ಹಂಪಿ

ಹಂಪಿ

ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.ವಿಜಯನಗರ ಸಾಮ್ರಾಜ್ಯದ ಅತೀ ಯೆಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೊಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.

ಈ ಐತಿಹಾಸಿಕ ನಗರದಲ್ಲಿ ಯುನೆಸ್ಕೋ ಸಂಸ್ಥೆಯ ಸಹಾಯದಲ್ಲಿ ಮರ ಸಂಸ್ಥೆಯು ಸಮುದಾಯ ಮಾಧ್ಯಮವನ್ನು ಸ್ಥಾಪಿಸಲು ಪರಿಶೋದನೆಯನ್ನು ಮಾಡಲಾಯಿತು. ಈ ಸಮುದಾಯ ಮಾಧ್ಯಮವನ್ನು ಹಂಪಿ, ಆನೆಗುಂದಿ, ಕಮಲಾಪುರ, ಕಡ್ಡಿರಾಮಪುರಗಳಲ್ಲಿ ಸ್ಥಾಪಿಸಲು ಪರಿಶೋದನೆಯನ್ನು ಮಾಡಿ ಮಾಹಿತಿಯನ್ನು ಸಂಗ್ರಹಿಸಲು ಮರ ತಂಡ ಬೇಟಿಯನ್ನು ಮಾಡಿ ಮಾಹಿತಿಯನ್ನು ಸಂಗ್ರಹಿಸಿತು.
ಮೊದಲನೆಯದಾಗಿ ಅನೆಗುಂದಿಯಲ್ಲಿ ಪರಿಶೋದನೆಯನ್ನು ಮಾಡಲಾಯಿತು ಅನೆಗುಂದಿಯಲ್ಲಿ The Kishkinda Trust (TKT) ಸ್ವಯಂಸೇವಾ ಸಂಸ್ಥೆ ಇದ್ದು , ಈ ಸಂಸ್ಥೆಯು ಹಲವಾರು ಅದಾಯದಾಯಕ ಕಾರ್ಯಕ್ರಮಗಳನ್ನು ಮಹಿಳೆಯರಿಗೋಸ್ಕರ ಹಮ್ಮಿಕ್ಕೊಂಡಿದ್ದು ಬಹಳಷ್ಟು ಜನರು ಬಾಳೆ ನಾರಿನಿಂದ ಬುಟ್ಟಿಯನ್ನು ನೇಯುತ್ತಿದ್ದಾರೆ. ಇದರಿಂದ ಹಣವನ್ನು ಸಂಪಾದಿಸಿ ತಮ್ಮ ಮನೆಯ ಸಂಸಾರಕ್ಕೆ ಸಹಕಾರಿಯಾಗುತ್ತಿದ್ದಾರೆ.
ಅನೆಗುಂದಿಯ ಮಹಿಳಾ ಸಂಘದ ಸದಸ್ಯರ ಜೊತೆ, ಯುವಕರ ಸಂಘದೊಟ್ಟಿಗೆ, ರೈತರ ಸಂಘದೊಟ್ಟಿಗೆ, ಸಾರ್ವಜನಿಕರೊಟ್ಟಿಗೆ, ಹಾಗೂ ಸ್ವಯಂ ಸೇವಾ ಸಂಸ್ಥೆಯವರೋಟ್ಟಿಗೆ ಚರ್ಚಿಸಿ ಅವರಿಗೆ ಯಾವ ರೀತಿಯಾದ ಮಾಧ್ಯಮ ಇದ್ದರೆ ಮಾಹಿತಿಯನ್ನು ಪಡೆಯಲು ಉತ್ತಮ ಎಂದಾಗ ಹಲವಾರು ವಿಧದ ಮಾಧ್ಯಮಗಳನ್ನು ತಿಳಿಸಿದರು