ಸ೦ದಾಯ
ಕಣ್ಣಲ್ಲಿ ಕಣ್ಣಿಟ್ಟು ಹಾಲು ಹೀರುತ್ತಿದ್ದ,
ನನ್ನ ಪುಟ್ಟ ಬೊ೦ಬೆಗೆ ಹೇಳಿದೆ -
ಗದ್ದಲ ಮಾಡಿ, ಬಿಟ್ಟ ಕೆಲಸ ಬಿಟ್ಟು,
ನಿನ್ನ ಮಗ್ಗುಲಿಗೆ ಬರುವ೦ತೆ ಮಾಡಿದೆಯಲ್ಲಾ,
ನೀನೀಗ ಹೀರುವ ಹಾಲಿಗೆ,
ಬೆಲೆ ಏನು ಕೊಡುವೆ?...
ಪುಟ್ಟ ಗುಲಾಬಿ ಕೈಯನ್ನು ಮೆಲ್ಲಗೆ ಎತ್ತಿ,
ನಿಧಾನವಾಗಿ ನನ್ನ ತುಟಿಯ ಮೇಲೆ ಒತ್ತಿ,
ಕಣ್ಣಲ್ಲಿ ಕಣ್ಣು ಸೇರಿಸಿತು ನನ್ನ ಬೊ೦ಬೆ..
ಸಣ್ಣ ಸಿಹಿ ಮುತ್ತಿಟ್ಟು ನಾ ಹೇಳಿದೆ,
ಬೆಲೆ ಸ೦ದಾಯವಾಯ್ತು..
Rating
Comments
ಉ: ಸ೦ದಾಯ