ಸ್ವಾತಿ-ಮುತ್ತು

ಸ್ವಾತಿ-ಮುತ್ತು

ಕನ್ನಡಕ್ಕಾಗಿ
ಬೆವರು ಸುರಿಸಿದ ಹೊತ್ತು;
ಪ್ರತಿಕ್ಷಣ
ಸ್ವಾತಿ-ಮುತ್ತು;
ನಾನು ನನ್ನದು
ಅಹಂ ಕಳೆಯಲಿ;
ನಾವು ನಮ್ಮದು
ಭಾವ ಬೆಳೆಯಲಿ;
ಒಂಟಿ ಸಲಗ
ಎನ್ನಿಸದೆ;
ಶ್ರಮಿಕರ ಗುಂಪಲ್ಲಿರಲಿ
ನಿನ್ನೆದೆ;
ನಿನಗಾಗಿ ನಿನ್ನೊಳಿತಿಗಾಗಿ
ಮಾಡಿದ್ದು ಯಶವಲ್ಲಯ್ಯ;
ಕನ್ನಡಕ್ಕಾಗಿ, ಜನತೆಗಾಗಿ
ಮಾಡಿದ್ದು ಎಂದೆಂದೂ ಸಲ್ಲುವುದಯ್ಯ; (ಕೆಳಗಿನ ಚರ್ಚೆಯ ನಂತರ "ಸಲ್ಲ" ಪದದ ಬದಲಾಗಿ "ಸಲ್ಲುವುದಯ್ಯ" ಎಂದು ಬದಲಾಯಿಸಲಾಗಿದೆ)

ಅನ್ಯರ ಮೊಗದಲ್ಲಿ
ದೇವರ ಕಾಣ;
ಸಹಾಯದ ಮುದ್ರೆಯಲ್ಲಿ
ನಲಿವನ್ನು ಕಾಣ;

---ಅಮರ್

Rating
No votes yet

Comments