ಸ್ವತಂತ್ರ, ನಿರಂಕುಶಮತಿಗಳನ್ನು ಸೃಷ್ಟಿಸಬೇಕಿರುವ ಶಿಕ್ಷಣ ವ್ಯವಸ್ಥೆ...
ಒಂದು ಉತ್ತಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ನಿರಂಕುಶಮತಿಗಳನ್ನಾಗಿ ಮಾಡಬೇಕು. ಆದರೆ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನೂರಕ್ಕೆ ಮುವ್ವತ್ತೈದು ತೆಗೆದುಕೊಳ್ಳುವ ಬಗೆ ಹೇಗೆ ಎಂದು ಹೇಳಿಕೊಡುವುದೆ ಮೂಲ ಶಿಕ್ಷಣ ವ್ಯವಸ್ಥೆ.
ಇವತ್ತು ನಮ್ಮ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ, ಚರ್ಚಿಸಲೇಬೇಕಾದ ಅನೇಕ ವಿಷಯಗಳಿವೆ. ಜಾತಿವಾದ, ಕೋಮುವಾದ, ಶೋಷಣೆ, ಮೀಸಲಾತಿ, ಭಯೋತ್ಪಾದನೆ, ನಕ್ಸಲ್ವಾದ, ಜಾಗತೀಕರಣ, ರಾಷ್ಟ್ರೀಯತೆ ಯಂತಹ ಹಲವಾರು ಜ್ವಲಂತ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸಮಸ್ಯೆಗಳಿವೆ. ಆದರೆ....
ಹಾಲಿವುಡ್ನ ಇತ್ತೀಚಿನ ಅದ್ಭುತ ನಟಿ ಹಿಲರಿ ಸ್ವ್ಯಾಂಕ್ಳ "Freedom Writers" ನೋಡಿದ್ದರೆ ನಿಮಗೆ ಎರಿನ್ ಗ್ರುವೆಲ್ ಎನ್ನುವ ಆದರ್ಶ ಶಿಕ್ಷಕಿಯೊಬ್ಬಳ ಪರಿಚಯ ಇರುತ್ತದೆ. ಅದರಲ್ಲಿ, ತಾನು ನಂಬಿದ ನೀತಿಗಳಿಗಾಗಿ, ಆದರ್ಶಕ್ಕಾಗಿ, ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹೇಗೆ ಆಕೆ ತನ್ನ ಸ್ವಂತ ಜೀವನದ ಸೌಖ್ಯವನ್ನೂ ಕಡೆಗಣಿಸಿ ಮುನ್ನಡೆದಳು ಮತ್ತು ಬದುಕಿನಲ್ಲಿ ನಂಬಿಕೆಯನ್ನೆ ಕಳೆದುಕೊಂಡ, ಭೀತಿಗೊಂಡ, ಅರಾಜಕ ಮನಸ್ಸಿನ ವಿದ್ಯಾರ್ಥಿಗಳ ಜೀವನವನ್ನೆ ಹೇಗೆ ಬದಲಾಯಿಸಿದಳು ಎನ್ನುವುದು ತಿಳಿಯುತ್ತದೆ.
ನನ್ನ ಈ ವಾರದ ಅಂಕಣ ಲೇಖನ ಎರಿನ್ ಗ್ರುವೆಲ್, ನಾಟ್ಜಿಗಳ ಮಾರಣಹೋಮ, ನಮ್ಮ ಶಿಕ್ಷಣ ವ್ಯವಸ್ಥೆಯ ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/02/blog-post_27.html