ಸ೦ಕ್ರಾ೦ತಿಗೆ ಸ್ವಾಗತ

ಸ೦ಕ್ರಾ೦ತಿಗೆ ಸ್ವಾಗತ


ಆಡಿ ಓಡಿಯಾಡಿ
ನೋಡಿ ನೋಡಿಯಾಡಿ
ಕಣ್ಮಿಟುಕಿಸಿ
ದಿಕ್ಕು ದಿಕ್ಕಿಗೆ ಚಲಿಸಿ
ಬವಳಿ,ಸುತ್ತಿ ಸುತ್ತಿ ಸುರುಳಿ
ರಾಮಾ! ಆರಾಮೆಲ್ಲಿಯದೋ
ಉರಿದುರಿದು ಕೆ೦ಪಾದೆ.
ತ೦ಪಾಗುವೆನೆ೦ದೋ?
ಯಾನ,ಪಯಣ ಬದಲಾಯ್ಸೋ
ತೆ೦ಕಣದ೦ಕಣದಲಿ ಕುಣಿ ಕುಣಿದಾಯ್ತು
ಬಡಗಣದಲಿ ಗಣಗಣಿಸುವೆನು
ಗುನುಗುನಿಸುವೆನು
ರಮಿಸುವೆನು ಭೂಮಿಯ
ಗುಣಿಸುವೆನು ವೃದ್ಧಿಯ


ಪ್ರದ್ಯೋತ ಉದ್ಭವಿಸಿದ
ರ೦ಗಾದಳು ಉಷೆ
ಕೆ೦ಪಾದಳು ಭೂ ರಮೆ
ಹರಿ ಹರಿದ್ವರ್ಣ ಮಿರಿ ಮಿರಿ
ಮಿ೦ಚಿತೋ
ಬಾನ್ ಬೆರಗಾಯಿತೋ
ಕೇಳ್ ಕೇಳದೋ ತಾನ
ಕೋಕಿಲ ಮಧುರ ಸ್ವನ
ಸ೦ಕ್ರಾ೦ತಿ ಪುರುಷನ
ಪರುಷ ಸ್ಪರ್ಷಕೆ
ಚ೦ದಾದಳು ಅಚಲೆ
"ಆಯನ ವಚ್ಚಾರು"
ಆಯನ ತಿರುಗಿ ಬ೦ದವನಿಗೆ
ಸ೦ಭ್ರಮದ ಸ್ವಾಗತ

Rating
No votes yet