ಹೊಸ ನೋಟವನ್ನೂ ಸಹ ಕಲ್ಪಿಸಿಕೊಂಡಿದ್ದರು. ಪಂಚವಾರ್ಷಿಕ ಯೋಜನೆಯ ಕಾರ್ಯಕ್ರಮವು ಈ ರೀತಿಯಲ್ಲಿ ಜಾರಿಗೆ ಬಂದಿತು.
1951 ರಲ್ಲಿ ತಮ್ಮ ಕನಸಿನ ‘ಪಂಚವಾರ್ಷಿಕಯೋಜನೆ ‘ ಪ್ರಾರಂಭಿಸಿ ಮೊದಲಿಗೆ ಕೃಷಿಗೆ ಪ್ರಾದಾನ್ಯತೆ ಕೊಟ್ಟಿದ್ದರು. ಪ್ರಧಾನಿಯವರನ್ನು ಅಧ್ಯಕ್ಷರನ್ನಾಗಿ ಉಳ್ಳ ‘ಪ್ಲಾನಿಂಗ್ ಕಮೀಷನ್ ‘ ಬಾಕ್ರನಂಗಲ್ , ಹಿರಾಕುಡ್ ನಂತಹ ಬೃಹುತ್ ಡ್ಯಾಮ್ ಗಳನ್ನು ಕಟ್ಟಲು ಯೋಜಿಸಿತು. 1956 ರಿಂದ 1961ರ ಅವದಿಯ ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ನೆಹರುರವರು ಕೃಷಿಯ ಜೊತೆ ಜೊತೆಗೆ ಬೃಹುತ್ ಉಧ್ಯಮಗಳನ್ನು ಕಟ್ಟುವದರಲ್ಲಿ, ಜಲವಿಧ್ಯುತ್ ಸ್ಥಾವರಗಳ ಸ್ಥಾಪನೆ, ಬಿಲಾಯ್ - ದುರ್ಗಾಪುರ- ರೂರ್ಕೆಲ ನಂತಹ ಉಕ್ಕಿನ ಕಾರ್ಖಾನೆಗಳು ಹೊಸ ರೈಲ್ವೆ ಮಾರ್ಗಗಳು, ಟಾಟ ಇನ್ಸ್ ಟ್ಯೂಟ್ ಫಂಡಮೆಂಟಲ್ ರೀಸರ್ಚ್ ಮೂಲಕ ವಿಜ್ಞಾನದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳಿ ಚಾಲನೆ ಕೊಟ್ಟರು.
ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನಾಯುಕ್ತವಾಗಿ ಬಳಸುವ ಮೂಲಕ ಜನರ ಜೀವನ ಮಟ್ಟಗಳನ್ನು ಸುಧಾರಿಸುವ ಕಡೆಗೆ ಈ ಕಾರ್ಯಕ್ರಮವು ಗುರಿಯಿಟ್ಟುಕೊಂಡಿತ್ತು. ದೇಶವು ಮುಂದಕ್ಕೆ ಜಿಗಿಯಬೇಕು ಎಂಬುದಾಗಿ ನೆಹರೂ ಬಯಸಿದ್ದ ನಾನಾಬಗೆಯ ವಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ವಲಯ, ಸಂವಹನೆಗಳು ಸೇರಿದ್ದವು. ಭಾರತದ ಪ್ರಧಾನಿಯು ‘ಉಕ್ಕಿನ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳನ್ನು’ ಆಧುನಿಕ ಭಾರತದ ‘ದೇವಾಲಯಗಳು ‘ ಎಂದು ಕರೆದರು.
ಈ ಎಲ್ಲ ಸಾಧನೆಗಳ ಹಿನ್ನಲೆಯಲ್ಲಿ ನಡೆದ ಭಾರತದ ಮೂರನೆ ಮಹಾಚುನಾವಣೆಯಲ್ಲಿ ನೆಹರು ಮತ್ತೆ ತಮ್ಮ ಪಕ್ಷ ಕಾಂಗ್ರೆಸನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾದರು. ಮೂರು ಬಾರಿ ಸತತ ಗೆಲುವು ದಾಖಲಿಸಿದ್ದರು.
1962 ರ ಫೆಬ್ರುವರಿ ಮಾರ್ಚಿಯಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 494 ಸದಸ್ಯಬಲದ ಲೋಕಸಬೆಗೆ 361 ಸದಸ್ಯಬಲದ ಜೊತೆಗೆ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದರು. ದೇಶದ ಜನ ಕಾಂಗ್ರೆಸ್ ಹಾಗು ನೆಹರುರವರ ಮೇಲೆ ಮತ್ತೆ ನಂಭಿಕೆ ಇಟ್ಟು ಅವರನ್ನು ಚುನಾಯಿಸಿದ್ದರು. 2-apr-1962 ರಿಂದ 3-mar-1967 ರವರೆಗಿನ ಲೋಕಸಭಾ ಅವದಿಗೆ , ಸರ್ಧಾರ್ ಹುಕುಂ ಸಿಂಗ್ ಸ್ಪೀಕರ್ ಆಗಿ ಕೃಷ್ಣಮೂರ್ತಿರಾವ್ ರವರು ಉಪ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು
ಈ ಅವದಿ ಭಾರತಕ್ಕೆ ಹಾಗು ನೆಹರುರವರಿಗೆ ಶುಭದಾಯಕವಾಗಿರಲಿಲ್ಲ. ವಿವರ ನಾಲ್ಕನೆ ಹೆಜ್ಜೆಯಲ್ಲಿ ಮುಂದುವರೆಯುವುದು...
Results by Party
Lok Sabha elections 1962
Electoral participation: 55.42%
(total 494)
Bharatiya Jana Sangh
BJS 14
Communist Party of India
CPI 29
Indian National Congress
INC 361
Praja Socialist Party
PSP 12
Socialist Party
SSP 6
Swatantra Party
SP 18
Akali Dal
AD 3
Akhil Bharatiya Hindu Mahasabha
ABHM 1
Akhil Bharatiya Ram Rajya Parishad
RRP 2
All India Forward Bloc
AIFB 2
All Party Hill Leaders Conference
APHLC 1
Chota Nagpur Santhal Parganas Janata Party
CNSPJP 3
Dravida Munnetra Kazhagam
DMK 7
Ganatantra Parishad
GP 4
Indian Union Muslim League
IUML 2
Republican Party of India
RPI 10
Independents 20
References:
election commission report - third lokasabha election :
http://eci.nic.in/eci_main/statisticalreports/LS_1962/Vol_I_LS_62.pdf
third general election :
http://en.wikipedia.org/wiki/Indian_general_election,_1962
http://en.wikipedia.org/wiki/3rd_Lok_Sabha