ಸ್ವಾತಂತ್ರ್ಯವೂ ಅರ್ಥವಿಲ್ಲದ ಬದುಕು

ಸ್ವಾತಂತ್ರ್ಯವೂ ಅರ್ಥವಿಲ್ಲದ ಬದುಕು

ನೀನೊಮ್ಮೆ ನನ್ನ ಪ್ರೀತಿಸುತ್ತೇನೆ ಎಂದಾಗ
ಅರಳಿದ ನನ್ನ ಕಣ್ಣುಗಳು ಇನ್ನೂ ಮುಚ್ಚಿಲ್ಲ
ಗಾಳಿಗೆ ನನ್ನ ಮುಖದ ಮೇಲೆಲ್ಲಾ ಓಡಾಡುವ
ನಿನ್ನ ಮುಂಗುರುಳುಗಳ ಸೆಳೆತದಿಂದ ಮುಕ್ತಿ ಇನ್ನೂ ಸಿಕ್ಕಿಲ್ಲ
ನಿನ್ನ ಕಣ್ಣುಗಳ ಪ್ರತಿ ನೋಟವೂ
ಹೊಸತೊಂದು ಬೆಳವಣಿಗೆಯಂತೆ ಕಾಣುವ
ಈ ಬಡಜೀವಕ್ಕೆ ನಿನ್ನ ಬಂಧಿಯಾಗಿರುವುದೇ ಕನಸು


ಕಾರಣವಿಲ್ಲದೆ ನನ್ನ ಮೇಲೆ ಕೋಪಗೊಳ್ಳುವ
ನಿನ್ನ ವಿಚಿತ್ರ ಸ್ವಭಾವದಿಂದ ನಾನಿನ್ನೂ ಬೇಸತ್ತಿಲ್ಲ
ಮಾತುಗಳೇ ನಮ್ಮ ಪ್ರೀತಿಗೆ ತೋರಣ
ಮುಗಿಯದ ನಿನ್ನ ಮಾತುಗಳಿಂದ ನನಗಿನ್ನೂ ಮುಕ್ತಿ ಬೇಕಿಲ್ಲ
ಮಧುರ ಮಾತುಗಳ ಮಧ್ಯೆ ಕಾಡುವ ಮೌನದಿಂಗಿತ
ನಿನಗೂ ಅರ್ಥವಾಗಿ ನಿನ್ನ ಹೃದಯದ ಢವಢವ
ನನ್ನ ಬಳಿಯೂ ತಲುಪಿದಾಗ ರೋಮಾಂಚನಗೊಳ್ಳುವ ನನಗೆ
ನೀನಿರದೆ ಇರುವ ಸ್ವಾತಂತ್ರ್ಯವೂ ಅರ್ಥವಿಲ್ಲದ ಬದುಕು

Rating
No votes yet

Comments