ಅವುಗಳಲ್ಲಿ ಡಾಕ್ಯುಮೆಂಟರಿ ಪಿಲ್ಮ್ , ಬೀದಿ ನಾಟಕ ,ಹಾಡು, ರೇಡಿಯೋ ಇತ್ಯಾದಿಗಳನ್ನು ತಿಳಿಸಿ ಕಡೆಯದಾಗಿ ರೇಡಿಯೋ ಮಾಧ್ಯಮ ಇದ್ದರೆ ತುಂಬಾ ಅನುಕೂಲ ಮತ್ತು ಸರಳವಾದ ವಿಧಾನ ಜೊತೆಗೆ ಕರ್ಚು ಸಹ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಕಮಲಾಪುರದಲ್ಲಿ ಸಹ ಮಹಿಳಾ ಸಂಘದ ಸದಸ್ಯರ ಜೊತೆ, ಯುವಕರ ಸಂಘದೊಟ್ಟಿಗೆ, ಅಂಗವಿಕಲರ ಸಂಘದೊಟ್ಟಿಗೆ , ರೈತರ ಸಂಘದೊಟ್ಟಿಗೆ, ಸರ್ಕಾರಿ ಕಚೇರಿಗಳ ಒಟ್ಟಿಗೆ, ಸಾರ್ವಜನಿಕರೊಟ್ಟಿಗೆ, ಹಾಗೂ ಸ್ವಯಂ ಸೇವಾ ಸಂಸ್ಥೆಯವರೋಟ್ಟಿಗೆ ಚರ್ಚಿಸಿ ಅವರಿಗೆ ಯಾವ ರೀತಿಯಾದ ಮಾಧ್ಯಮ ಇದ್ದರೆ ಮಾಹಿತಿಯನ್ನು ಪಡೆಯಲು ಉತ್ತಮ ಎಂದಾಗ ಇಲ್ಲಿಯೂ ಸಹ ಹಲವಾರು ವಿಧದ ಮಾಧ್ಯಮಗಳನ್ನು ತಿಳಿಸಿದರು ಅವುಗಳಲ್ಲಿ ಡಾಕ್ಯುಮೆಂಟರಿ ಪಿಲ್ಮ್ , ಬೀದಿ ನಾಟಕ ,ಹಾಡು, ಮುಖ್ಯವಾಗಿ ಸ್ಥಳೀಯ ಕೇಬಲ್ ಅಪರೇಟರ್ ಇದ್ದು ಹಲವಾರು ಸ್ಥಳೀಯ ಸುದ್ದಿ, ಹಬ್ಬಗಳ ನೇರ ಪ್ರಸಾರ ಇತ್ಯಾದಿಗಳನ್ನು ಪ್ರಸಾರ ಮಾಡುತ್ತಿದ್ದು ಇಂತಹ ಸ್ಥಳೀಯ ವಾಹಿನಿಯ ಮುಖಾಂತರ ಮಾಹಿತಿಯನ್ನು ಪ್ರಸಾರ ಮಾಡಿದರೆ ಉತ್ತಮ ಎಂದು ತಿಳಿಸಿದರು. ಇಲ್ಲಿ ಹಲವಾರು ಯುವಕ ಸಂಘಗಳು, ಮಹಿಳಾ ಸಂಘಗಳು, ಇದ್ದು ಇವರುಗಳು ಹೇಳುವ ಪ್ರಕಾರ ಸರ್ಕಾರದ ಯಾವುದೇ ಯೋಜನೆಯು ಪಲಾನುಭವಿಗಳಿಗೆ ಸರಿಯಾಗಿ ದೊರೆಯದೇ ಇದ್ದು ಅದಕ್ಕಾಗಿ ಹಲವಾರು ಬಾರಿ ಗಲಾಟೆ ಮಾಡಿ ಪಡೆಯಬೇಕಾದ ಪರಿಸ್ಥಿತಿ ಇದೆ ಅದ್ದರಿಂದ ಈ ರೀತಿಯಾದ ಮಾದ್ಯಮಗಳು ಇದ್ದರೆ ನಮ್ಮ ಸಾರ್ವಜನಿಕರಿಗೆ ಪ್ರಯೋಜನವಾಗತ್ತೆ ಎಂದು ತಿಳಿಸಿದರು.

Rating
No votes yet